/newsfirstlive-kannada/media/post_attachments/wp-content/uploads/2023/12/DHANKAR-1.jpg)
ಸಂಸತ್ ಆವರಣದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಿಮಿಕ್ರಿ ಮಾಡಿ ವಿವಾದ ಎಬ್ಬಿಸಿದ್ದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತೊಮ್ಮೆ ಧನಕರ್ ಹಾಗೂ ಪ್ರಧಾನಿ ಮೋದಿ ಮಿಮಿಕ್ರಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅವರ ಸಂಸದೀಯ ಕ್ಷೇತ್ರವಾದ ಶ್ರೀರಾಮಪುರದಲ್ಲಿ ಟಿಎಂಸಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಉಪರಾಷ್ಟ್ರಪತಿ ತಮ್ಮ ಹುದ್ದೆಯ ಸಾಂವಿಧಾನಿಕ ಘನತೆಯನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿ ಮತ್ತೊಮ್ಮೆ ಅವರ ಮಿಮಿಕ್ರಿ ಮಾಡಿದ್ದಾರೆ.
ತಮ್ಮದೇ ಜಾಟ್ ಸಮುದಾಯದ ಭಜರಂಗ್ ಪೂನಿಯಾ ಪದ್ಮಶ್ರೀ ವಾಪಾಸ್ ನೀಡುರುವುದಕ್ಕೆ ಮೌನವಾಗಿದ್ದಾರೆ. ತಮ್ಮ ಸ್ಥಾನದ ದುರಾಸೆಯಿಂದ ಪ್ರಧಾನಿ ಮೋದಿಗೆ ಗೌರವ ಕೊಡುವುದಕ್ಕಿಂತ ಅವರಿಗೆ ಶರಣಾಗುತ್ತಾರೆ ಎಂದು ಟೀಕಿಸಿದ್ದಾರೆ. ಇನ್ನು ನಾನು ಸಂಸತ್ ಹೊರಗಡೆ ಮಿಮಿಕ್ರಿ ಮಾಡಿದ್ರೆ ಮೋದಿ ಸಂಸತ್ ಒಳಗಡೆಯೇ ಮಿಮಿಕ್ರಿ ಮಾಡ್ತಾರೆ ಅಂತ ಪ್ರಧಾನಿ ಮೋದಿ ಅನುಕರಣೆ ಕೂಡ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ