newsfirstkannada.com

ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಬಾಂಬ್ ಬಾಣ; ಬರದ ಅಸ್ತ್ರ ಪ್ರಯೋಗಿಸಿ ಕೌಂಟರ್ ಕೊಟ್ಟ ಸಿದ್ದರಾಮಯ್ಯ..!

Share :

Published April 3, 2024 at 6:59am

  ‘ಬಿಜೆಪಿ-ಜೆಡಿಎಸ್ ಒಂದು ದೇಹದ ಎರಡು ಕಣ್ಣುಗಳು’ ಎಂದು ಹೇಳಿದ್ಯಾರು?

  ಡಾ. ಮಂಜುನಾಥ್​ ಪರ ಮತಯಾಚಿಸಿದ ಕೇಂದ್ರ ಸಚಿವ ಅಮಿತ್ ಶಾ

  ನೀವು ಬರುವುದು ಕನ್ನಡಿಗರಿಗೆ ಕೊಡೋದಕ್ಕೋ, ಕಿತ್ತುಕೊಳ್ಳುವುದಕ್ಕೋ? ಎಂದು ಪ್ರಶ್ನೆ

ಲೋಕ ಸಭಾ ಅಖಾಡದಲ್ಲಿ ಭರ್ಜರಿ ಮತಬೇಟೆಯಾಡ್ತಿರೋ ಕೇಸರಿ ಕಲಿಗಳ ದಂಡು ನಿನ್ನೆ ಬೊಂಬೆ ನಾಡಲ್ಲಿ ಬೀಡು ಬಿಟ್ಟಿತ್ತು. ಡಾ. ಮಂಜುನಾಥ್​ ಪರ ಮತಯಾಚಿಸಿದ ಅಮಿತ್ ಶಾ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಾಂಬ್ ಬಾಣ ಪ್ರಯೋಗಿಸಿದ್ರು. ಇತ್ತ ಅಮಿತ್ ಶಾ ವಿರುದ್ಧ ಬರದ ಬಾಣ ಪ್ರಯೋಗಿಸಿದ ಕಾಂಗ್ರೆಸ್​ ಟ್ವೀಟ್​ ಸಮರಕ್ಕೆ ನಾಂದಿ ಹಾಡಿತ್ತು.

ಕರುನಾಡ ಲೋಕ ಅಖಾಡಕ್ಕೆ ಕಾಲಿಟ್ಟಿದ್ದ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ, ಡಿಕೆ ಬ್ರದರ್ಸ್​ ಕೋಟೆಯಲ್ಲಿ ನಿನ್ನೆ ರೌಂಡ್ಸ್​ ಹಾಕಿದ್ರು.. ಬೊಂಬೆ ನಾಡಿನಲ್ಲಿ ಭರ್ಜರಿ ರೋಡ್​ ಶೋ ನಡೆಸಿದ ಅಮಿತ್ ಶಾ ಡಾ. ಮಂಜುನಾಥ್ ಪರ ಮತಬೇಟೆಯಾಡಿದ್ರು.. ಕರುನಾಡ ನೆಲದಲ್ಲಿ ಲೋಕ ಕದನ ಗೆಲ್ಲಲ್ಲು ಬೆಂಗಳೂರು ಗ್ರಾಮಾಂತರದ ಮೂಲಕ ಅಮಿತ್ ಶಾ ರಣ ಕಹಳೆ ಮೊಳಗಿಸಿದ್ರು.

ಬೊಂಬೆ ನಗರಿಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ
ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ಚನ್ನಪಟ್ಟಣ ನಿನ್ನೆ ಕೇಸರಿ ಕಲಿಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯ್ತು.. ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಮೈತ್ರಿ ಪಡೆ ಒಟ್ಟಾಗಿ ಮತ ಬೇಟೆಯಾಡಿದ್ವು.. ಚಿಕ್ಕಮಳೂರು ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ. ಬೃಹತ್​ ರೋಡ್​ ಶೋ ನಡೆಸಿದ ಅಮಿತ್​ ಶಾಗೆ ಮಾಜಿ ಸಿಎಂ ಹೆಚ್​ಡಿಕೆ ಸಾಥ್​ ನೀಡಿದ್ರು.. ಅಮಿತ್​ ಶಾ ರೋಡ್​ ಶೋಗೆ ಜನಸಾಗರವೇ ಹರಿದಿಬಂದಿತ್ತು.. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್​.ಮಂಜುನಾಥ್​ ಪರ ಮೈತ್ರಿ ನಾಯಕರು ಮತಯಾಚನೆ ಮಾಡಿದ್ರು.

ಇದನ್ನೂ ಓದಿ: 16 ಅಂತಸ್ತಿನ ಕಟ್ಟಡದಲ್ಲಿ ಘೋರ ಬೆಂಕಿ ದುರಂತ; 29 ಮಂದಿ ಸಜೀವ ದಹನ

ರಾಜ್ಯ ಕಾಂಗ್ರೆಸ್ ಸರ್ಕಾರದ​ ವಿರುದ್ಧ ಅಮಿತ್ ಶಾ ವಾಗ್ದಾಳಿ
ಚನ್ನಪಟ್ಟಣದ ರೋಡ್ ಶೋ ವೇಳೆ ಮಾತನಾಡಿದ ಅಮಿತ್ ಶಾ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.. ಕರ್ನಾಟಕದಲ್ಲಿ SDPI ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ಕೊಡ್ತಾ ಇವೆ.. ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಆಗುತ್ತಿದೆ.. ಹೀಗಿರುವಾಗ ಕರ್ನಾಟಕ ಜನರು ಸುರಕ್ಷಿತವಾಗಿ ಇರಲು ಸಾಧ್ಯನಾ ಅಂತ ಅಮಿತ್ ಶಾ ಪ್ರಶ್ನೆ ಮಾಡಿದ್ರು.

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗುತ್ತಿದೆ.. ಕರ್ನಾಟಕದಲ್ಲಿ SDPI ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ಕೊಡ್ತಾ ಇವೆ. ಹೀಗಿರುವಾಗ ಕರ್ನಾಟಕ ಜನರು ಸುರಕ್ಷಿತವಾಗಿ ಇರಲು ಸಾಧ್ಯನಾ? -ಅಮಿತ್ ಶಾ, ಕೇಂದ್ರ ಗೃಹ ಸಚಿವ

ಬಿಜೆಪಿ-ಜೆಡಿಎಸ್ ಒಂದು ದೇಹದ ಎರಡು ಕಣ್ಣುಗಳು
ಅಮಿತ್ ಶಾ ಜೊತೆ ರೋಡ್ ಶೋದಲ್ಲಿ ಭಾಗಿಯಾದ ದಳಪತಿ ಹೆಚ್.ಡಿ ಕುಮಾರಸ್ವಾಮಿ, ಡಿಕೆ ಬ್ರದರ್ಸ್​ ವಿರುದ್ಧ ಗುಟುರು ಹಾಕಿದ್ರು.. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುವ ರಾಜಕಾರಣಕ್ಕೆ ಉತ್ತರ ಕೊಡಲು ಮಂಜುನಾಥ್ ಅವರನ್ನ ಕಣಕ್ಕಿಳಿಸಿದ್ದೇವೆ.. ನನ್ನ ಹೃದಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿದೆ.. ಬಿಜೆಪಿ-ಜೆಡಿಎಸ್ ಒಂದು ದೇಹದ ಎರಡು ಕಣ್ಣುಗಳು ಅಂತ ಭಾವನಾತ್ಮವಾಗಿ ಭಾಷಣ ಮಾಡಿ ಜನರ ಗಮನ ಸೆಳೆದ್ರು.

ಅಮಿತ್​ ಶಾ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಸಮರ
ಅಮಿತ್ ಶಾ ಕರ್ನಾಟಕ ಭೇಟಿ ಬೆನ್ನಲ್ಲೇ ಕಾಂಗ್ರೆಸ್​ ಅಮಿತ್ ಶಾ ವಿರುದ್ಧ ಟ್ವೀಟ್ ಸಮರಕ್ಕಿಳಿದಿತ್ತು.. ಅಮಿತ್ ಶಾ ಅವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕರ್ನಾಟಕದ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯನ್ನು ಉಳಿಸುವುದಕ್ಕೋ, ಕೆಡಿಸುವುದಕ್ಕೋ? ಅಂತ ಸಿಎಂ ಸಿದ್ದರಾಮಯ್ಯ ಕೌಂಟರ್​​ ಕೊಟ್ರು.. ಅತ್ತ ಸುಳ್ಳೇ ಬಿಜೆಪಿಯ ಮನೆದೇವ್ರು ಅಂತ ಕರ್ನಾಟಕ ಕಾಂಗ್ರೆಸ್ ಸಹ ಅಮಿತ್ ಶಾ​ ಕುಟುಕಿತ್ತು.

ಒಟ್ನಲ್ಲಿ ಬೊಂಬೆ ನಾಡಿನಲ್ಲಿ ಅಮಿತ್ ಶಾ, ಡಾ. ಮಂಜುನಾಥ್ ಪರ ಮತಬೇಟೆಯಾಡ್ತಿದ್ರೆ ಕಾಂಗ್ರೆಸ್​ ಬರದ ಅಸ್ತ್ರ ಹಿಡಿದು ಅಮಿತ್ ಶಾ ವಿರುದ್ದ ಅಖಾಡಕ್ಕಿಳಿದಿತ್ತು.. ಅತ್ತ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಮಿತ್ ಶಾ ಬಾಂಬ್ ರಾಗಾ ಹಾಡಿದ್ರೆ ಇತ್ತ ಕಾಂಗ್ರೆಸ್​ ಬರದ ರಾಗ ಹಾಡಿ ಬಿಜೆಪಿಗೆ ಕೌಂಟರ್ ಕೊಟ್ಟು ಸೈಲೆಂಟ್ ಆಗಿತ್ತು.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಬಾಂಬ್ ಬಾಣ; ಬರದ ಅಸ್ತ್ರ ಪ್ರಯೋಗಿಸಿ ಕೌಂಟರ್ ಕೊಟ್ಟ ಸಿದ್ದರಾಮಯ್ಯ..!

https://newsfirstlive.com/wp-content/uploads/2024/04/Amit-Shah.jpg

Load More