/newsfirstlive-kannada/media/post_attachments/wp-content/uploads/2025/01/Amith-Sha-In-Prayagraj-kumbhmela-3.jpg)
ವಿಶ್ವ ಪ್ರಸಿದ್ಧ ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ಕೋಟಿ, ಕೋಟಿ ಭಕ್ತರು ಹರಿದು ಬರುತ್ತಿದ್ದಾರೆ. ಕಳೆದ ಜನವರಿ 13ರಿಂದ ಇಲ್ಲಿಯವರೆಗೂ ಬರೋಬ್ಬರಿ 13 ಕೋಟಿ 21 ಲಕ್ಷಕ್ಕೂ ಅಧಿಕ ಭಕ್ತರು ಗಂಗಾ ನದಿಯಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ. ಜನವರಿ 29ರ ಮೌನಿ ಅಮಾವಾಸ್ಯೆಯ ಒಂದೇ ದಿನ ದಿನ 10 ಕೋಟಿ ಭಕ್ತರು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಮಹಾಕುಂಭಮೇಳದಲ್ಲಿ ಭಾಗಿಯಾಗಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗ್ ರಾಜ್‌ಗೆ ಆಗಮಿಸಿದ್ದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪುತ್ರ ಐಸಿಸಿ ಅಧ್ಯಕ್ಷ ಜಯ ಶಾ ಹಾಗೂ ಕುಟುಂಬಸ್ಥರ ಜೊತೆ ಆಗಮಿಸಿದ ಅಮಿತ್ ಶಾ ಅವರು ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ವಿವಾದಗಳ ಚೆಲುವೆ ಈಗ ಎಲ್ಲವನ್ನೂ ತ್ಯಜಿಸಿದ ಸಾಧ್ವಿ; ಮಮತಾ ಕುಲಕರ್ಣಿ ಸನ್ಯಾಸಿ ಆಗಿದ್ದು ಯಾಕೆ?
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಅಮಿತ್ ಶಾ ಅವರು ಬಳಿಕ ಬಡೇ ಹನುಮಾನ್ ಮಂದಿರಕ್ಕೆ ಭೇಟಿ ಕೊಟ್ಟರು. ನಂತರ ಅಕ್ಷಯವಟ್ ಪಾಟಲಪುರಿ ಮಂದಿರದಲ್ಲಿ ಅಖಾಡದ ಮುಖ್ಯಸ್ಥರು, ಸಾಧುಗಳೊಂದಿಗೆ ಭೋಜನ ಸವಿದರು.
ಅಮಿತ್ ಶಾ ಮೊಮ್ಮಗನಿಗೆ ಆಶೀರ್ವಾದ!
ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಅಮಿತ್ ಶಾ ಕುಟುಂಬಸ್ಥರಿಗೆ ಅಖಾಡದ ಸ್ವಾಮೀಜಿಗಳು ಆಶೀರ್ವಾದ ಮಾಡಿದರು. ಇದೇ ಸಂದರ್ಭದಲ್ಲಿ ಅಮಿತ್ ಶಾ ಪುತ್ರ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಮಗನಿಗೆ ಕುಂಭಮೇಳದಲ್ಲಿದ್ದ ಸ್ವಾಮೀಜಿಗಳು ವಿಶೇಷ ಆಶೀರ್ವಾದ ಮಾಡಿದರು. ಮಹಾಕುಂಭಮೇಳದಲ್ಲಿ ಅಮಿತ್ ಶಾ ಕುಟುಂಬಸ್ಥರು ಗಂಗಾ ನದಿಯಲ್ಲಿ ಮಿಂದೆದ್ದು ವಿಶೇಷವಾದ ಪೂಜೆ ಸಲ್ಲಿಸಿ ಧನ್ಯರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ