100, 200 ಅಲ್ಲ.. ಮತ್ತೆ ಚೀನಾದ ಮೇಲೆ ಭಾರೀ ಪ್ರಮಾಣದ ಸುಂಕ ಏರಿಸಿದ ಅಮೆರಿಕಾ!

author-image
admin
Updated On
ಕೆರಳಿದ ಚೀನಾ, ಅಮೆರಿಕಾಗೆ ಮತ್ತೆ ಬಿಗ್​​ ಶಾಕ್.. ಏಟಿಗೆ ಎದುರೇಟು ಅಂದ್ರೆ ಇದೇ ಎಂದ ಡ್ರ್ಯಾಗನ್..!
Advertisment
  • ಅಮೆರಿಕಾ, ಚೀನಾ ಸುಂಕ ಸಮರಕ್ಕೆ ಮತ್ತೆ ಸ್ಫೋಟಕ ತಿರುವು
  • ಚೀನಾ ಆಮದುಗಳ ಮೇಲೆ ಭಾರೀ ಪ್ರಮಾಣದ ಸುಂಕ ಏರಿಕೆ
  • ಸುಂಕ ಸಮರದಲ್ಲಿ ಡೊನಾಲ್ಡ್​ ಟ್ರಂಪ್ ಮತ್ತೊಂದು ಮಹತ್ವದ ಹೆಜ್ಜೆ

ಅಮೆರಿಕಾ, ಚೀನಾ ಸುಂಕ ಸಮರಕ್ಕೆ ಇವತ್ತು ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಇನ್ಮುಂದೆ ಚೀನಾ ದೇಶವು ಅಮೆರಿಕಾಗೆ ರಫ್ತು ಮಾಡುವ ಯಾವುದೇ ವಸ್ತು, ಸರಕು ಸಾಗಾಣಿಕೆಯ ಮೇಲೆ ಶೇಕಡಾ 245ರಷ್ಟು ಸುಂಕ ಕಟ್ಟಬೇಕಾಗುತ್ತದೆ ಎಂದು ವೈಟ್ ಹೌಸ್ ಮಾಹಿತಿ ನೀಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ಏಪ್ರಿಲ್ 2ರಿಂದ ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ತೆರಿಗೆ ಯುದ್ಧ ಆರಂಭಿಸಿದ್ದಾರೆ. ವಿಶ್ವದ ಬೇರೆ ರಾಷ್ಟ್ರಗಳಿಂದ ಅಮೆರಿಕಾಗೆ ಆಮದಾಗುವ ಎಲ್ಲಾ ಉತ್ಪನ್ನಗಳ ಮೇಲೆ ದುಪ್ಪಟ್ಟು ಸುಂಕ ವಿಧಿಸಿದ್ದಾರೆ. ಆದರೆ ಇತ್ತೀಚಿಗೆ ಅಮೆರಿಕಾದ ಸುಂಕಕ್ಕೆ ಚೀನಾ ಹೊರೆತುಪಡಿಸಿ ಉಳಿದ ದೇಶಗಳ ಸುಂಕಕ್ಕೆ 90 ದಿನಗಳ ಕಾಲ ವಿರಾಮ ಘೋಷಿಸಿದ್ದಾರೆ.

ಚೀನಾ ಜಾಗತಿಕ ಮಾರುಕಟ್ಟೆಗೆ ವಿರಪರೀತ ಅಗೌರವ ತೊರುತ್ತಿದೆ ಎಂಬುದು ಡೊನಾಲ್ಡ್‌ ಟ್ರಂಪ್ ಅವರ ವಾದ. ಇದೇ ಕಾರಣದಿಂದ ಅಮೆರಿಕಾ, ಚೀನಾದ ಉತ್ಪನ್ನಗಳ ಆಮದುಗಳ ಮೇಲೆ ಶೇಕಡಾ 125ರಷ್ಟು ಸುಂಕವನ್ನು ವಿಧಿಸಿದ್ದರು. ಇಷ್ಟಾದರೂ ಅಮೆರಿಕಾದ ನೀತಿಗೆ ಜಗ್ಗದ ಚೀನಾಕ್ಕೆ ಟ್ರಂಪ್ ಸರ್ಕಾರ ಇದೀಗ ಶೇಕಡಾ 245ರಷ್ಟು ಸುಂಕ ವಿಧಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಚೀನಾ ಬಿಟ್ಟು ಉಳಿದ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಡೊನಾಲ್ಡ್​ ಟ್ರಂಪ್.. ಕಾರಣವೇನು? 

ಅಮೆರಿಕಾ, ಚೀನಾದ ಸುಂಕ ಸಮರದಿಂದ ಈಗಾಗಲೇ ಅಮೆರಿಕಾಗೆ ರಫ್ತು ಮಾಡಲಾಗುತ್ತಿರುವ ಚೀನಾ ವಸ್ತುಗಳ ಬೆಲೆ 1ಕ್ಕೆ 10ರಷ್ಟು ದುಪ್ಪಟ್ಟಾಗಿದೆ. ಈ ಮಧ್ಯೆ ಡೊನಾಲ್ಡ್‌ ಟ್ರಂಪ್ ಅವರು ಚೀನಾಕ್ಕೆ ಹೊಸ ಚೆಕ್‌ಮೇಟ್ ಇಟ್ಟಿದ್ದು, ಶೇಕಡಾ 245ರಷ್ಟು ಸುಂಕ ವಿಧಿಸಲಾಗಿದೆ. ಅಮೆರಿಕಾದ ಈ ಹೊಸ ದಾಳಕ್ಕೆ ಚೀನಾ ಮತ್ಯಾವ ತಿರುಗೇಟು ನೀಡುತ್ತೆ ಅನ್ನೋದು ಈಗ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment