/newsfirstlive-kannada/media/post_attachments/wp-content/uploads/2024/05/Supreme-Court.jpg)
ಇತ್ತೀಚಿನ ದಾಂಪತ್ಯಗಳು ಬೆಳೆದು ನಿಲ್ಲುವ ಮುಂಚೆಯೇ ಕಳಚಿ ಬೀಳುತ್ತಿವೆ. ಆಧುನಿಕತೆಯ ಜೀವನಕ್ರಮದ ಪ್ರಭಾವ. ಆರ್ಥಿಕ ಸ್ವಾತಂತ್ರ್ಯ, ಅನೇಕ ವಿಷಗಳಲ್ಲಿ ಭಿನ್ನಾಭಿಪ್ರಾಯ ಹೀಗೆ ಹತ್ತು ಹಲವು ಕಾರಣಗಳಿಂದ ಪ್ರಪಂಚದಲ್ಲಿ ಮದುವೆ ವಿಚ್ಛೇಧನದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಡಿವೋರ್ಸ್ ಅಂತ ಬಂದಾಗ ಘನ ನ್ಯಾಯಾಲಯಗಳಿಗೆ ದೊಡ್ಡ ಸಮಸ್ಯೆಯಾಗಿ ನಿಲ್ಲುವುದು ಪತ್ನಿಗೆ ಯಾವ ರೀತಿಯಲ್ಲಿ ಜೀವನಾಂಶವನ್ನು ಒದಗಿಸಬೇಕು ಅನ್ನೋದು. ಇತ್ತ ಪತಿಗೂ ಕೂಡ ಭಾರವಾಗಬಾರದು. ಪತ್ನಿಗೆ ಕಡಿಮೆ ಎನ್ನಿಸಬಾರದು ಎಂಬಂತಹ ಗೊಂದಲದಲ್ಲಿ ನ್ಯಾಯಾಲಯಗಳು ಸಿಲುಕುತ್ತದೆ.
ಇದನ್ನೂ ಓದಿ:ಅತುಲ್ ಕೇಸ್ನಲ್ಲಿ ಪತ್ನಿಯೇ A1; ನಿಖಿತಾ ಸಿಂಘಾನಿಯಾಳ ಹಿನ್ನಲೆ ಏನು?
ಆದ್ರೆ ಈಗ ಸುಪ್ರೀಂಕೋರ್ಟ್ ಕೆಲವು ಮಾನದಂಡಗಳನ್ನು ನಿರ್ಧರಿಸಿ ಆ 8 ಅಂಶದ ಮೇಲೆ ಜೀವನಾಂಶ ನಿರ್ಧಾರವಾಗಬೇಕು ಎಂದು ನಿರ್ದೇಶನ ನೀಡಿದೆ. ಹಾಗೆ ಈ ಎಂಟು ನಿರ್ದೇಶಗಳನ್ನು ದೇಶದ ಎಲ್ಲಾ ಹೈಕೋರ್ಟ್, ಫ್ಯಾಮಿಲಿ ಕೋರ್ಟ್ಗಳು ಜೀವನಾಂಶ ವಿಷಯದಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.
1-ಗಂಡ-ಹೆಂಡತಿಯ ಸಾಮಾಜಿಕ, ಆರ್ಥಿಕ ಅಂತಸ್ತು ಪರಿಗಣಿಸಿ
2-ಹೆಂಡತಿಯ ಸಮಂಜಸವಾದ ಅಗತ್ಯತೆ, ಅವಲಂಬಿತ ಮಕ್ಕಳ ಅಗತ್ಯತೆಗಳನ್ನು ಪರಿಗಣಿಸಿ
3-ಎರಡು ಕಡೆಯವರ ವೈಯಕ್ತಿಕ ವಿದ್ಯಾರ್ಹತೆ, ಉದ್ಯೋಗದ ಅಂತಸ್ತು
4-ಸ್ವತಂತ್ರ ಆದಾಯ, ಅರ್ಜಿದಾರರು ಹೊಂದಿರುವ ಆಸ್ತಿ
5-ಗಂಡನ ಮನೆಯಲ್ಲಿ ಹೆಂಡತಿಯು ಅನುಭವಿಸುತ್ತಿದ್ದ ಸ್ಟಾಂಡರ್ಡ್ ಆಫ್ ಲೈಫ್
6-ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಗಾಗಿ ಮಾಡಿದ ಉದ್ಯೋಗ ತ್ಯಾಗ
7-ಉದ್ಯೋಗದಲ್ಲಿ ಇಲ್ಲದ ಹೆಂಡತಿಗೆ ಸಮಂಜಸವಾದ ಕೇಸ್ ವೆಚ್ಚ ನೀಡಿಕೆ..
8-ಗಂಡನ ಆರ್ಥಿಕ ಸಾಮರ್ಥ್ಯ, ಗಂಡನ ಆದಾಯ, ಜೀವನ ನಿರ್ವಹಣೆಯ ಕರ್ತವ್ಯ, ಸಾಲ
ಪ್ರಮುಖವಾಗಿ ಈ ಎಂಟು ಅಂಶಗಳನ್ನು ಪರಿಗಣಿಸಿ ಪತ್ನಿಯ ಜೀವನದ ನಿರ್ವಹಣೆಯ ವೆಚ್ಚ ನಿರ್ಧರಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ದೇಶದ ಎಲ್ಲಾ ಫ್ಯಾಮಿಲಿ ಹಾಗೂ ಹೈಕೋರ್ಟ್ಗಳಿಗೆ ಈ ಮಾರ್ಗಸೂಚಿನಯನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ.
ಜೀವನಾಂಶವು ಪತಿಗೆ ಶಿಕ್ಷೆ ವಿಧಿಸದಂತೆ ಅಗಬಾರದು. ಆದರೆ, ಪತ್ನಿಗೆ ಅರ್ಹ, ಯೋಗ್ಯ ಸ್ಟಾಂಡರ್ಡ್ ಆಫ್ ಲೀವಂಗ್ಗೆ ಅಗತ್ಯವಾದ ಜೀವನಾಂಶ ನೀಡಬೇಕು ಎಂದು ಜಸ್ಟೀಸ್ ವಿಕ್ರಮನಾಥ್, ಜಸ್ಟೀಸ್ ಪ್ರಸನ್ನ ಬಿ ವರಾಳೆ ಪೀಠದಿಂದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ. ಪ್ರವೀಣ್ ಕುಮಾರ್ ಜೈನ್ ಹಾಗೂ ಅಂಜು ಜೈನ್ ಡಿವೋರ್ಸ್ ಕೇಸ್ ವಿಚಾರಣೆಯಲ್ಲಿ ಈ ಮಾರ್ಗಸೂಚಿ ಆಚೆ ಬಂದಿದೆ. ಮುಂದೆ ಈ ಮಾರ್ಗಸೂಚಿಯ ಆಧಾರದ ಮೇಲೆ ಡಿವೋರ್ಸ್ ಕೇಸ್ಗಳಲ್ಲಿ ಜೀವನಾಂಶ ನಿರ್ಧಾರವಾಗಬೇಕು ಎಂದು ನಿರ್ದೇಶನ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ