‘ಚಿನ್ನ’ವಾದ ಮೊಟ್ಟೆ.. ಬಾಡಿಗೆ ಕೋಳಿಗಳಿಗೆ ಮುಗಿಬಿದ್ದ ಅಮೆರಿಕಾ ನಿವಾಸಿಗಳು; ಕಾರಣವೇನು?

author-image
admin
Updated On
‘ಚಿನ್ನ’ವಾದ ಮೊಟ್ಟೆ.. ಬಾಡಿಗೆ ಕೋಳಿಗಳಿಗೆ ಮುಗಿಬಿದ್ದ ಅಮೆರಿಕಾ ನಿವಾಸಿಗಳು; ಕಾರಣವೇನು?
Advertisment
  • ಕೋಳಿಗಳನ್ನೂ ಬಾಡಿಗೆಗೆ ಪಡೆದ್ರೆ ಅಮೆರಿಕನ್ನರಿಗೆ ಹೆಚ್ಚು ಲಾಭ!
  • ಮೊಟ್ಟೆಗೆ ದುಬಾರಿ ಬೆಲೆ ಕೊಡುವ ಬದಲು ಬಾಡಿಗೆ ಕೋಳಿ ಬೆಸ್ಟ್
  • ಅಮೆರಿಕದ ಆಹಾರ ಕ್ರಮದಲ್ಲಿ ಮೊಟ್ಟೆಗೆ ಬಹಳ ಪ್ರಾಮುಖ್ಯತೆ

ಅಮೆರಿಕದಲ್ಲಿ ಮೊಟ್ಟೆಗೂ ಒಂದು ಕಾಲ ಬಂದಿದೆ. ಮೊಟ್ಟೆಗಳೇ ಸಿಗದೆ ಪರದಾಡುತ್ತಿರುವ ಅಮೆರಿಕನ್ನರು ಬಾಡಿಗೆ ಕೋಳಿಗಳತ್ತ ಮುಖ ಮಾಡಿದ್ದಾರೆ. ಅಮೆರಿಕಾದ ಬಾಡಿಗೆ ಕೋಳಿ ಮತ್ತು ಮೊಟ್ಟೆಯ ಸುದ್ದಿ ಸದ್ಯ ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದೆ.

ಅಮೆರಿಕದಲ್ಲಿ ಜನರು ಕೋಳಿಗಳನ್ನೂ ಬಾಡಿಗೆಗೆ ಪಡೆದು ಸಾಕುತ್ತಿದ್ದಾರೆ. ಕಾರಣ ಏನಂದ್ರೆ ಅಮೆರಿಕದಲ್ಲಿ ಮೊಟ್ಟೆ ಬೆಲೆ ಸಖತ್ ದುಬಾರಿಯಾಗಿದೆ. ಒಂದು ಕಾರ್ಟನ್ ಬೆಲೆ ಸರಾಸರಿಯಾಗಿ 5 ಡಾಲರ್ ಇದೆ. ಕೆಲ ನಗರಗಳಲ್ಲಿ ಡಜನ್ ಮೊಟ್ಟೆಗೆ 10 ಡಾಲರ್ ಕೂಡ ತಲುಪಿದೆ.

12 ಮೊಟ್ಟೆಗೆ 10 ಡಾಲರ್ ಅಂದ್ರೆ ಒಂದು ಮೊಟ್ಟೆಗೆ ಹತ್ತಿರ ಹತ್ತಿರ 72 ರೂಪಾಯಿ ಆಗಿದೆ. ಅಮೆರಿಕದ ಆಹಾರ ಕ್ರಮದಲ್ಲಿ ಮೊಟ್ಟೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇಷ್ಟು ದುಬಾರಿ ಬೆಲೆ ಕೊಟ್ಟು ಮೊಟ್ಟೆ ಖರೀದಿಸುವ ಬದಲು ಅಮೆರಿಕನ್ನರು ಈಗ ಕೋಳಿಗಳನ್ನೇ ಬಾಡಿಗೆಗೆ ಪಡೆಯುತ್ತಿದ್ದಾರೆ.

publive-image

ಬಾಡಿಗೆ ಕೋಳಿಗೆ ಡಿಮ್ಯಾಂಡ್‌!
ಅಮೆರಿಕದಲ್ಲಿ ಬಾಡಿಗೆಗೆ ಕೋಳಿ ಪಡೆಯುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಇದು ಆಶ್ಚರ್ಯಕ್ಕೆ ಕಾರಣವಾದರೂ ಅಮೆರಿಕಾ ನಾಗರಿಕರಿಗೆ ಅನಿವಾರ್ಯ ಕೂಡ ಆಗಿದೆ. ಕಳೆದ ಜನವರಿಯಿಂದ ಅಮೆರಿಕಾದಲ್ಲಿ ಮೊಟ್ಟೆ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 15ರಷ್ಟು ಏರಿಕೆ ಕಂಡಿದೆ.

ಒಂದು ಮೊಟ್ಟೆಗೆ 70 ರೂಪಾಯಿ ಕೊಟ್ಟು ಕೊಳ್ಳಲು ಆಗದ ಗ್ರಾಹಕರು ಬಾಡಿಗೆಗೆ ಕೋಳಿಗಳನ್ನು ಪಡೆಯಲು ಮುಂದಾಗುತ್ತಿದ್ದಾರೆ. ಆರೋಗ್ಯಕರ ಕೋಳಿಗಳು ಒಂದು ವಾರಕ್ಕೆ 5 ಮೊಟ್ಟೆಗಳನ್ನು ನೀಡುತ್ತವೆ. ಮೊಟ್ಟೆ ಕೊಳ್ಳುವ ಬದಲು ಬಾಡಿಗೆಗೆ ಕೋಳಿಗಳು ಸಿಕ್ಕರೆ ಹೆಚ್ಚು ಲಾಭವಾಗುತ್ತಿದೆ.

ಮೊಟ್ಟೆ ಕೊರತೆಗೆ ಕಾರಣವೇನು?
ಅಮೆರಿಕಾದ ಸೂಪರ್ ಮಾರ್ಕೆಟ್ ಮತ್ತು ಮಾಲ್‌ಗಳಲ್ಲಿ ಮೊಟ್ಟೆಗಳು ದುಡ್ಡು ಕೊಟ್ಟರೂ ಸಿಗುತ್ತಿಲ್ಲ. ಸೂಪರ್ ಮಾರ್ಕೆಟ್‌ಗಳಲ್ಲಿ ಮೊಟ್ಟೆಗಳು ಸೋಲ್ಡ್‌ ಔಟ್‌ ಆಗುತ್ತಾ ಇದೆ. ಮೊಟ್ಟೆ ಖರೀದಿಸಲು ಗ್ರಾಹಕರಿಗೆ ಮಿತಿಗಳನ್ನು ಹಾಕಿರೋ ಬೋರ್ಡ್‌ಗಳನ್ನು ಹಾಕಲಾಗಿದೆ.

publive-image

ಇತ್ತೀಚೆಗೆ ಅಮೆರಿಕಾದ ಕೋಳಿ ಫಾರಂಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಲಕ್ಷ, ಲಕ್ಷ ಕೋಳಿಗಳ ಮಾರಣಹೋಮ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೊಟ್ಟೆಗಳ ಅಭಾವ ಎದುರಾಗಿದ್ದು, ಬೆಲೆ ಕೂಡ ದಿಢೀರನೇ ಏರಿಕೆ ಕಂಡಿದೆ.

ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ಹೊಸ ವೈರಸ್.. ದೊಡ್ಡ ಸಾಂಕ್ರಾಮಿಕದ ಎಚ್ಚರಿಕೆ ಕೊಟ್ಟ ವಿಜ್ಞಾನಿಗಳು..! 

ಕೋಳಿಗಳಿಗೆ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಮೊಟ್ಟೆಗಳ ಬೆಲೆ ದಾಖಲೆ ಮಟ್ಟಕ್ಕೆ ಹೋಗಿದೆ. ಅಮೆರಿಕಾ ಸದ್ಯ ಹಕ್ಕಿ ಜ್ವರ ನಿಯಂತ್ರಿಸುವ ವಾಕ್ಸಿನ್ ಸರಬರಾಜು ಮಾಡಲು ಮುಂದಾಗಿದೆ. ತಾತ್ಕಾಲಿಕ ಬೇಡಿಕೆಯನ್ನು ಪೂರೈಸಲು ಟರ್ಕಿ ದೇಶದಲ್ಲಿ ಸುಮಾರು 15 ಸಾವಿರ ಮೊಟ್ಟೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment