ಪೆಹಲ್ಗಾಮ್ ಉಗ್ರರು ಪಾಕಿಸ್ತಾನದವ್ರು ಎಂಬುದಕ್ಕೆ ಸಾಕ್ಷ್ಯ ಕೊಟ್ಟ ಅಮಿತ್ ಶಾ.. ರಾಜ್ಯಸಭೆಯಲ್ಲೂ ಇಂದು ಅಪರೇಷನ್ ಸಿಂಧೂರ್ ಬಗ್ಗೆ ಚರ್ಚೆ

author-image
Ganesh
Updated On
ಪೆಹಲ್ಗಾಮ್ ಉಗ್ರರು ಪಾಕಿಸ್ತಾನದವ್ರು ಎಂಬುದಕ್ಕೆ ಸಾಕ್ಷ್ಯ ಕೊಟ್ಟ ಅಮಿತ್ ಶಾ.. ರಾಜ್ಯಸಭೆಯಲ್ಲೂ ಇಂದು ಅಪರೇಷನ್ ಸಿಂಧೂರ್ ಬಗ್ಗೆ ಚರ್ಚೆ
Advertisment
  • ನಿನ್ನೆಯ ಚರ್ಚೆಯಲ್ಲಿ ಅಮಿತ್ ಶಾ ಕೊಟ್ಟ ಮಹತ್ವದ ಮಾಹಿತಿ ಏನು?
  • ಮಾತನಾಡೋರ ಪಟ್ಟಿಯಲ್ಲಿ ತರೂರ್, ತಿವಾರಿ ಹೆಸರು ಬಿಟ್ಟಿದ್ದೇಕೆ ಕಾಂಗ್ರೆಸ್?
  • ಪಕ್ಷದ ನಿರ್ಧಾರಕ್ಕೆ ನಿಗೂಢ ಟ್ವೀಟ್ ಮಾಡಿದ ಮನೋಜ್ ತಿವಾರಿ

ಲೋಕಸಭೆಯಲ್ಲಿ ನಿನ್ನೆಯಿಂದ ಅಪರೇಷನ್ ಸಿಂಧೂರ್ (Operation Sindoor) ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆಡಳಿತ- ಪ್ರತಿಪಕ್ಷಗಳ ಸದಸ್ಯರ ನಡುವೆ ಟಾಕ್ ಫೈಟ್ ಜೋರಾಗಿದೆ. ಆಡಳಿತ ಪಕ್ಷದ ಸದಸ್ಯರು, ಅಪರೇಷನ್ ಸಿಂಧೂರ್ ಯಶಸ್ಸನ್ನು ಕೊಂಡಾಡುತ್ತಿದ್ದಾರೆ.

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅಪರೇಷನ್ ಸಿಂಧೂರ್ ಬಗ್ಗೆ ಅನೇಕ ಟೀಕೆಗಳನ್ನು ಮಾಡುತ್ತಿವೆ. ಅಪರೇಷನ್ ಸಿಂಧೂರ್​ನಲ್ಲಿ ಭಾರತದ ಫೈಟರ್ ಜೆಟ್​ಗಳಿಗೆ ಹಾನಿಯಾಗಿದೆಯೇ? ಕದನ ವಿರಾಮ ಘೋಷಣೆಗೆ ಕಾರಣವೇನು? ಪಾಕ್ ಆಕ್ರಮಿತ ಕಾಶ್ಮೀರವನ್ನು ಏಕೆ ವಶಪಡಿಸಿಕೊಳ್ಳಲಿಲ್ಲ? ಪಾಕಿಸ್ತಾನದ ಉಗ್ರಗಾಮಿಗಳು ದೇಶದೊಳಕ್ಕೆ ನುಸುಳಿ ಬಂದಿದ್ದು ಹೇಗೆ? ಭದ್ರತಾ ಪಡೆಗಳು ಗಡಿಯಲ್ಲಿ ಆಲರ್ಟ್ ಆಗಿದ್ದರೆ ಉಗ್ರರು ಗಡಿ ನುಸುಳಲು ಅವಕಾಶ ಸಿಕ್ಕಿದ್ದು ಹೇಗೆ? ಎಂದೆಲ್ಲಾ ಪ್ರಶ್ನೆಗಳನ್ನು ವಿರೋಧ ಪಕ್ಷದ ಸದಸ್ಯರು ಸರ್ಕಾರಕ್ಕೆ ಕೇಳಿದ್ದಾರೆ. ಇಂಟಲಿಜೆನ್ಸ್ ವೈಫಲ್ಯ, ಅಪರೇಷನಲ್ ಲ್ಯಾಪ್ಸ್ ಮತ್ತು ವಿದೇಶಾಂಗ ನೀತಿಯನ್ನು ಪ್ರಶ್ನಿಸಿ ವಿರೋಧ ಪಕ್ಷದ ಸದಸ್ಯರು ಸರ್ಕಾರದ ಮೇಲೆ ವಾಗ್ದಾಳಿಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಸೇರಿದಂತೆ ಅನೇಕರು ಮಾತನಾಡಿದ್ದಾರೆ.

ಇದನ್ನೂ ಓದಿ: ಜಡೇಜಾ, ಸುಂದರ್ ಶತಕಕ್ಕೆ ಅಡ್ಡಗಾಲು.. ಪಂದ್ಯ ಮುಗಿದ ಮೇಲೂ ಹ್ಯಾಂಡ್​ಶೇಕ್ ಮಾಡದೇ ಬೆನ್​ಸ್ಟೋ ಅಸೂಯೆ

ಇಂದು ಕೂಡ ಲೋಕಸಭೆಯಲ್ಲಿ ಅಪರೇಷನ್ ಸಿಂಧೂರ್ ಬಗ್ಗೆ ಚರ್ಚೆ ಮುಂದುವರಿಯಲಿದೆ. ಇಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕರು ಮಾತನಾಡುವರು. ಇಂದು ಕೂಡ ಕಾವೇರಿದ ಚರ್ಚೆ ನಡೆಯಲಿದೆ. ಇಂದು ಕೇಂದ್ರ ಸರ್ಕಾರದ ಪರವಾಗಿ ಗೃಹ ಸಚಿವ ಅಮಿತ್ ಶಾ ಭಾಷಣ ನಿಗದಿಯಾಗಿತ್ತು.

ನಿನ್ನೆ ಹ*ತ್ಯೆಯಾದವರು ಪೆಹಲ್ಗಾಮ್​ನಲ್ಲಿ ಭಾಗಿಯಾಗಿದ್ದ ಉಗ್ರರು ಎಂದ ಶಾ

ಲೋಕಸಭೆಯಲ್ಲಿ ಭಾಷಣ ಮಾಡಿದ ಅಮಿತ್ ಶಾ, ನಿನ್ನೆ ಜಮ್ಮು ಕಾಶ್ಮೀರದ ಶ್ರೀನಗರದ ಹೊರ ವಲಯದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಸುಲೇಮಾನ್, ಅಫ್ಘಾನ್, ಜಿಬ್ರಾನ್ ಎಂಬ ಮೂವರು ಉಗ್ರರನ್ನು ಭಾರತದ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಮೂವರು ಕೂಡ ಪೆಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದರು. ಹತ್ಯೆಯಾದ ಉಗ್ರರನ್ನು ಪತ್ತೆ ಹಚ್ಚುವಲ್ಲಿ ಎಚ್ಚರಿಕೆಯನ್ನು ವಹಿಸಿದ್ದೇವೆ. ಉಗ್ರರಿಗೆ ಸಹಾಯ ಮಾಡಿದ್ದ ಸ್ಥಳೀಯರು ಅವರ ಗುರುತು ಪತ್ತೆ ಹಚ್ಚಿದ್ದಾರೆ. ಜೊತೆಗೆ ಅವರ ಬಂದೂಕು, ಗುಂಡುಗಳ ತಾಳೆ ಹಾಕಿ ಅವರ ಗುರುತನ್ನು ದೃಢಪಡಿಸಿಕೊಳ್ಳಲಾಗಿದೆ. ಉಗ್ರರು ಪಾಕಿಸ್ತಾನದಿಂದ ಬಂದವರು ಎನ್ನುವುದಕ್ಕೆ ಸಾಕ್ಷ್ಯ ಏನಿದೆ ಎಂದು ಪಿ.ಚಿದಂಬರಂ ಕೇಳಿದ್ದಾರೆ. ಮೂವರು ಉಗ್ರರು ಪಾಕಿಸ್ತಾನದಿಂದ ಬಂದಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ಸಾಕ್ಷ್ಯ ಇದೆ. ಉಗ್ರರ ವೋಟರ್ ಐ.ಡಿ. ನಂಬರ್ ಸಹ ನಮ್ಮ ಬಳಿ ಇದೆ. ಅವರ ಬಳಿ ಚಾಕೋಲೇಟ್ ಸಿಕ್ಕಿದೆ. ಆ ಚಾಕೋಲೇಟ್ ಪಾಕಿಸ್ತಾನದಲ್ಲಿ ಉತ್ಪಾದನೆ ಮಾಡಲಾಗಿದೆ. ಇಷ್ಟೆಲ್ಲಾ ಇದ್ದರೂ ಪಿ.ಚಿದಂಬರಂ, ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಪರ ಮಾತನಾಡುತ್ತಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕೆಟ್ಟದಾಗಿ ಮೆಸೇಜ್ ಮಾಡೋರಿಗೆ ಇನ್ಮೇಲೆ ಇದೆ ಮಾರಿಹಬ್ಬ -ರಮ್ಯಾ ಕೇಸ್ ಬೆನ್ನಲ್ಲೇ ಮಹಿಳಾ ಆಯೋಗ ಮಾಸ್ಟರ್ ಪ್ಲಾನ್

ಶಶಿ ತರೂರ್, ಮನೀಶ್ ತಿವಾರಿಗೆ ಸ್ಥಾನವಿಲ್ಲ! ಏಕೆ?

ಕಾಂಗ್ರೆಸ್ ಪಕ್ಷವು ತಮ್ಮ ಪಕ್ಷದಿಂದ ಭಾಷಣ ಮಾಡಬೇಕಾದ ಸಂಸದರ ಪಟ್ಟಿಯಲ್ಲಿ ತಿರುವನಂತಪುರ ಲೋಕಸಭಾ ಸದಸ್ಯ ಶಶಿ ತರೂರ್ ಮತ್ತು ಪಂಜಾಬ್​ನಿಂದ ಲೋಕಸಭೆಗೆ ಆಯ್ಕೆಯಾಗಿರುವ ಮನೀಷ್ ತಿವಾರಿಗೆ ಸ್ಥಾನ ನೀಡಿಲ್ಲದಿರುವುದು ವಿಶೇಷ. ಮನೀಶ್ ತಿವಾರಿ ಮತ್ತು ಶಶಿ ತರೂರ್ ಇಬ್ಬರು ಕೇಂದ್ರ ಸರ್ಕಾರವು ವಿದೇಶಗಳಿಗೆ ಕಳಿಸಿದ್ದ ಭಾರತದ ಪರ ನಿಯೋಗದಲ್ಲಿದ್ದರು. ಇಬ್ಬರು ನಾಯಕರು ವಿದೇಶಗಳಲ್ಲಿ ಅಪರೇಷನ್ ಸಿಂಧೂರ್ ಅನ್ನು ಸಮರ್ಥನೆ ಮಾಡಿಕೊಂಡು ಭಾರತದ ಪರ ಮಾತನಾಡಿದ್ದಾರೆ. ಇಬ್ಬರು ನಾಯಕರು ಲೋಕಸಭೆಯಲ್ಲಿ ಅಪರೇಷನ್ ಸಿಂಧೂರ್ ಅನ್ನು ಸಮರ್ಥಿಸಿ ಮಾತನಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗುತ್ತೆ ಎಂಬ ಕಾರಣದಿಂದ ಮಾತನಾಡುವ ನಾಯಕರ ಪಟ್ಟಿಗೆ ಸೇರಿಸಿಲ್ಲ.

ಮನೀಶ್ ತಿವಾರಿ, ಅಪರೇಷನ್ ಸಿಂಧೂರ್ ಬಗ್ಗೆ ಕಾಂಗ್ರೆಸ್ ಭಾಷಣಕಾರರ ಪಟ್ಟಿಗೆ ತಮ್ಮ ಹೆಸರು ಸೇರಿಸುವಂತೆ ಲೋಕಸಭೆ ವಿರೋಧ ಪಕ್ಷದ ನಾಯಕರ ಕಚೇರಿಗೆ ಇ-ಮೇಲ್ ಮಾಡಿದ್ದಾರೆ. ಮನೀಶ್ ತಿವಾರಿ ಹೆಸರನ್ನು ಪಟ್ಟಿಗೆ ಸೇರಿಸಿಲ್ಲ. ಹೀಗಾಗಿ ಇಂದು ಮನೀಶ್ ತಿವಾರಿ ಗೂಡಾರ್ಥದ ಟ್ವೀಟ್ ಮಾಡಿದ್ದಾರೆ. ನಾನು ಭಾರತದಲ್ಲಿ ವಾಸ ಮಾಡುತ್ತಿದ್ದೇನೆ. ಹೀಗಾಗಿ ಭಾರತದ ಮಾತನ್ನು ನಾನು ಕೇಳುತ್ತೇನೆ ಎಂದು ಮನೀಶ್ ತಿವಾರಿ ಟ್ವೀಟ್ ಮೂಲಕ ಹೇಳಿದ್ದಾರೆ. ಈ ಮೂಲಕ ಅಪರೇಷನ್ ಸಿಂಧೂರ್ ಅನ್ನು ಸಮರ್ಥಿಸಿದ್ದು, ಕೇಂದ್ರ ಸರ್ಕಾರದ ವಾದವನ್ನು ನಾನು ಒಪ್ಪುತ್ತೇನೆ ಎಂದು ಮನೀಶ್ ತಿವಾರಿ ಹೇಳಿದ್ದಾರೆ. ನಿನ್ನೆ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮಾತು ಅನ್ನು ನಂಬಲು ಸಿದ್ಧವಿಲ್ಲ, ಪಾಕಿಸ್ತಾನದ ಮಾತನ್ನು ನಂಬುತ್ತಿವೆ, ಕೇಳುತ್ತಿವೆ ಎಂದು ಹೇಳಿತ್ತು. ಹೀಗಾಗಿ ಇಂದು ಮನೀಶ್ ತಿವಾರಿ ನಾನು ಭಾರತದ ಮಾತು ಕೇಳುತ್ತೇನೆ ಎಂದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ವಾದವನ್ನು ನಾನು ಒಪ್ಪುತ್ತೇನೆ ಎಂದು ಮನೀಶ್ ತಿವಾರಿ ಹೇಳಿದಂತಾಗಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​​ಗೆ ಟ್ವಿಸ್ಟ್​.. ಬಿ.ದಯಾನಂದ್​ ಸೇರಿ ನಾಲ್ವರಿಗೆ ರಿಲೀಫ್..!

ಶಶಿ ತರೂರ್ ಹೆಸರು ಕೂಡ ಅಪರೇಷನ್ ಸಿಂಧೂರ್ ಭಾಷಣಕಾರರ ಪಟ್ಟಿಯಲ್ಲಿ ಇಲ್ಲ. ಶಶಿ ತರೂರ್ ಕೂಡ ವಿದೇಶಗಳಿಗೆ ಹೋಗಿ ಅಪರೇಷನ್ ಸಿಂಧೂರ್ ಸಮರ್ಥಿಸಿ ಬಂದಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರನ್ನು ನಿಯೋಗದಲ್ಲಿ ಹೋಗಿ ಭೇಟಿಯಾಗಿದ್ದಾರೆ. ಹೀಗಾಗಿ ಶಶಿ ತರೂರ್ ಹೆಸರು ಕಾಂಗ್ರೆಸ್ ಪಕ್ಷ, ತನ್ನ ಭಾಷಣಕಾರರ ಪಟ್ಟಿಯಲ್ಲಿ ಸೇರಿಸಿಲ್ಲ. ಪಕ್ಷದ ನಿಲುವಿಗೆ ಅನುಗುಣವಾಗಿ ಲೋಕಸಭೆಯಲ್ಲಿ ಭಾಷಣ ಮಾಡಲು ತಮ್ಮಿಂದ ಸಾಧ್ಯವಾಗಲ್ಲ ಎಂದು ಶಶಿ ತರೂರ್ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರಂತೆ. ಹೀಗಾಗಿ ಈಗ ನಾನು ಮೌನ ವ್ರತದಲ್ಲಿದ್ದೇನೆ ಎಂದು ಶಶಿ ತರೂರ್ ಹೇಳಿದ್ದಾರೆ.

ಮನೀಶ್ ತಿವಾರಿ ಮತ್ತು ಶಶಿ ತರೂರ್ ಇಬ್ಬರು ಕಾಂಗ್ರೆಸ್ ಪಕ್ಷ, ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದು, ಪಕ್ಷದ ನಿಲುವಿನಿಂದ ದೂರ ಸರಿಯುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ನಾಯಕರು, ಬೇರೆ ಪಕ್ಷದಿಂದ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎಂಬಂತೆ ಆಗಿದೆ. ಇಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಂದ ಮಲ್ಲಿಕಾರ್ಜುನ ಖರ್ಗೆ, ಪಿ.ಚಿದಂಬಂರಂ, ಅಖಿಲೇಶ್ ಪ್ರಸಾದ್ ಸಿಂಗ್, ಶಕ್ತಿಸಿನ್ಹಾ ಗೋಯಲ್ ಅಪರೇಷನ್ ಸಿಂಧೂರ್ ಬಗ್ಗೆ ಮಾತನಾಡುವರು.

ಇದನ್ನೂ ಓದಿ: ರಾಜ್ಯದ ರೈತರಿಗೆ ಸಿಹಿ ಸುದ್ದಿ.. ಕೇಂದ್ರ ಸಚಿವರ ಭೇಟಿ ಬೆನ್ನಲ್ಲೇ ಬೊಮ್ಮಾಯಿ ಮಹತ್ವದ ಮಾಹಿತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment