10 ದಿನದಿಂದ ಇಸ್ರೇಲ್​ನಿಂದ ಆಗದಿದ್ದನ್ನ, ಒಂದೇ ಒಂದು ರಾತ್ರಿಯಲಿ ಮಾಡಿ ಮುಗಿಸಿದ ಅಮೆರಿಕ

author-image
Bheemappa
Updated On
10 ದಿನದಿಂದ ಇಸ್ರೇಲ್​ನಿಂದ ಆಗದಿದ್ದನ್ನ, ಒಂದೇ ಒಂದು ರಾತ್ರಿಯಲಿ ಮಾಡಿ ಮುಗಿಸಿದ ಅಮೆರಿಕ
Advertisment
  • 30 ಟೊಮಾಹಾಕ್ ಕ್ಷಿಪಣಿಗಳೊಂದಿಗೆ ಜಲಂತರ್ಗಾಮಿ ಅಟ್ಯಾಕ್
  • ಅಮೆರಿಕ ದಾಳಿ, ಇರಾನ್‌ಗೆ ಪಾಠವಾಗುತ್ತಾ ಇಲ್ವಾ ತೀವ್ರಗೊಳ್ಳುತ್ತಾ?
  • ವಿಶ್ವದ ಯಾವುದೇ ಸೇನೆ ಅಮೆರಿಕದಂತೆ ಕಾರ್ಯಾಚರಣೆ ಮಾಡಲ್ಲ

ಮಧ್ಯಪ್ರಾಚ್ಯದ ಯುದ್ಧ ಮತ್ತೊಂದು ಹಂತವನ್ನೇ ತಲುಪಿದೆ. ಇರಾನ್-ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಪ್ರವೇಶವಾಗಿದೆ. ಇದು ನಿರೀಕ್ಷಿತ. ಆದ್ರೆ, ಊಹೆಗೂ ಮುನ್ನವೇ ಅಮೆರಿಕ ಕದನ ಕಣಕ್ಕೆ ಇಳಿದು ಹೂಂಕರಿಸಿದೆ. ವಾರ್ನಿಂಗ್ ಕೊಟ್ಟರೂ ಬಗ್ಗದ ಖಮೇನಿಗೆ ದಂಡಂ ದಶಗುಣಂ ಅಂತ ಟ್ರಂಪ್‌ ರಣದಾಳಿಯ ಪಾಠ ಹೇಳಿದ್ದಾರೆ. ರಾತ್ರೋ ರಾತ್ರಿ ಇರಾನ್‌ನಲ್ಲಿ ದೊಡ್ಡಣ್ಣನ ಪಡೆ ರಣಾರ್ಭಟಿಸಿ ಚಿಂದಿ ಉಡಾಯಿಸಿದೆ.

ಎಚ್ಚರಿಕೆ ಬಗ್ಗದ ಇರಾನ್‌ಗೆ ಬಾಂಬ್‌ಗಳಿಂದ ಪಾಠ.. ವಾರ್ನಿಂಗ್ ಕೊಟ್ರೂ ಜಗ್ಗದ ಖಮೇನಿಗೆ ದಂಡಂ ದಶಗುಣಂ ಏಟು. ಎಚ್ಚರಿಸಿ.. ಎಚ್ಚರಿಸಿ ಸಾಕಾಗಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್‌ ಸೇನೆಯಿಂದ ಅಟ್ಯಾಕ್‌ ಮಾಡಲಾಗಿದೆ. ಇರಾನ್‌ನ ಅಣು ಹಠಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಇದು ಮಧ್ಯಪ್ರಾಚ್ಯದ ಯುದ್ಧಕ್ಕೆ ವಿಶ್ವದ ದೊಡ್ಡಣ್ಣನ ಗ್ರ್ಯಾಂಡ್ ಎಂಟ್ರಿ ಆಗಿದೆ.

publive-image

ಖಮೇನಿ ದೇಶದ 3 ಪರಮಾಣು ನೆಲೆಗಳು ಉಡೀಸ್!

ಜಾಣನಿಗೆ ಮಾತಿನ ಪೆಟ್ಟು. ದಡ್ಡನಿಗೆ ಬಾಂಬ್‌ ಮೂಲಕವೇ ಪೆಟ್ಟು ಕೊಡ್ಬೇಕು. ಇರಾನ್‌ನ ಪರಮಾಣು ಹೊಂದುವ ಹಠಕ್ಕೆ ಈಗ ದೊಡ್ಡ ಹೊಡೆತ ಬಿದ್ದಿದೆ. ಇರಾನ್-ಇಸ್ರೇಲ್ ಯುದ್ಧಕ್ಕೆ ಅಧಿಕೃತವಾಗಿ ಅಮೆರಿಕ ಎಂಟ್ರಿ ಕೊಟ್ಟಿದೆ. ಕಳೆದ 10 ದಿನಗಳಿಂದ ಇಸ್ರೇಲ್ ಮಾಡಲಾಗದ್ದನ್ನ ಅಮೆರಿಕ ಒಂದೇ ರಾತ್ರಿಯಲ್ಲಿ ಮಾಡಿ ಮುಗಿಸಿದೆ. ಇರಾನ್‌ನ ಪರಮಾಣು ಸಂಶೋಧನಾ ಕೇಂದ್ರಗಳನ್ನ ಅಮೆರಿಕ ಏರ್‌ಸ್ಟ್ರೈಕ್ ಮಾಡಿ ಉಡೀಸ್ ಮಾಡಿದೆ. ರಾತ್ರೋ ರಾತ್ರಿ ಬಾಂಬ್ ಅಟ್ಯಾಕ್ ಮಾಡಿ 3 ಅಣು ಕೇಂದ್ರಗಳನ್ನ ಧ್ವಂಸ ಮಾಡಿದೆ.

ಇರಾನ್‌ ಮೇಲೆ ಅಮೆರಿಕ ದಾಳಿ!

  • ಇರಾನ್​ -ಇಸ್ರೇಲ್​ ರಣರಂಗಕ್ಕೆ ಕೊನೆಗೂ ಅಮೆರಿಕ ಎಂಟ್ರಿ
  • ಇರಾನ್​ನ 3 ನ್ಯೂಕ್ಲಿಯರ್​​​ ಸೈಟ್​​ಗಳ ಮೇಲೆ ಅಮೆರಿಕ ದಾಳಿ
  • ಬಿ-2 ಸ್ಟೆಲ್ತ್​​ ಬಾಂಬರ್​​ ಫೈಟರ್​ ಜೆಟ್ ಬಳಸಿ ಅಮೆರಿಕ ಅಟ್ಯಾಕ್​​
  • ಫೋರ್ಡೋ, ನಟಾಂಜ್​, ಎಸ್ಫ್​ಹಾನ್ ಮೇಲೆ ಅಮೆರಿಕ ದಾಳಿ
  • ಫೋರ್ಡೋ ಮೇಲೆ ಆರು ಅಮೆರಿಕನ್​ ಬಾಂಬರ್‌ಗಳು ದಾಳಿ
  • ನಟಾಂಜ್, ಎಸ್ಫಹಾನ್​ ಮೇಲೆ ಜಲಾಂತರ್ಗಾಮಿ ನೌಕೆ ಅಟ್ಯಾಕ್
  • 30 ಟೊಮಾಹಾಕ್ ಕ್ಷಿಪಣಿಗಳೊಂದಿಗೆ ಜಲಂತರ್ಗಾಮಿ ಅಟ್ಯಾಕ್

ಇರಾನ್ ಮೇಲಿನ ದಾಳಿಯನ್ನ ಖಚಿತಪಡಿಸಿದ ಟ್ರಂಪ್‌!

ಎರಡು ವಾರಗಳ ಗಡುವು. ಇದು ನಿನ್ನೆಯಷ್ಟೇ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿದ್ದ ಡೆಡ್‌ಲೈನ್. ಆದ್ರೆ, 2 ವಾರ ಅಂತ ಇರಾನ್‌ನ ದಿಕ್ಕು ತಪ್ಪಿಸಿ ಅಮೆರಿಕ ನಿನ್ನೆ ರಾತ್ರಿಯೇ ಪರಮಾಣು ಕೇಂದ್ರಗಳನ್ನ ಉಡೀಸ್ ಮಾಡಿದೆ. ಇದೀಗ ಇರಾನ್‌ ಮೇಲಿನ ದಾಳಿಯನ್ನ ಟ್ರಂಪ್ ಧೃಢಪಡಿಸಿದ್ದಾರೆ. ಇದೊಂದು ಅತ್ಯಂತ ಯಶಸ್ವಿ ದಾಳಿ ಅಂತ ತಮ್ಮ ಸೇನೆಯ ಬೆನ್ನು ತಟ್ಟಿದ್ದಾರೆ.

‘ಅತ್ಯಂತ ಯಶಸ್ವಿ ದಾಳಿ’

ನಾವು ಅತ್ಯಂತ ಯಶಸ್ವಿಯಾಗಿ ದಾಳಿಯನ್ನ ಪೂರ್ಣಗೊಳಿಸಿದ್ದೇವೆ. ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿ ನಮ್ಮ ಎಲ್ಲಾ ಯುದ್ಧ ವಿಮಾನಗಳು ವಾಪಸ್​​​ ಆಗಿವೆ. ಪ್ರಾಥಮಿಕ ಪರಮಾಣು ತಾಣವಾದ ಫೋರ್ಡೋ ಮೇಲೆ ಬಾಂಬ್‌ಗಳ ಪೇಲೋಡ್ ಮಾಡಲಾಗಿದೆ. ಎಲ್ಲಾ ಯುದ್ಧ ವಿಮಾನಗಳು ಸುರಕ್ಷಿತವಾಗಿ ಮನೆ ಸೇರಿವೆ. ನಮ್ಮ ಹೆಮ್ಮೆಯ ಅಮೆರಿಕ ಸೇನೆಗೆ ನಾನು ಧನ್ಯವಾದ ಹೇಳುತ್ತೇನೆ. ವಿಶ್ವದ ಯಾವುದೇ ಸೇನೆ ಈ ರೀತಿಯ ಕಾರ್ಯಾಚರಣೆ ಮಾಡಿಲ್ಲ. ಈಗ ಇದು ಶಾಂತಿಯ ಸಮಯ.

- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಇದನ್ನೂ ಓದಿ:ಹೊಸ ಅಧ್ಯಾಯ, ಹೊಸ ಕ್ಯಾಪ್ಟನ್​.. ಕ್ರಿಕೆಟ್​ ದಿಗ್ಗಜರ ಮಾತು ಸುಳ್ಳು ಮಾಡಿದ ಯಂಗ್ ಇಂಡಿಯಾ

publive-image

ದೊಡ್ಡ ಪೆಟ್ಟು ಬಿದ್ರೂ ಏನು ಆಗಿಲ್ಲ ಎಂದ ಇರಾನ್!

ಜಟ್ಟಿ ಜಾರಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗೇ ಮೂರು ಅಣುಕೇಂದ್ರಗಳು ಧ್ವಂಸ ಆದ್ರೂ ಹೆಚ್ಚೇನು ಹಾನಿಯಾಗಿಲ್ಲ ಅಂತ ಇರಾನ್ ಹೇಳಿಕೊಂಡಿದೆ. ಅಮೆರಿಕ ದಾಳಿಯಿಂದ ಮೂರು ಪರಮಾಣು ಕೇಂದ್ರಗಳ ಬಳಿ ತಾಪಮಾನ ಹೆಚ್ಚಾಗಿದೆ ಎನ್ನಲಾಗ್ತಿದೆ. ಇಷ್ಟಾದ್ರೂ ಯಾವುದೇ ಪರಮಾಣು ಸೋರಿಕೆಯಾಗುವ ಅಪಾಯವಿಲ್ಲ ಅಂತ ಇರಾನ್ ಹೇಳಿಕೊಂಡಿದೆ. ಅಲ್ಲದೇ ಅಮೆರಿಕ ದಾಳಿಯಿಂದ ನಾವು ಕುಗ್ಗಲ್ಲ ಅಂತ ಇರಾನ್ ಹೇಳಿಕೊಂಡಿದೆ.

ಅಮೆರಿಕ ಆಗಮನದಿಂದ ಮಧ್ಯಪ್ರಾಚ್ಯದ ಯುದ್ಧ ಮತ್ತೊಂದು ಹಂತ ತಲುಪಿದೆ. ಎಷ್ಟೋ ವರ್ಷಗಳ ಬಳಿಕ ವಿಶ್ವದ ದೊಡ್ಡಣ್ಣ ಭಾರೀ ಪ್ರಮಾಣದ ಬಾಂಬ್‌ಗಳನ್ನ ಮತ್ತೊಂದು ದೇಶದ ಮೇಲೆ ಬಳಸಿದೆ. ಅಮೆರಿಕ ರಣದಾಳಿ ಇರಾನ್‌ಗೆ ಪಾಠವಾಗುತ್ತಾ? ಅಥವಾ ಮತ್ತೆ ಸಿಡಿದೇಳಲು ಕಾರಣವಾಗುತ್ತಾ? ಯುದ್ಧ ಮತ್ತಷ್ಟು ತೀವ್ರಗೊಳ್ಳುತ್ತಾ? ಲೆಟ್ಸ್ ವೇಯ್ಟ್‌ ಅಂಡ್ ವಾಚ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment