ಉಗ್ರರಿಗೆ ಪಹಲ್ಗಾಮ್‌ ಸ್ಯಾಟ್​​ಲೈಟ್‌ ಫೋಟೋ ಮಾರಾಟ? ಭಾರತ, ಪಾಕ್ ಮಧ್ಯೆ ಅಮೆರಿಕಾ ಡಬಲ್‌ ಗೇಮ್​?

author-image
admin
Updated On
ಉಗ್ರರಿಗೆ ಪಹಲ್ಗಾಮ್‌ ಸ್ಯಾಟ್​​ಲೈಟ್‌ ಫೋಟೋ ಮಾರಾಟ? ಭಾರತ, ಪಾಕ್ ಮಧ್ಯೆ ಅಮೆರಿಕಾ ಡಬಲ್‌ ಗೇಮ್​?
Advertisment
  • ಪಾಕ್​ನ ನಿಷೇಧಿತ ಕಂಪನಿಗೆ ಈ ಇಮೇಜ್‌ಗಳು ಮಾರಾಟ
  • ಏಪ್ರಿಲ್​ 22ಕ್ಕೂ 10 ದಿನದ ಮೊದಲೇ ಖರೀದಿ ಮಾಡಿದ್ದರು
  • ದಾಳಿಗೂ ಮುನ್ನ 20-30 ಸ್ಯಾಟ್​ಲೈಟ್ ಇಮೇಜ್ ಆರ್ಡರ್!

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಭಾರತ, ಪಾಕಿಸ್ತಾನದ ಮಧ್ಯೆ ಅಲ್ಲೋಲ, ಕಲ್ಲೋಲವನ್ನೇ ಸೃಷ್ಟಿಸಿದೆ. ಆಪರೇಷನ್ ಸಿಂಧೂರದ ಬಳಿಕ 2 ದೇಶಗಳ ಮಧ್ಯೆ ಸಂಧಾನ ನಡೆಸಿದ್ದೇವೆ ಅಂತ ಅಮೆರಿಕಾ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದೆ. ಆದರೆ ಸಂಘರ್ಷದ ಮಧ್ಯೆ ಅಮೆರಿಕಾವೇ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣ ಉಗ್ರರಿಗೆ ಸಿಕ್ಕಿರುವ ಪಹಲ್ಗಾಮ್‌ನ ಸ್ಯಾಟ್‌ಲೈಟ್ ಫೋಟೋಗಳು.

ಅಮೆರಿಕಾದ ಮ್ಯಾಕ್ಸಾರ್ ಕಂಪನಿ ಪಹಲ್ಗಾಮ್‌ನ​ ಸ್ಯಾಟ್​ಲೈಟ್ ಇಮೇಜ್ ಅನ್ನು ಮಾರಾಟ ಮಾಡಿದೆ. ಅಮೆರಿಕಾದ ಈ ಕಂಪನಿ ಪಾಕ್​ನ ನಿಷೇಧಿತ ಕಂಪನಿಗೆ ಈ ಇಮೇಜ್‌ಗಳನ್ನ ಮಾರಾಟ ಮಾಡಿದ್ದೇಕೆ ಅನ್ನೋ ಅನುಮಾನ ಹೆಚ್ಚಾಗಿದೆ.

publive-image

ಪಹಲ್ಗಾಮ್‌ ದಾಳಿ ಉಗ್ರರು ಮಾಸ್ಟರ್ ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದರು. ಉಗ್ರರಿಗೆ ಪಹಲ್ಗಾಮ್‌ನ ಎಂಟ್ರಿ ಹೇಗೆ? ಎಕ್ಸಿಟ್‌ನ ಬಗ್ಗೆ ಎಲ್ಲಾ ಮಾಹಿತಿ ಸಿಕ್ಕಿದ್ದು ಹೇಗೆ? ಉಗ್ರರಿಗೆ ಬ್ಲೈಂಡ್ ಸ್ಪಾಟ್ಸ್​ ಬಗ್ಗೆ ಪಕ್ಕಾ ಮಾಹಿತಿ ಇತ್ತು ಎನ್ನಲಾಗಿದೆ.

ಭಾರತೀಯ ಮೇಲೆ ಉಗ್ರರ ದಾಳಿಗೂ ಎರಡು ವಾರದ ಮುನ್ನ ಪಹಲ್ಗಾಮ್​ ಇಮೇಜ್​ಗೆ ಹೆಚ್ಚು ಬೇಡಿಕೆ ಇತ್ತು. ಒಂದೇ ತಿಂಗಳಲ್ಲಿ ಮೂವತ್ತು ಫೋಟೋ ಆರ್ಡರ್​ ಮಾಡಿದೆ. 2024 ಜೂನ್‌ವರೆಗೂ ಪಹಲ್ಗಾಮ್ ಜಾಗದ ಚಿತ್ರ ಮ್ಯಾಕ್ಸಾರ್ ಮ್ಯಾಪ್​ನಲ್ಲಿ ಇರಲಿಲ್ಲ. 2024ರಿಂದ 2025 ಫೆಬ್ರವರಿವರೆಗೂ 30 ಸ್ಯಾಟ್​ಲೈಟ್ ಇಮೇಜ್​ಗೆ ಆರ್ಡರ್​ ಸಿಕ್ಕಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ ಸಕ್ಸಸ್ ಹಿಂದೆ ಇಸ್ರೋ ಪ್ರಮುಖ‌ ಪಾತ್ರ; ವಿಜ್ಞಾನಿಗಳು ನೆರವಾಗಿದ್ದು ಹೇಗೆ? 

ಪಹಲ್ಗಾಮ್‌ ದಾಳಿಗೆ 10 ದಿನದ ಹಿಂದೆ ಸ್ಯಾಟಲೈಟ್ ಚಿತ್ರವನ್ನು ಪಾಕ್ ಕಂಪನಿ ಪಡೆದಿದೆ. ಪಹಲ್ಗಾಮ್ ದಾಳಿಗೂ ಮುನ್ನ ಅಂದ್ರೆ ಏಪ್ರಿಲ್​ 22ಕ್ಕೂ 10 ದಿನದ ಮುನ್ನವೇ ಪಹಲ್ಗಾಮ್ ಸ್ಯಾಟ್​ಲೈಟ್ ಚಿತ್ರಗಳನ್ನ ಉಗ್ರರು ಖರೀದಿ ಮಾಡಿದ್ದಾರೆ.

publive-image

ಒಂದೊಂದು ಫೋಟೋಗೂ ಕೋಟಿ, ಕೋಟಿ ಖರ್ಚು!
ಅಮೆರಿಕಾದ ಮ್ಯಾಕ್ಸಾರ್​​ನಿಂದ ಒಂದು ಫೋಟೋ ಪಡೆಯಬೇಕಾದ್ರೆ ಬರೋಬ್ಬರಿ 3ರಿಂದ 4 ಲಕ್ಷ ರೂಪಾಯಿ ಬೇಕು. HD ಫೋಟೋ ಬೇಕು ಅಂದ್ರೆ ಅದ್ರಂತೆ ರೇಟ್ ಹೆಚ್ಚಾಗುತ್ತೆ. ಹೀಗಿರುವಾಗ ದಾಳಿಗೂ ಮುನ್ನ 20-30 ಸ್ಯಾಟ್​ಲೈಟ್ ಇಮೇಜ್ ಆರ್ಡರ್ ಮಾಡಿರೋದು ಯಾಕೆ? ಕೋಟಿ ಕೋಟಿ ಖರ್ಚು ಮಾಡಿ ಪಹಲ್ಗಾಮ್​ನಲ್ಲಿ ನೋಡೋದೇನಿತ್ತು? ಅನ್ನೋ ಅನುಮಾನಗಳಿವೆ.

publive-image

ಬ್ಯಾನ್ ಆಗಿದ್ದ ಕಂಪನಿಗೆ ಫೋಟೋ ಮಾರಾಟ?
ಪಾಕ್ ಮೂಲದ ಬಿಎಸ್​ಐ ಕಂಪನಿ ಅಮೆರಿಕಾದಲ್ಲೇ ನಿಷೇಧಕ್ಕೆ ಒಳಗಾಗಿತ್ತು. ಶಿಖಾಗೋದಲ್ಲಿ ಬಿಎಸ್​ಐ ನಡೆಸ್ತಿದ್ದ ಒಬೈದುಲ್ಲ ಸೈ ಅಕ್ರಮವಾಗಿ ಕಂಪ್ಯೂಟರ್ ಎಕ್ಸ್‌ಪೋರ್ಟ್ ಮಾಡಿದ್ದಕ್ಕೆ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ಇನ್ನೂ ದುರಂತ ಏನಂದ್ರೆ ಇದೇ ಒಬೈದುಲ್ಲ ಅಮೆರಿಕಾದ ಮ್ಯಾಕ್ಸರ್ ಕಂಪನಿಗೆ ಪಾರ್ಟನರ್ ಆಗಿದ್ದಾನೆ. ಇದರಿಂದಲೇ ಪಹಲ್ಗಾಮ್ ದಾಳಿಯ ಹಿಂದೆ ನೇರವಾಗಿ ಪಾಕಿಸ್ತಾನ ಕೈವಾಡ ಇರೋದು ಸಾಬೀತಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment