/newsfirstlive-kannada/media/post_attachments/wp-content/uploads/2025/04/Nikita-Kashyap-Trump-Case-1.jpg)
ನಿಕಿತಾ ಕಶ್ಯಪ್ ಅನ್ನೋ ಈ 17 ವರ್ಷದ ಮೀಸೆ ಚಿಗುರದ ಯುವಕ ಅಮೆರಿಕಾದಲ್ಲಿ ಸಂಚಲನ ಸೃಷ್ಟಿಸಿದ್ದಾನೆ. ಇವನ ಕ್ರೌರ್ಯದ ಅಟ್ಟಹಾಸಕ್ಕೆ ಇವನನ್ನು ಹೆತ್ತ ತಂದೆ, ತಾಯಿಯೇ ಬಲಿಯಾಗಿದ್ದಾರೆ. ಅಮೆರಿಕಾ ಪೊಲೀಸರ ತನಿಖೆಯಲ್ಲಿ ಈ ರಕ್ತಪಾತದ ಭಯಾನಕ ರಹಸ್ಯ ದಂಗಾಗುವಂತೆ ಮಾಡಿದೆ.
17 ವರ್ಷದ ನಿಕಿತಾ ಕಶ್ಯಪ್ ಎಂಬ ಈ ಯುವಕನ ಅಸಲಿ ಟಾರ್ಗೆಟ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತೆ. ಡೊನಾಲ್ಡ್ ಟ್ರಂಪ್ ಹತ್ಯೆಗೈದು ಅಮೆರಿಕಾ ಸರ್ಕಾರವನ್ನೇ ಉರುಳಿಸಲು ಈತ ಸಂಚು ಮಾಡಿದ್ದಾನೆ. ತನ್ನ ಮಾಸ್ಟರ್ ಪ್ಲಾನ್‌ನ ಭಾಗವಾಗಿ ಮೊದಲ ಹಂತದಲ್ಲಿ ತಂದೆ, ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಯಾರಿವನು?
ಅಮೆರಿಕಾ ವಿಸ್ಕನ್ಸಿನ್ ರಾಜ್ಯದ ನಿಕಿತಾ ಕಶ್ಯಪ್ ತನ್ನ ತಾಯಿ ತಾತಿಯಾನ ಕಶ್ಯಪ್ ಹಾಗೂ ಮಲತಂದೆ ಡೊನಾಲ್ಡ್ ಮಯಾರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ನಿಕಿತಾ ವಿಧ್ವಂಸಕ ಕೃತ್ಯದ ಹಿಂದಿನ ಕಾರಣ ಏನು ಅನ್ನೋದು ಗೊತ್ತಾಗಿದೆ.
ನಿಕಿತಾನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದ ಪೊಲೀಸರಿಗೆ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿದೆ. ನಿಕಿತಾ ಕಶ್ಯಪ್ ತನ್ನ ತಂದೆ, ತಾಯಿಯನ್ನು ಕೊಲೆ ಮಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣ. ಪೋಷಕರ ಹತ್ಯೆಯಿಂದ ಹಣ ಸಂಗ್ರಹಿಸಿ, ತಾನು ಸ್ವತಂತ್ರವಾಗಿ ಡೊನಾಲ್ಡ್ ಟ್ರಂಪ್ ಹತ್ಯೆ ಮಾಡುವ ಪ್ಲಾನ್ ಈತನಿಗಿತ್ತು.
ಪೊಲೀಸರಿಗೆ ಬಿಗ್ ಶಾಕ್!
ನಿಕಿತಾ ಕಶ್ಯಪ್ ಬಳಿಯಿದ್ದ ಲಿಖಿತ ದಾಖಲೆಗಳು, ಮೆಸೇಜ್‌ಗಳಲ್ಲಿ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಈ ಯುವಕ ಉಗ್ರಗಾಮಿ ಮನಸ್ಥಿತಿಯ ಜನರ ಜೊತೆಗೆ ಸಂಭಾಷಣೆ ನಡೆಸಿದ್ದು, ಫೋನ್‌ನಲ್ಲಿ ನಿಯೋ ನಾಜಿ ಗ್ರೂಪ್ ಜೊತೆಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಅಮೆರಿಕಾ ಅಧ್ಯಕ್ಷರು, ಉಪಾಧ್ಯಕ್ಷರನ್ನ ಹತ್ಯೆಗೈದರೆ ಅಮೆರಿಕಾದಲ್ಲಿ ಅರಾಜಕತೆ ಸೃಷ್ಟಿ ಆಗುತ್ತೆ. ಹಿಂಸಾತ್ಮಕ ಕ್ರಾಂತಿಯ ತನ್ನ ಪ್ಲಾನ್ ಬಗ್ಗೆ ನಿಕಿತಾ ಚರ್ಚೆ ನಡೆಸುತ್ತಿದ್ದ. ಜರ್ಮನಿಯ ಸರ್ವಾಧಿಕಾರಿ ಅಡಾಲ್ಪ್ ಹಿಟ್ಲರ್ ಫೋಟೋ, ಹಿಟ್ಲರ್ ಅನ್ನು ಹೊಗಳಿದ ಅಂಶಗಳು ಮೊಬೈಲ್‌ನಲ್ಲಿ ಪತ್ತೆ ಆಗಿದೆ.
ಇದನ್ನೂ ಓದಿ: ಕೆರಳಿದ ಚೀನಾ, ಅಮೆರಿಕಾಗೆ ಮತ್ತೆ ಬಿಗ್ ಶಾಕ್.. ಏಟಿಗೆ ಎದುರೇಟು ಅಂದ್ರೆ ಇದೇ ಎಂದ ಡ್ರ್ಯಾಗನ್..!
17 ವರ್ಷದ ಯುವಕನ ಈ ಮಾಸ್ಟರ್ ಪ್ಲಾನ್ ಕೇಳಿ ಅಮೆರಿಕಾ ಪೊಲೀಸರೇ ದಂಗಾಗಿದ್ದಾರೆ. ತಮ್ಮ ದೇಶದಲ್ಲೇ ತಮ್ಮ ದೇಶದ ಅಧ್ಯಕ್ಷರ ಹತ್ಯೆಗೆ ಸಂಚು ರೂಪಿಸಿದ್ದಾನೆ. ಶಸ್ತ್ರಾಸ್ತ್ರ ಬಳಸಿ ಸಾಮೂಹಿಕ ಹತ್ಯೆಗೂ ಪ್ಲಾನ್ ರೂಪಿಸಿದ್ದು ಕೇಳಿ ಶಾಕ್ ಆಗಿದ್ದಾರೆ. ಸದ್ಯ ಅಮೆರಿಕಾದ ಪೊಲೀಸರ ವಶದಲ್ಲಿರುವ ನಿಕಿತಾ ಕಶ್ಯಪ್ ವಿರುದ್ಧ ತನಿಖೆ ಮುಂದುವರಿದೆ. ಪೊಲೀಸರು ಮೇ. 7ರಂದು ನಿಕಿತಾ ವಿರುದ್ಧ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ