/newsfirstlive-kannada/media/post_attachments/wp-content/uploads/2025/02/AMIT-SHA-AND-DKSHI-1.jpg)
ಪ್ರಯಾಗ್ರಾಜ್ನ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ್ಯ. ಮಹಾಶಿವರಾತ್ರಿಯಂದು ಶಿವ ಧ್ಯಾನ.. ಡಿಕೆ.ಶಿವಕುಮಾರ್. ಕರ್ನಾಟಕದ ಡಿಸಿಎಂ. ಕಾಂಗ್ರೆಸ್ನ ರಾಜ್ಯಾಧ್ಯಕ್ಷರು. ಇವರ ಒಂದೊಂದು ನಡೆಯೂ ರಾಜಕೀಯದಲ್ಲಿ ನಾನಾ ಅರ್ಥಗಳು.. ಚರ್ಚೆಗಳಿಗೆ ನಾಂದಿ ಆಗ್ತಿದೆ. ಕೆಲ ದಿನಗಳ ಹಿಂದೆ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಲೇವಡಿ ಮಾಡಿದ್ರು. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಪುಣ್ಯ ಸ್ನಾನ ಮಾಡಿದ್ದು. ಕಾಂಗ್ರೆಸ್ಗೆ ಮುಖಭಂಗ ತರಿಸಿತ್ತು. ಇದೀಗ ಮಹಾಶಿವರಾತ್ರಿಯಲ್ಲಿ ಜಾಗರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅದಕ್ಕಿಂತ ಮಹತ್ವದ ವಿಷ್ಯ ಏನಂದ್ರೆ. ಬಿಜೆಪಿ ಚಾಣಕ್ಯ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು. ರಾಜ್ಯ ರಾಜಕೀಯದಲ್ಲಿ ಸಂಚಲ ಸೃಷ್ಟಿಸಿದೆ.
ಮಹಾ ಶಿವರಾತ್ರಿ ಪ್ರಯುಕ್ತ ಕೊಯಮತ್ತೂರಿನ ಈಶಾ ಫೌಂಡೇಶನ್ನಲ್ಲಿ ನಡೆದ ಶಿವರಾತ್ರಿ ಜಾಗರಣೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಇಬ್ಬರೂ ಕೂಡ ಪಕ್ಷ ಸಂಘಟನೆಯಲ್ಲಿ ನಿಸ್ಸೀಮರು. ಅಮಿತ್ ಶಾರನ್ನ ಬಿಜೆಪಿ ಚಾಣಕ್ಯ ಆದ್ರೆ. ಡಿಕೆಶಿ. ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದಾರೆ. ರಾಜಕೀಯವಾಗಿ ಇಬ್ಬರ ಸಿದ್ಧಾಂತಗಳು ಬೇರೆ ಬೇರೆ. ಆದ್ರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಚರ್ಚೆಯ ವಿಷಯವಾಗಿದೆ. ರಾತ್ರಿಯಿಡೀ ಇಬ್ಬರೂ ಕೂಡ ಜಾಗರಣೆ ಮಾಡುವ ಮೂಲಕ ಶಿವನ ಆರಾಧನೆ ಮಾಡಿದ್ರು.
ಇದನ್ನೂ ಓದಿ:ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಬಿಗಿ ಪಟ್ಟು; ಯಾವಾಗ? ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ!
ಇನ್ನು ಡಿ.ಕೆ.ಶಿವಕುಮಾರ್, ಅಮಿತ್ ಶಾ ಜೊತೆ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಅನ್ನೋ ವಿಷ್ಯ ಬಹಿರಂಗವಾಗ್ತಿದ್ದಂತೆ, ಕಾಂಗ್ರೆಸ್ನಲ್ಲೇ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಡಿಕೆಶಿ ಬಿಜೆಪಿಗೆ ಹತ್ತಿರವಾಗ್ತಿದ್ದಾರೆ ಎಂಬೆಲ್ಲ ಚರ್ಚೆಗಳು ಶುರುವಾಗಿದ್ವು.. ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದ ಡಿಕೆಶಿ, ಸದ್ಗುರು ಜಗ್ಗಿ ವಾಸುದೇವ್ ನಮ್ಮ ಮೈಸೂರಿನವರು. ನಮ್ಮ ಮನೆಗೆ ಬಂದು ಆಹ್ವಾನ ನೀಡಿದ್ದರು. ನಾನಿನ್ನೂ ಅಮಿತ್ ಶಾರನ್ನ ಭೇಟಿ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಹೀಗೆ ಹೇಳಿದ್ದ ಡಿಕೆಶಿ ರಾತ್ರಿ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು, ಕಾಂಗ್ರೆಸ್ ನಾಯಕರ ಕಣ್ಣನ್ನು ಕೆಂಪಗಾಗಿಸಿದೆ. ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ತತ್ವ ಸಿದ್ದಾಂತ ಹಾಗೂ ರಾಹುಲ್ ಗಾಂಧಿ ಅವರ ತತ್ವಕ್ಕೆ ವಿರುದ್ದವಾದ ನಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ
ನಮ್ಮ ನಾಯಕ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡುವ, ಯಾವಾಗಲೂ RSSನ ನಿರೂಪಣೆಗಳೊಂದಿಗೆ ಹೊಂದಿಕೆಯಾಗುವ ವ್ಯಕ್ತಿಗೆ ಜಾತ್ಯತೀತ ಪಕ್ಷದ ಅಧ್ಯಕ್ಷನಾಗಿ ಮತ್ತು ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ ಸಾರ್ವಜನಿಕವಾಗಿ ಧನ್ಯವಾದ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಪಕ್ಷದ ಪ್ರಗತಿ, ಬೆಳವಣಿಗೆಗೆ ರಾಜಿಯಾಗಬಾರದು. ದೃಢನಿಶ್ಚಯಕ್ಕೆ ಬದ್ಧತೆ ಬಹಳ ಮುಖ್ಯ. ಇದನ್ನು ನಿರ್ಲಕ್ಷಿಸಿದರೆ ಪಕ್ಷದ ಸೈದ್ಧಾಂತಿಕ ನೆಲೆ ದುರ್ಬಲಗೊಳ್ಳಬಹುದು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:BJP-JDS ನಾಯಕರ ಮಹತ್ವದ ಸಭೆ.. ‘ಕೈ’ ಸರ್ಕಾರ ಕಟ್ಟಿ ಹಾಕಲು ಏನೆಲ್ಲಾ ಚರ್ಚೆ ಮಾಡಲಾಗಿದೆ?
ರಾಜಕೀಯವಾಗಿ ಒಂದು ರಾತ್ರಿಯಲ್ಲಿ ಏನು ಬೇಕಾದ್ರೂ ಆಗಬಹುದು ಎಂದು ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ರು.. ಹೀಗಾಗಿ ಮಹಾ ಶಿವರಾತ್ರಿಯ ಜಾಗರಣೆ ಜೊತೆ ರಾಜಕೀಯ ಮಾತುಕತೆ ಏನಾದ್ರೂ ನಡೆದಿದ್ಯಾ ಅನ್ನೋದು ಎಲ್ಲರ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ