newsfirstkannada.com

ಮೋದಿ ಹ್ಯಾಟ್ರಿಕ್ ಗೆಲುವು ಪಡೆದ್ರೆ ಪೂರ್ಣಾವಧಿ ಪೂರೈಸಲ್ವಾ.. ಉತ್ತರಾಧಿಕಾರಿ ರೇಸ್‌ನಲ್ಲಿ ಯಾರಿದ್ದಾರೆ?

Share :

Published February 12, 2024 at 6:40am

Update February 12, 2024 at 6:41am

    ಪ್ರಧಾನಿ ಮೋದಿ ಉತ್ತರಾಧಿಕಾರಿ ರೇಸ್‌ನಲ್ಲಿ ಮೂವರ ಹೆಸರು!

    ಬಿಜೆಪಿಯಲ್ಲಿ 75 ದಾಟಿದವರಿಗೆ ಸಾಂವಿಧಾನಿಕ ಹುದ್ದೆ ನೀಡಲ್ಲ

    ಮೋದಿಗೆ 73 ವರ್ಷ, ಪೂರ್ಣಾವಧಿ ಪೂರೈಸೋದು ಡೌಟ್​?

ಸತತ 3ನೇ ಬಾರಿಯೂ ಗದ್ದುಗೆ ಏರೋ ವಿಶ್ವಾಸದಲ್ಲಿದೆ ಕೇಸರಿ ಪಾಳಯ. ಮತ್ತೊಮ್ಮೆ ಬಿಜೆಪಿಯಿಂದ ಮೋದಿ ದೇಶದ ದೊರೆಯಾಗೋದು ಪಕ್ಕಾ ಎನ್ನಲಾಗ್ತಿದೆ. ಆದ್ರೆ, ಮೋದಿ ಪೂರ್ಣಾವಧಿ ಮುಗಿಸೋದು ಡೌಟ್​ ಇದ್ದು, ನಮೋ ಉತ್ತರಾಧಿಕಾರಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಇದೀಗ ಅದಕ್ಕೆ ಮೂಡ್‌ ಆಫ್‌ ನೇಷನ್​ ಸರ್ವೇಯಲ್ಲಿ ಉತ್ತರ ಸಿಕ್ಕಿದೆ.

ಲೋಕ ಕದನಕ್ಕೆ ಅಖಾಡ ಸಜ್ಜಾಗುತ್ತಿದೆ. ಶೀಘ್ರದಲ್ಲೇ ಲೋಕಸಭಾ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ನಾವೇ ದೇಶ ಆಳೋದು ಅಂತ ವಿಶ್ವಾಸದಲ್ಲಿದ್ದಾರೆ. ಆದ್ರೆ, ಈ ಮಧ್ಯೆ ಸದ್ದಿಲ್ಲದೇ ಮೋದಿಯ ಉತ್ತರಾಧಿಕಾರಿಯ ಹುಡುಕಾಟ ನಡೆದಿದೆ. ಮೂಡ್‌ ಆಫ್‌ ದಿ ನೇಷನ್‌ ಸರ್ವೇ ಜನ ಮೋದಿ ಉತ್ತರಾಧಿಕಾರಿ ಎಂದು ಯಾರನ್ನ ಗುರುತಿಸಿದೆ ಎಂದು ಪತ್ತೆ ಹಚ್ಚಿದೆ.

ಲೋಕ ಕದನದಲ್ಲಿ ಮತ್ತೊಮ್ಮೆ ಕೇಸರಿ ಕಮಾಲ್​ ಮಾಡುತ್ತೆ. ದೇಶದ ಗದ್ದುಗೆ ಏರೇ ಏರುತ್ತೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ ಅನ್ನೋ ಮಾತು ರಾಜಕೀಯ ಪಡಸಾಲೆಯಲಷ್ಟೇ ಅಲ್ಲ, ಜನರ ಬಾಯಲ್ಲೂ ಕೇಳೋಕೆ ಶುರುವಾಗಿದೆ. ಆದ್ರೆ, ಮೋದಿಯೇ ಪ್ರಧಾನಿ ಆದ್ರೂ, ಪ್ರಧಾನಿ ಆದ್ಮೇಲೆ ಪೂರ್ಣಾವಧಿ ಪೂರೈಸುತ್ತಾರೋ? ಇಲ್ಲವೇ ಅರ್ಧದಲ್ಲಿಯೇ ನಿರ್ಗಮಿಸುತ್ತಾರೋ? ಅನ್ನೋದು ಕನ್ಫರ್ಮ್‌ ಇಲ್ಲ. ಯಾಕಂದ್ರೆ, ಮೋದಿಗೆ ಈಗಾಗ್ಲೇ 73 ವರ್ಷ. ಬಿಜೆಪಿಯಲ್ಲಿ 75 ದಾಟಿದವರಿಗೆ ಸಾಂವಿಧಾನಿಕ ಹುದ್ದೆ ನೀಡೋದಿಲ್ಲ. ಅಡ್ವಾಣಿ, ಜೋಶಿಯಿಂದ ಹಿಡಿದು ಘಟಾನುಘಟಿ ನಾಯಕರಿಗೂ 75 ದಾಟಿದ ಮೇಲೆ ಹುದ್ದೆ ಕೊಟ್ಟಿಲ್ಲ. ಹೀಗಾಗಿಯೇ ಮೋದಿಯ ಉತ್ತರಾಧಿಕಾರಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಇದಕ್ಕೆ ಮೂಡ್‌ ಆಫ್‌ ನೇಷನ್​ ಸರ್ವೇ ಉತ್ತರ ಕೊಟ್ಟಿದೆ.

ಮೂಡ್‌ ಆಫ್‌ ನೇಷನ್​ ಸರ್ವೇಯಲ್ಲಿ ಮೂವರ ಹೆಸರು ಮುಂಚೂಣಿ

ಮೋದಿ ಉತ್ತರಾಧಿಕಾರಿಯಾಗಿ ಜನರು ಯಾರನ್ನ ನೋಡಲು ಬಯಸುತ್ತಿದ್ದಾರೆಂದು ಅರಿಯಲು ಮೂಡ್​ ಆಫ್​ ನೇಷನ್​ ಸರ್ವೇ ಮೂಲಕ ಜನ ಮನದ ದನಿಯನ್ನ ಆಲಿಸಿದೆ. ಇದರಲ್ಲಿ ಮೂವರು ಘಟಾನುಘಟಿ ನಾಯಕರುಗಳ ಹೆಸರು ಮುಂಚೂಣಿಯಲ್ಲಿದೆ. ಮೊದಲನೆಯದಾಗಿ ಅಮಿತ್​ ಶಾ ಇದ್ರೆ, ಎರಡನೇಯದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೆಸರು ಕೇಳಿ ಬಂದಿದೆ. ಇನ್ನೂ 3ನೇಯದಾಗಿ ಕೇಂದ್ರ ಸಚಿವ ನಿತಿನ್​​ ಗಡ್ಕರಿ ಹೆಸರು ಕೇಳಿಸಿದೆ. ಮೋದಿ ಉತ್ತರಾಧಿಕಾರಿಯ ಹುಡುಕಾಟಕ್ಕೆ ಮೂಡ್‌ ಆಫ್‌ ನೇಷನ್​ ಸರ್ವೇಯಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿದೆ. ಆದ್ರೆ, ಆ ಮೂವರಲ್ಲಿ ಯಾರಿಗೆ ಪಟ್ಟಾಭಿಷೇಕವಾಗುತ್ತೆ ಅನ್ನೋದನ್ನ ಮಾತ್ರ ಬಿಜೆಪಿ ಮತ್ತು ಆರ್​ಎಸ್​ಎಸ್​ ತೀರ್ಮಾನ ಮಾಡಲಿದೆ.

1. ಅಮಿತ್​ ಶಾ, ಕೇಂದ್ರ ಗೃಹ ಸಚಿವ

ಮೋದಿ ಉತ್ತರಾಧಿಕಾರಿ ಅಂತ ಶಾಗೆ 29% ಜನವೋಟ್‌
ಬಿಜೆಪಿಯ ನಂಬರ್‌ 2 ಸ್ಥಾನದಲ್ಲಿರೋ ಬಿಜೆಪಿ ಚಾಣಾಕ್ಯ
ಗುಜರಾತ್‌ನಲ್ಲಿ ಮೋದಿ ಸಿಎಂ ಆದಾಗಲೂ ಶಾ ಜೊತೆಗಿದ್ದರು
ಮೋದಿ ಕೇಂದ್ರಕ್ಕೆ ಬಂದ್ಮೇಲೂ ಅಮಿತ್​ ಶಾ ಜೊತೆಯಾಗಿದ್ದಾರೆ
ರಾಜಕೀಯದಲ್ಲಿ ಇವರ ಸ್ನೇಹ ಒಂದು ರೀತಿಯಲ್ಲಿ ನಿಸ್ವಾರ್ಥ

2. ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶದ ಸಿಎಂ

ಮೋದಿ ಉತ್ತರಾಧಿಕಾರಿ ಅಂತ ಯೋಗಿಗೆ 25% ಜನರ ಬೆಂಬಲ
ಮೋದಿ ಬಿಟ್ಟರೆ ಅತೀ ಹೆಚ್ಚು ಜನಪ್ರಿಯತೆ ಪಡೆದಿರೋ ನಾಯಕ
ಮೋದಿ ನಂತರ ಯೋಗಿನೇ ಪ್ರಧಾನಿ ಅನ್ನೋ ಕೂಗು ಕೇಳಿ ಬಂದಿದೆ
ಯುಪಿಯಲ್ಲಿ 2 ಬಾರಿ ಸಿಎಂ ಆಗಿ ದಾಖಲೆ ನಿರ್ಮಿಸಿರೋ ಯೋಗಿ

3. ನಿತಿನ್‌ ಗಡ್ಕರಿ

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಶೇ.16 ರಷ್ಟು ಜನರ ವೋಟ್​​
ಮೋದಿ-ಶಾ ಬಿಟ್ರೆ ಸದ್ದು ಮಾಡ್ತಿರೋ ಏಕೈಕ ಸಚಿವ ನಿತಿನ್‌ ಗಡ್ಕರಿ
ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೊಂದಾಣಿಕೆ ಸ್ವಭಾವದವರಾಗಿದ್ದಾರೆ
ಪ್ರತಿಪಕ್ಷಗಳ ಜೊತೆಗೂ ಗಡ್ಕರಿ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಹ್ಯಾಟ್ರಿಕ್ ಗೆಲುವು ಪಡೆದ್ರೆ ಪೂರ್ಣಾವಧಿ ಪೂರೈಸಲ್ವಾ.. ಉತ್ತರಾಧಿಕಾರಿ ರೇಸ್‌ನಲ್ಲಿ ಯಾರಿದ್ದಾರೆ?

https://newsfirstlive.com/wp-content/uploads/2024/02/next-pm.jpg

Load More