ಬ್ಯಾಗ್​ನಲ್ಲಿ ಸತ್ತ ಜಿರಳೆ, ನೊಣ, ಕೂದಲುಗಳ ರಾಶಿ! 63 ಹೋಟೆಲ್​ಗಳಿಗೆ ಪಂಗನಾಮ.. ಈತ ಸಿಕ್ಕಿ ಬಿದ್ದಿದ್ದೇ ರೋಚಕ!

author-image
Gopal Kulkarni
Updated On
ಬ್ಯಾಗ್​ನಲ್ಲಿ ಸತ್ತ ಜಿರಳೆ, ನೊಣ, ಕೂದಲುಗಳ ರಾಶಿ! 63 ಹೋಟೆಲ್​ಗಳಿಗೆ ಪಂಗನಾಮ.. ಈತ ಸಿಕ್ಕಿ ಬಿದ್ದಿದ್ದೇ ರೋಚಕ!
Advertisment
  • ದೇಶ ಸುತ್ತಲು ಅಂತ ಹಣ ಕಡಿಮೆ ಬಿದ್ದಾಗ ಈ ಕಿರಾತಕ ಮಾಡಿದ್ದೇನು?
  • ಒಟ್ಟು 63 ಹೋಟೆಲ್​​ಗಳಿಗೆ ಪಂಗನಾಮ ಹಾಕಿ ಕೊನೆಗೂ ಸಿಕ್ಕಿಬಿದ್ದ
  • ಈತನ ಬ್ಯಾಗ್ ಚೆಕ್​ ಮಾಡಿದ ಪೊಲೀಸರಿಗೆ ಒಂದು ಕ್ಷಣ ಗಾಬರಿ!

ಭಂಡತನದಿಂದ ಬದುಕುವವರಿಗೆ ಸಾವಿರ ದಾರಿ ಅಂತ ಒಂದು ಮಾತೇ ಇದೆ. ಈ ಸಾಲುಗಳನ್ನು ನಿಜ ಮಾಡುವಂತಹ ಅನೇಕ ಸಂಗತಿಗಳು ಸಮಾಜದಲ್ಲಿ ನಿತ್ಯ ನಡೆಯುತ್ತಲೇ ಇರುತ್ತವೆ. ಆದ್ರೆ ಇಲ್ಲೊಬ್ಬ ಜಗತ್​ ಕಿಲಾಡಿ ತಾನು ದೇಶ ಸುತ್ತಬೇಕು ಎಂಬ ಕನಸು ಕಂಡಿದ್ದ. ಹಣ ಕಡಿಮೆ ಬಿದ್ದಾಗ ಬರೋಬ್ಬರಿ 63 ಹೋಟೆಲ್​ಗಳಿಗೆ ಪಂಗನಾಮ ಹಾಕಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ.

ಚೀನಾದ ಝೇಜೈಂಗ್ ಎಂಬ ಪ್ರಾಂತ್ಯದ ತೈಜುಹ್ ಎಂಬ ಪ್ರದೇಶದ 21 ವರ್ಷದ ಯುವಕ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನಿಗೆ ಟ್ರಾವೆಲಿಂಗ್ ಮಾಡುವ ಹುಚ್ಚು. ಅದಕ್ಕೆ ಹಣ ಕಡಿಮೆ ಬಿದ್ದಾಗ ಹಲವಾರು ಹೋಟೆಲ್​ಗಳಲ್ಲಿ ಮೋಸದಿಂದ ಹಣ ಕಿತ್ತು ಓಡಾಡಿದ್ದಾನೆ. ಕೊನೆಗೆ ಈತನ ಬಣ್ಣ ಬಯಲಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಯನ್ನು ಜಿಯಾಂಗ್ ಎಂದು ಗುರುತಿಸಲಾಗಿದೆ. ತನ್ನ ಗುರಿಯನ್ನು ತಲುಪಲು ಈತ ಬಳಸಿಕೊಂಡ ಮಾರ್ಗವೇ ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ. ಇವನು ಸದಾ ತನ್ನೊಂದಿಗೆ ಸತ್ತ ಜಿರಳಗೆಗಳನ್ನು, ಕೂದಲುಗಳನ್ನು ಹಾಗೂ ಉಪಯೋಗಿಸಲ್ಪಟ್ಟ ಕಾಂಡೋಮ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ತಾನು ಉಳಿದ ಹೋಟೆಲ್​ಗಳಲ್ಲಿ ಇವುಗಳನ್ನು ಅಸ್ತ್ರವಾಗಿಸಿಕೊಂಡು ಹೋಟೆಲ್ ಮಾಲೀಕರಿಂದ ಪರಿಹಾರವಾಗಿ ಹಣ ವಸೂಲಿ ಮಾಡಿಕೊಂಡು ಮತ್ತೆ ಮುಂದಿನ ಊರಿಗೆ ಹೋಗುತ್ತಿದ್ದ ಅಲ್ಲಿಯೂ ಕೂಡ ಇದೇ ತಂತ್ರವನ್ನು ಬಳಸಿ ಹೋಟೆಲ್​ಗಳಿಗೆ ಪಂಗನಾಮ ಹಾಕುತ್ತಿದ್ದನಂತೆ.

ಇದನ್ನೂ ಓದಿ:ಹೆಂಡತಿಗೆ ಚಿನ್ನ ಕೊಡಿಸಿದ ಗಂಡನಿಗೆ ಜಾಕ್‌ಪಾಟ್‌.. ಸಿಂಗಾಪುರದಲ್ಲಿ ರಾತ್ರೋರಾತ್ರಿ ಶ್ರೀಮಂತನಾದ ಭಾರತೀಯ!

ಒಂದು ವೇಳೆ ಹೋಟೆಲ್​ಗಳು ಪರಿಹಾರ ಹಣ ನೀಡದೇ ಇದ್ದರೆ ಆನ್​ಲೈನ್​ನಲ್ಲಿ ನಿಮ್ಮ ಹೋಟೆಲ್​ ಘನತೆಯನ್ನು ಬಯಲಿಗೆಳೆಯುತ್ತೇನೆ ಎಂದು ಬೆದರಿಸಿ ಈತ ಹಣ ಕೀಳುತ್ತಿದ್ದ ಎಂದು ತಿಳಿದು ಬಂದಿದೆ. ಕಳೆದ 10 ತಿಂಗಳಿನಿಂದ ಈತ ಹೀಗೆಯೇ ಮಾಡುತ್ತಿದ್ದಾನೆ. ಈ ಹತ್ತು ತಿಂಗಳಲ್ಲಿ ಒಟ್ಟು 63 ಹೋಟೆಲ್​ಗಳನ್ನು ಯಾಮಾರಿಸಿದ್ದಾನೆ ಈತ. ಒಂದೇ ದಿನದಲ್ಲಿ ಹಲವು ಹೋಟೆಲ್​ಗಳಲ್ಲಿ ಚೆಕ್​ ಇನ್ ಆಗಿರುವ ಬಗ್ಗೆಯೂ ಕೂಡ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:ಈ ಪಟ್ಟಣದಲ್ಲಿ ಇಂಟರ್​ನೆಟ್​ ಇಲ್ಲ… ಫೋನ್ ಇಲ್ಲ.. ವೈಫೈ ಇಲ್ಲ.. ಮೈಕ್ರೋವೇವ್ ಕೂಡ ಇಲ್ಲ!ಕಾರಣವೇನು?

ಹೀಗೆ ಹೋಟೆಲ್​ಗಳಿಗೆ ಯಾಮಾರಿಸುತ್ತಾ ಹಣ ಪೀಕುತ್ತಾ ಪ್ರವಾಸ ಮಾಡುತ್ತಿದ್ದ ಈತನ ಪಾಪದ ಕೊಡ ತುಂಬಿದೆ. ಕೊನೆಗೆ ಒಂದು ಹೋಟೆಲ್​ನಲ್ಲಿ ಇದೇ ರೀತಿಯೇ ಈತ ಹಣ ಪೀಕಲು ನೋಡಿದ್ದಾನೆ. ಅನುಮಾನ ಬಂದ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಕರೆ ಮಾಡಿ ಈತನನ್ನು ಒಪ್ಪಿಸಿದ್ದಾರೆ. ಪೊಲೀಸರು ತಮ್ಮ ಭಾಷೆಯಲ್ಲಿ ಕೇಳಿದಾಗ 10 ತಿಂಗಳಿನಿಂದ ಈತ ಮಾಡಿಕೊಂಡು ಬಂದಿರುವ ಮೋಸದ ಕತೆಯನ್ನು ತೆರೆದಿಟ್ಟಿದ್ದಾನೆ. ಅವನ ಬ್ಯಾಗ್ ಚೆಕ್ ಮಾಡಿದಾಗ ಮೃತಪಟ್ಟ ಜಿರಳೆಗಳು, ನೋಣಗಳು, ಉಪಯೋಗಿಸಲ್ಪಟ್ಟ ಕಾಂಡೋಮ್​ಗಳು, ಕೂದಲುಗಳ ರಾಶಿ ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment