/newsfirstlive-kannada/media/post_attachments/wp-content/uploads/2025/05/Indian-Pak-US-Trump.jpg)
ಇಬ್ಬರ ಜಗಳ ಮೂರನೇಯವನಿಗೆ ಲಾಭ. ಭಾರತ-ಪಾಕಿಸ್ತಾನದ ನಡುವೆ ಅಮೆರಿಕ ಡಬಲ್ ಗೇಮ್ ಆಡಿದೆ. ಈ ಬಗ್ಗೆ ಅನುಮಾನವೇ ಬೇಡ. ಭಾರತ-ಪಾಕ್ ಯುದ್ಧದಲ್ಲಿ ಟ್ರಂಪ್ ಆಡಿರೋ ಚದುರಂಗ ಚೆನ್ನಾಗಿ ಗೊತ್ತಾಗ್ತಿದೆ. ನಂಬಿದವರೇ ಕತ್ತು ಸೀಳ್ತಾರೆ ಅಂತ ಮತ್ತೆ ಪ್ರೂವ್ ಆಗಿದೆ.
ಇದನ್ನೂ ಓದಿ:IPL ಅಭಿಮಾನಿಗಳಿಗೆ ಗುಡ್ ನ್ಯೂಸ್.. ಹೊಸ ವೇಳಾಪಟ್ಟಿ ಬಿಡುಗಡೆ; RCB ಪಂದ್ಯ ಯಾವಾಗ?
ಅಮೆರಿಕಾ ಮಲಗಿರಬೇಕಾದ್ರೆ ಹೊಡೆದು ಎದ್ದ ಮೇಲೆ ಸಮಾಧಾನ ಮಾಡೋ ಕೆಲಸ ಮಾಡಿದೆ.
ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಸೂಟ್ ಆಗಿತ್ತು. ದೊಡ್ಡಣ್ಣ ಅಂದ್ರೆ ನ್ಯಾಯದ ಪರ ನಿಲ್ಲುವವನು ಅಂತ. ಆದ್ರೆ ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳೋ ಅಮೆರಿಕ ಕಳ್ಳ ಆಗಿ ಬದಲಾಗಿದೆ. ಮಾಡಿರೋ ಕಳ್ಳತನಕ್ಕೂ ಕ್ರೆಡಿಟ್ ಪಡೆಯೋದಕ್ಕೆ ಟ್ರಂಪ್ ಮುಂದಾಗಿದ್ದಾರೆ. ಆಪರೇಷನ್ ಸಿಂಧೂರದ ಬಳಿಕ ಭಾರತ-ಪಾಕ್ ನಡುವೆ ಮಧ್ಯಸ್ಥಿಕೆ ವಹಿಸ್ತೀನಿ ಅಂತ ಬಂದಿರೋ ದೊಡ್ಡಣ್ಣ ಅಮೆರಿಕದ ಡಬಲ್ಗೇಮ್ ಬಯಲಾಗಿದೆ. ಭಾರತ-ಪಾಕ್ ನಡುವಿನ ಯುದ್ಧ ನಿಲ್ಲಿಸಿದ್ದೀವಿ ಅಂತ ಕ್ರೆಡಿಟ್ ಪಡೆಯು ಹಪಾಹಪಿಸ್ತಿರೋ ಡೊನಾಲ್ಡ್ ಟ್ರಂಪ್, ಕದನ ವಿರಾಮ ಮಾಡದಿದ್ರೆ ವ್ಯಾಪಾರ ನಿಲ್ಲಿಸುತ್ತೇನೆ ಅಂತ ಬ್ಲ್ಯಾಕ್ ಮೇಲೆ ಮಾಡಿದ್ದಾರೆ.
ನಾವು ಬಹಳಷ್ಟು ಸಹಾಯ ಮಾಡಿದ್ದೇವೆ ಮತ್ತು ವ್ಯಾಪಾರಕ್ಕೂ ಸಹಾಯ ಮಾಡಿದ್ದೇವೆ ಎಂದು ನಾನು ಹೇಳಿದೆ. ಬನ್ನಿ, ನಾವು ನಿಮ್ಮೊಂದಿಗೆ ಬಹಳಷ್ಟು ವ್ಯಾಪಾರ ಮಾಡುತ್ತೇವೆ. ಇದನ್ನು ನಿಲ್ಲಿಸೋಣ. ನಿಲ್ಲಿಸೋಣ ಅಂತ ಕರೆ ನೀಡಿದ್ದೆ. ನೀವು ಉದ್ವಿಗ್ನ ಪರಿಸ್ಥಿತಿ ನಿಲ್ಲಿಸಿದರೆ ಮಾತ್ರ ನಾವು ವ್ಯಾಪಾರ ಮಾಡುತ್ತಿದ್ದೇವೆ. ನೀವು ಅದನ್ನು ನಿಲ್ಲಿಸದಿದ್ದರೆ, ನಾವು ಯಾವುದೇ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿದ್ದೆ. ನಿಮ್ಮೊಂದಿಗೆ ವ್ಯಾಪಾರವನ್ನು ಮುಂದುವರಿಸಬೇಕಾದರೆ, ಇದನ್ನು ಕೂಡಲೇ ನಿಲ್ಲಿಸಿ ಎಂದು ನಾನು ಹೇಳಿದ್ದೆ. ಅನಂತರ ಇಬ್ಬರೂ ದಾಳಿಗಳನ್ನು ನಿಲ್ಲಿಸಿದ್ದಾರೆ.
ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಇದು ನಿನ್ನೆ ಟಾಕ್.. ಆದ್ರೆ ಕಳೆದ ಶನಿವಾರ ಭಾರತ ಯುದ್ಧ ವಿರಾಮ ಘೋಷಿಸೋದಕ್ಕೂ ಮೊದಲೇ ಡೊನಾಲ್ಡ್ ಟ್ರಂಪ್, ಮೇ 10ರ ಸಂಜೆ ಹೆಡ್ ಮಾಸ್ಟರ್ ಅಂತೆ ವರ್ತಿಸಿ, ಪಾಕಿಸ್ತಾನ ಅಥವಾ ಭಾರತದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬೀಳುವ ಮುನ್ನವೇ ಟ್ರಂಪ್ ಕದನ ವಿರಾಮ ಒಪ್ಪಂದ ಘೋಷಣೆ ಮಾಡಿದ್ದರು. ಇದರಲ್ಲೇ ಗೊತ್ತಾಗ್ತಿದೆ ಟ್ರಂಪ್ ಕ್ರೆಡಿಟ್ ಕಳ್ಳಾಟದಲ್ಲಿ ನಿಸ್ಸೀಮ ಅಂತ. ಇನ್ನೂ ಶಾಶ್ವತ ಕದನ ವಿರಾಮ ಘೊಷಣೆಯಾಗಿದೆ ಎಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಸೈಲೆಂಟ್ ಆಗಿ ಟಾಂಗ್ ನೀಡಿದ್ದಾರೆ.
ಇದು ಶಾಶ್ವತ ಕದನ ವಿರಾಮ ಅಲ್ಲ. ಬದಲಾಗಿ ಇದು ತಾತ್ಕಾಲಿಕ ಕದನ ವಿರಾಮ. ಯಾವಾಗ ಬೇಕಾದ್ರೂ ಪಾಕಿಸ್ತಾನದ ವಿರುದ್ಧ ನಾವು ದಾಳಿ ನಡೆಸಬಹುದು.
ನರೇಂದ್ರ ಮೋದಿ, ಭಾರತದ ಪ್ರಧಾನಿ
ಇಷ್ಟೇ ಅಲ್ಲ ಅಮೆರಿಕಾ ಭಾರತಕ್ಕೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡಿದೆ. ಅಮೆರಿಕಾದ ಮ್ಯಾಕ್ಸಾರ್ ಕಂಪನಿ ಪಹಲ್ಗಾಮ್‌ನ ಸ್ಯಾಟ್ಲೈಟ್ ಇಮೇಜ್ ಅನ್ನ ಮಾರಾಟ ಮಾಡಿದೆ. ಅಮೆರಿಕಾದ ಈ ಕಂಪನಿ ಪಾಕ್ನ ನಿಷೇಧಿತ ಕಂಪನಿಗೆ ಈ ಇಮೇಜ್‌ಗಳನ್ನ ಮಾರಾಟ ಮಾಡಿದ್ದು, ಅವು ಉಗ್ರರ ದಾಳಿಗೆ ನೆರವಾಗಿವೆ ಎಂದು ಹೇಳಲಾಗ್ತಿದೆ.
ಇದರಿಂದ ಮೋದಿ ನಮ್ಮ ಗೆಳೆಯ ಅಂತಿರೋ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ಪಾಕಿಸ್ತಾನದ ಉಗ್ರ ಕೃತ್ಯಕ್ಕೆ ನೆರವಾಗಿದ್ದು ಡಬಲ್ ಗೇಮ್ ಬಯಲಾಗಿದೆ. ಭಾರತ-ಪಾಕಿಸ್ತಾನ ವಿಚಾರದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಮೂರನೇ ವ್ಯಕ್ತಿ ಮಧ್ಯಪ್ರವೇಶಿಸಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ