/newsfirstlive-kannada/media/post_attachments/wp-content/uploads/2025/01/JET-1.jpg)
ಅಮೆರಿಕದಿಂದ ಭೀಕರ ವಿಮಾನ ಅಪಘಾತದ (Flight accident) ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ, ಬುಧವಾರ (US time), ವಾಷಿಂಗ್ಟನ್‌ನ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Reagan Washington National Airport ) ಲ್ಯಾಂಡಿಂಗ್ ಸಮಯದಲ್ಲಿ ಪ್ರಯಾಣಿಕರ ವಿಮಾನವು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಗಾಗಿ ಕ್ಯಾಪ್ಟನ್ನಿಂದ ದೊಡ್ಡ ತ್ಯಾಗ.. ಆಯುಷ್ ಬದೋನಿ ಅಚ್ಚರಿ ಮಾಹಿತಿ..!
ಪರಿಣಾಮ ವಿಮಾನ ನಿಲ್ದಾಣದಿಂದ ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಅಪಘಾತ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯದಲ್ಲಿ ಭದ್ರತಾ ಪಡೆ ತೊಡಗಿದೆ.
ಅಪಘಾತ ಹೇಗೆ ಆಗಿದೆ..?
ಅಮೆರಿಕದ ಫೆಡರಲ್ ಏವಿಯೇಷನ್ (ಎಫ್‌ಎಎ) ಪ್ರಕಾರ.. ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರ ವಿಮಾನ ಲ್ಯಾಂಡಿಗ್ ಆಗ್ತಿದ್ದಾಗ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಕುರಿತು ತನಿಖೆ ನಡೆಸಲಾಗುತ್ತಿದೆ. ದುರ್ಘಟನೆಯಲ್ಲಿ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ವಿಮಾನದಲ್ಲಿ ಒಟ್ಟು 60 ಪ್ರಯಾಣಿಕರು ಎನ್ನಲಾಗಿದೆ.
ಇದನ್ನೂ ಓದಿ: CCL; ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಯಾರ್ ಯಾರಿಗೆ ಚಾನ್ಸ್.. ಟ್ರೋಫಿಗೆ ಗುರಿ ಇಟ್ಟ ಕಿಚ್ಚನ ಹೊಸ ಹುರುಪು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ