ಪ್ರತಿಯೊಬ್ಬ ಉಗ್ರನನ್ನೂ ಸುಮ್ನೆ ಬಿಡಲ್ಲ.. ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಅಮಿತ್ ಶಾ ಶಪಥ; ಏನಂದ್ರು?

author-image
Bheemappa
Updated On
ಪ್ರತಿಯೊಬ್ಬ ಉಗ್ರನನ್ನೂ ಸುಮ್ನೆ ಬಿಡಲ್ಲ.. ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಅಮಿತ್ ಶಾ ಶಪಥ; ಏನಂದ್ರು?
Advertisment
  • ಭಯೋತ್ಪಾದನೆ ವಿರುದ್ಧ ಸಮರ ಮುಂದುವರಿಸುತ್ತೇವೆ- ಅಮಿತ್ ಶಾ
  • ದೆಹಲಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತಾಡಿದ ಕೇಂದ್ರ ಗೃಹ ಸಚಿವ
  • ಹೇಡಿಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ, ತಕ್ಕ ಪ್ರತ್ಯುತ್ತರ ಇದ್ದೇ ಇದೆ

ನವದೆಹಲಿ: ಪ್ರತಿಯೊಬ್ಬ ಭಯೋತ್ಪಾದಕನನ್ನು ಬೆನ್ನತ್ತಿ ಹೋಗಿ ಹೊಡೆದು ಉರುಳಿಸುತ್ತೇವೆ. ಪ್ರಧಾನಿ ಮೋದಿ ಸರ್ಕಾರ ಯಾವೊಬ್ಬ ಉಗ್ರನನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಕಾಶ್ಮೀರದ ಪಹಲ್ಗಾಮ್ ದಾಳಿ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ದೇಶದ ಒಳಗೆ ಹೇಡಿಗಳಂತೆ ಬಂದು ಗುಂಡಿನ ದಾಳಿ ಮಾಡಿ ಅದನ್ನು ಗೆಲುವು ಎಂದುಕೊಳ್ಳುವುದು ನಿಮ್ಮ ಪೈಶಾಚಿಕ ಕೃತ್ಯ. ಮೋದಿ ನೇತೃತ್ವದ ಸರ್ಕಾರ ಪ್ರತಿಯೊಬ್ಬ ಉಗ್ರನನ್ನು ಬೆನ್ನತ್ತಿ ಹೊಡೆದು ಪ್ರತಿಯೊಂದು ಸಾವಿಗೂ ಪ್ರತೀಕಾರ ತೀರಿಸಿಕೊಳ್ಳುತ್ತೇದೆ ಎಂದು ಹೇಳಿದ್ದಾರೆ.

publive-image

ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದನೆ ಇದ್ದರೂ ಅದನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ ಎನ್ನುವುದು ನಮ್ಮ ದೃಢ ನಿರ್ಧಾರ. ಅದನ್ನು ಮಾಡೇ ಮಾಡುತ್ತೇವೆ. ಭಯೋತ್ಪಾದನೆ ವಿರುದ್ಧ ನಮ್ಮ ಸಮರ ಮುಂದುವರಿಸುತ್ತೇವೆ. ಹೇಡಿತನದ ಕೃತ್ಯಕ್ಕೆ ಪ್ರತೀಕಾರ ಇದ್ದೇ ಇದೆ. ನೀವು ಯಾವ ಮೂಲೆಯಲ್ಲೂ ಇದ್ದರೂ ಬಿಡಲ್ಲ. ಪಾಕಿಸ್ಥಾನದ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಅಮಿತ್ ಶಾ ದೊಡ್ಡ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ.

ಪಹಲ್ಗಾಮ್​ ದಾಳಿ ನಂತರ 140 ಕೋಟಿ ಜನರು ಮಾತ್ರವಲ್ಲ, ಇಡೀ ವಿಶ್ವವೇ ಭಾರತದ ಹಿಂದೆ ನಿಂತಿದೆ. ಭಯೋತ್ಪಾದನೆಯನ್ನು ಶಮನ ಮಾಡಲು ವಿಶ್ವದ ಎಲ್ಲ ರಾಷ್ಟ್ರಗಳು ನಮ್ಮ ಜೊತೆ ಬರುತ್ತವೆ. ಭಯೋತ್ಪಾದನೆ ನಿರ್ಮೂಲನೆ ಮಾಡುವುದು ನಮ್ಮ ಹೋರಾಟ. ಕೃತ್ಯ ಎಸಗಿದವರಿಗೆ ಶಿಕ್ಷೆ ಅಂತೂ ಗ್ಯಾರಂಟಿ ನೀಡಲಾಗುವುದು ಎಂಬ ಸಂಕಲ್ಪವನ್ನು ಪುನರುಚ್ಚರಿಸಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment