ಅಮೆರಿಕಾದ ಈ ಮ್ಯಾಪ್​ನಲ್ಲಿದೆ​ ಒಂದು ಲವ್ ಸ್ಟೋರಿ; ಏನೆಂದು ಹುಡುಕಿ ನೋಡೋಣ..!

author-image
Veena Gangani
Updated On
ಅಮೆರಿಕಾದ ಈ ಮ್ಯಾಪ್​ನಲ್ಲಿದೆ​ ಒಂದು ಲವ್ ಸ್ಟೋರಿ; ಏನೆಂದು ಹುಡುಕಿ ನೋಡೋಣ..!
Advertisment
  • ಆ ಒಂದು ಕಾರಣದಿಂದ ಆಕೆಯ ಜೊತೆಗೆ ಇಡೀ ದೇಶವನ್ನೇ ಸುತ್ತಾಡಿದ್ದ ವ್ಯಕ್ತಿ
  • ಮ್ಯಾಪ್​ನಲ್ಲಿ ಏನೋ ಮಾಡಲು ಹೋಗಿದ್ದ ವ್ಯಕ್ತಿಗೆ ಆಯ್ತು ಭಾರೀ ನಿರಾಸೆ
  • ಆತ್ಮೀಯವಾಗಿದ್ದ ಗೆಳತಿ ಜೊತೆಗೆ ಲಾಂಗ್​ ಡ್ರೈವ್ ಹೋಗಿದ್ದ ವ್ಯಕ್ತಿ

ಪ್ರೇಮಿಗಳು ತಮ್ಮ ಪ್ರಿಯತಮೆಗೆ ಭಿನ್ನ ವಿಭಿನ್ನವಾಗಿ ಪ್ರಪೋಸ್ ಮಾಡುವುದನ್ನು ನಾವು ನೋಡಿರುತ್ತೇವೆ. ಕೆಲವರು ತಮ್ಮ ಶತ ಪ್ರಯತ್ನದಿಂದ ಪ್ರೇಯಸಿಗೆ ಪ್ರಪೋಸ್ ಮಾಡಲು ನೋಡ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹುಡುಗಿಗೆ ಪ್ರಪೋಸ್ ಮಾಡಲು ದೊಡ್ಡ ಸಾಹಸವನ್ನೇ ಮಾಡಿಬಿಟ್ಟಿದ್ದಾನೆ. ಅದೇ ಗೂಗಲ್​ ರೂಟ್​ ಮ್ಯಾಪ್​.

publive-image

ಜನರು ಗೊತ್ತಿಲ್ಲದ ಸ್ಥಳಕ್ಕೆ ಹೋಗಬೇಕಾದರೆ ಗೂಗಲ್​ನಲ್ಲಿ ಮ್ಯಾಪ್ ಹಾಕಿಕೊಂಡು ಹೋಗುತ್ತಾರೆ. ಇದೇ ಗೂಗಲ್​ ಮ್ಯಾಪ್​ನಿಂದ ಪ್ರೇಮಿಯೊಬ್ಬ ಪ್ರೇಮ ನಿವೇದನಗೆ ಮಾಡಲು ಮುಂದಾಗಿದ್ದ. ಆತ ಸಖತ್​ ಪ್ಲಾನ್​ ಮಾಡಿ ಕಾರಿನಲ್ಲಿ ಕೂರಿಸಿ ಲಾಂಗ್ ಟ್ರಿಪ್ ಕರೆದುಕೊಂಡು ಹೋಗಿದ್ದಾನೆ. ಲಾಂಗ್​ ಅಂದ್ರೆ ಆತನು ಆಕೆಯನ್ನು ಇಡೀ ದೇಶವನ್ನು ಕಾರಿನಲ್ಲೇ ಸುತ್ತಾಡಿಸಿದ್ದಾನೆ. ಆತ ತೆರಳಿದ ರೋಡ್ ಮ್ಯಾಪ್‌ನಲ್ಲೇ ವಿಲ್ ಯು ಮ್ಯಾರಿ ಮಿ (Will you marry me) ಎಂದು ಗೆಳತಿಗೆ ಪ್ರಪೋಸ್​ ಮಾಡಿದ್ದಾನೆ.

ಇವರಿಬ್ಬರು ತಿಂಗಳುಗಳ ಕಾಲ ಪ್ರಯಾಣ ಮಾಡಿದರೂ ಗೆಳತಿ ಆತನ ಜೊತೆಗಿಲ್ಲ. ಈ ಘಟನೆ ನಡೆದಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ನಿವಾಸಿ ಡ್ಯಾನ್ ಹೆನ್‌ಶೆಲ್ (Dan Hentschel) ಆತನ ಗೆಳತಿಗೆ ‘ನೀವು ನನ್ನನ್ನು ಮದುವೆಯಾಗುತ್ತೀರಾ?’ ಎಂದು ವಿಶೇಷ ರೀತಿಯಲ್ಲಿ GPS ಮೂಲಕ ಪ್ರಪೋಸ್​ ಮಾಡಿದ್ದ. ಆದರಿದು ದೀರ್ಘಕಾಲದವರೆಗೆ ಉಳಿಯಲಿಲ್ಲ ಎಂದು ಹೆನ್‌ಶೆಲ್ ಬ್ರೇಕ್ ಅಪ್ ಬಗ್ಗೆ ಹೇಳಿಕೊಂಡಿದ್ದಾನೆ.


">August 15, 2024

publive-image

ನನಗೂ ಹಾಗೂ ಆಕೆಯ ನಡುವೆ ಆತ್ಮೀಯತೆ ಬೆಳೆದಿತ್ತು. ಇದರಿಂದ ಆಕೆಯನ್ನು ಪ್ರೀತಿ ಮಾಡಲು ಶುರು ಮಾಡಿದ್ದ. ಹೇಗಾದರೂ ಮಾಡಿ ಆಕೆಯ ಮನಸ್ಸನ್ನು ಗೆಲ್ಲಬೇಕು ಎಂದು ಪ್ಲಾನ್​ ಮಾಡಿದ್ದ. ಇದಕ್ಕಾಗಿ ಅಮೆರಿಕ ಮ್ಯಾಪ್ ಹಿಡಿದು ತಿಂಗಳುಗಳ ಕಾಲ ತಲೆ ಕೆಡಿಸಿಕೊಂಡಿದ್ದ. ತಾವಿಬ್ಬರು ಹೋಗುವ ಮಾರ್ಗ ಮಧ್ಯೆದ ರೂಟ್‌ನಲ್ಲೇ ವಿಲ್ ಯು ಮ್ಯಾರಿ ಮೀ ಎಂದು ಬರಬೇಕು ಅಂತ ಪ್ಲಾನ್​ ಮಾಡಿದ್ದ. ಹೀಗೆ ಪ್ಲಾನ್​ ಮಾಡ್ತಿದ್ದಂತೆ ಗೆಳತಿಯನ್ನು ಕೂರಿಸಿಕೊಂಡು ಕಾರು ಪ್ರವಾಸ ಆರಂಭ ಮಾಡಿದ್ದ.

publive-image

ವಿಲ್ ಯು ಮ್ಯಾರಿ ಮೀ ಎಂದು ಸ್ಪಷ್ಟವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಡೀ ಅಮೆರಿಕ ಸುತ್ತಿದ್ದಾನೆ. ರೂಟ್ ಮ್ಯಾಪ್ ಮೂಲಕ ಕೊನೆಯ ಅಕ್ಷರ ಪೂರ್ಣಗೊಳ್ಳುವವರೆಗೂ ಈತ ಸೀಕ್ರೆಟ್ ಬಿಟ್ಟುಕೊಟ್ಟಿರಲಿಲ್ಲ. ಬಳಿಕ ಟ್ರಿಪ್ ಮ್ಯಾಪ್ ನೋಡಿದರೆ ಸ್ಪಷ್ಟವಾಗಿ ವಿಲ್ ಯೂ ಮ್ಯಾರಿ ಮೀ ಎಂದು ಗೋಚರವಾಗಿದೆ. ಆಗ ಗೆಳತಿಗೆ ಜಿಪಿಎಸ್ ರೂಟ್ ಮ್ಯಾಪ್ ನೋಡುವಂತೆ ಪರೋಕ್ಷವಾಗಿ ಹೇಳಿದ್ದ. ಆಕೆಗೆ ಗೊತ್ತಾಗದೆ ಇದ್ದಾಗ ಗೆಳತಿಗೆ ಹೇಗೋ ಈ ವಿಚಾರವನ್ನು ತಿಳಿಸಿದ್ದಾನೆ. ಆದರೆ ಗೆಳತಿ ಇದಕ್ಕೆ ಸಮ್ಮತಿ ನೀಡದೇ ದೂರವಾಗಿದ್ದಾಳೆ. ನಾವಿಬ್ಬರು ಜೊತೆಯಾಗಿ ಇರುವುದು ಒಳ್ಳಯದಲ್ಲ ಎಂದು ಹೆನ್‌ಶೆಲ್ ಹೇಳಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment