/newsfirstlive-kannada/media/post_attachments/wp-content/uploads/2025/05/TRUKEY.jpg)
ಭಾರತದ ನಂಬಿಕೆಗೆ ದ್ರೋಹ ಬಗೆದಿರುವ ಟರ್ಕಿಗೆ ಸರಿಯಾಗಿ ಪಾಠ ಕಲಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗ್ತಿದೆ. ಭಾರತದಲ್ಲಿರುವ ಟರ್ಕಿ ಮೂಲದ ಕಂಪನಿಗಳಿಗೆ ಗೇಟ್ಪಾಸ್ ನೀಡಲಾಗುತ್ತಿದೆ. ಈ ಮಧ್ಯೆ ಟರ್ಕಿ ವಿಚಾರದಲ್ಲಿ ಅಮೆರಿಕದ ನಡೆ ಹೊಸ ಆತಂಕವನ್ನ ತಂದೊಡ್ಡಿದೆ.
ಏನಿದು ಸ್ಟೋರಿ..?
ಟರ್ಕಿಗೆ ಅಡ್ವಾನ್ಸ್ ಮೀಡಿಯಂ ರೇಂಜ್ ಏರ್ ಟು ಏರ್ ಮಿಸೈಲ್ (Aadvanced medium range air-to-air missile)ಗಳನ್ನು ಅಮೆರಿಕ ಮಾರಾಟ ಮಾಡ್ತಿದೆ. ಅಮೆರಿಕಾವು ಟರ್ಕಿಗೆ 225 ಮಿಲಿಯನ್ ಡಾಲರ್‌ಗೆ ಮಿಸೈಲ್ (AMRAAM missiles)ಮಾರಾಟ ಮಾಡ್ತಿದೆ.
ಭಾರತದ ತಕರಾರು ಏನು..?
ಅಮೆರಿಕದಿಂದ ಪಡೆದಿರುವ ಮಿಸೈಲ್ಗಳನ್ನು ಟರ್ಕಿ, ಪಾಕಿಸ್ತಾನಕ್ಕೆ ಕೊಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಟರ್ಕಿಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ಅಮೆರಿಕ ಪೂರೈಸಿಬಾರದು ಎಂದು ಭಾರತ ಒತ್ತಾಯಿಸಿದೆ. ಟರ್ಕಿ ಮತ್ತು ಪಾಕಿಸ್ತಾನ ಎರಡು ಮಿತ್ರ ರಾಷ್ಟ್ರಗಳು. ಯುದ್ಧದ ಸಂದಿಗ್ಧ ಪರಿಸ್ಥಿತಿಯಲ್ಲಿ ಟರ್ಕಿ ಪಾಕಿಸ್ತಾನದ ಪರ ನಿಂತಿತ್ತು.
ಮಾತ್ರವಲ್ಲ, ಮೇ 7 ರಿಂದ 10 ವರೆಗೆ ಭಾರತದ ಮೇಲೆ ಪಾಕ್ ದಾಳಿ ನಡೆಸಿತ್ತು. ಭಾರತದ ಮೇಲಿನ ದಾಳಿಗೆ ಪಾಕಿಸ್ತಾನ, ಟರ್ಕಿ ನೀಡಿದ್ದ ಡ್ರೋಣ್ಗಳನ್ನು ಬಳಸಿತ್ತು. 2019ರಲ್ಲೂ ಕೂಡ ಇದೇ ಅಡ್ವಾನ್ಸ್ ಮೀಡಿಯಂ ರೇಂಜ್ ಏರ್ ಟು ಏರ್ ಮಿಸೈಲ್ ಅನ್ನು ಭಾರತದ ವಿರುದ್ಧ ಪಾಕಿಸ್ತಾನ ಬಳಸಿದೆ.
ಇದನ್ನೂ ಓದಿ: ಮಕ್ಕಳನ್ನು ಭೇಟಿ ಆಗಲು ಬಿಡಲ್ಲ- ಪತ್ನಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ನಟ ಜಯಂ ರವಿ
ಈ ಹಿಂದೆ ಅಮೆರಿಕವು ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ಯುದ್ಧ ವಿಮಾನ ನೀಡಿತ್ತು. ಫೈಟರ್ ಜೆಟ್ಗಳನ್ನು ಭಯೋತ್ಪಾದನೆ ವಿರುದ್ಧ ನಡೆಯುವ ಕಾರ್ಯಾಚರಣೆಗೆ ಬಳಸಿಕೊಳ್ಳುವಂತೆ ಅಮೆರಿಕ ಹೇಳಿತ್ತು. ಆದರೆ ಪಾಕಿಸ್ತಾನ ಹಾಗೆ ಮಾಡಲಿಲ್ಲ. ಬದಲಾಗಿ, ಭಾರತ ಮೇಲೆ ಮಿಸೈಲ್ಗಳ ದಾಳಿಗೆ ಬಳಸಿತ್ತು. ಪಾಕಿಸ್ತಾನದಲ್ಲಿ ಎಫ್-16 ಫೈಟರ್ ಜೆಟ್ ಹೊರತುಪಡಿಸಿ ಬೇರೆ ಯಾವುದೇ ಫೈಟರ್ ಜೆಟ್ಗಳಲ್ಲಿ ಈ ಮಿಸೈಲ್ ಬಳಸಲ್ಲ.
ಹೀಗಾಗಿ ಅಮೆರಿಕವು ಟರ್ಕಿಗೆ ನೀಡತ್ತಿರುವ ಮಿಸೈಲ್ಗಳು ಪಾಕಿಸ್ತಾನಕ್ಕೆ ಹೋಗಬಹುದು. ಪಾಕಿಸ್ತಾನ ಭಾರತದ ಮೇಲೆ ಬಳಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಯನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ; ಭಾರತದ ರಕ್ಷಣಾ ಬಜೆಟ್ಗೆ 50,000 ಕೋಟಿ ರೂಪಾಯಿ ಹೆಚ್ಚಳ ಸಾಧ್ಯತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ