newsfirstkannada.com

ಪ್ರಧಾನಿ ಮೋದಿ ವಿಚಾರದಲ್ಲಿ ಈ ನಿಯಮವನ್ನೇ ಕೈಬಿಟ್ಟಿತಾ ಬಿಜೆಪಿ..? ಏನದು..?

Share :

Published May 12, 2024 at 9:32pm

  ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಗೈದ ದೆಹಲಿ ಆಪ್​​ ನಾಯಕ

  ತಿಹಾರ್ ಜೈಲಿನಲ್ಲಿ 50 ದಿನಗಳ ಸೆರೆವಾಸ ಅನುಭವಿಸಿದ ಸಿಎಂ ಅರವಿಂದ್

  75 ವರ್ಷ ಆದ್ರೂ ಮೋದಿಯೇ ಪ್ರಧಾನಿ ಆಗ್ತಾರೆ ಎಂದ ಅಮಿತ್​​ ಶಾ

ತಿಹಾರ್ ಜೈಲಿನಿಂದ ಹೊರ ಬರ್ತಿದ್ದಂತೆ ಆಪ್​​ ನಾಯಕ ಹೊಸ ಬಾಂಬ್​ ಸಿಡಿಸಿದ್ದಾರೆ. ಬಿಜೆಪಿಯನ್ನೇ ಟಾರ್ಗೆಟ್​​ ಮಾಡಿ ಮಾತಿನ ಪ್ರಹಾರ ನಡೆಸಿದ ಕೇಜ್ರಿವಾಲ್​​​ ಪ್ರಧಾನಿ ಕುರ್ಚಿ ಅಲುಗಾಡುವಂತೆ ಮಾಡಿದ್ದರು. ಆದ್ರೇ ಇದಕ್ಕೆ ಟಕ್ಕರ್​​ ಕೊಟ್ಟಿರೋ ಅಮಿತ್​​ ಶಾ, 75 ವರ್ಷ ಆದ್ರೂ ಮೋದಿಯೇ ಪ್ರಧಾನಿ ಆಗ್ತಾರೇ ಅಂತ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

75 ವರ್ಷಕ್ಕೆ ನಿವೃತ್ತಿಯಾಗೋ ನಿಯಮ ತಂದಿದ್ದ ಬಿಜೆಪಿ, ಮೋದಿ ವಿಚಾರದಲ್ಲಿ ಈ ನಿಯಮಕ್ಕೆ ತಿಲಾಂಜಲಿ ಇಟ್ಟಿತಾ ಅನ್ನೋ ಪ್ರಶ್ನೇ ಹುಟ್ಟಿಸಿದೆ. ತಿಹಾರ್ ಜೈಲಿನಲ್ಲಿ 50 ದಿನಗಳ ಸೆರೆವಾಸ ಅನುಭವಿಸಿ ಹೊದ ಬಂದ ದೆಹಲಿ ಸಿಎಂ ಅರವಿಂದ್ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ. ಬಿಜೆಪಿ ಆಂತರಿಕ ವಿಷಯಗಳಿಗೆ ಕೈ ಹಾಕಿ ಬಿಜೆಪಿ ಬೇಸ್​​ ಅನ್ನೇ ಅಲುಗಾಡಿಸುವ ಪ್ರಯತ್ನ ಮಾಡಿದ್ದರು.

ನಿನ್ನೆ ಸುದ್ದಿಗೋಷ್ಠಿ ನಡೆಸಿ ಗುಜರಾತ್​​ ಲಾಭಿಯನ್ನೇ ಟಾರ್ಗೆಟ್​​​ ಮಾಡಿದ್ದ ಕೇಜ್ರಿವಾಲ್​​​​ ಬಿಜೆಪಿಯಲ್ಲಿ ಮೋದಿ ನಂತರ ಮುಂದಿನ ಪ್ರಧಾನಿ ಯಾರು ಅನ್ನೋ ಚರ್ಚೆ ಮುನ್ನೆಲೆಗೆ ತಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಮುಂದಿನ ಸೆಪ್ಟೆಂಬರ್‌ 17ಕ್ಕೆ ರಿಟೈರ್‌ ಆಗ್ತಿದ್ದಾರೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೇ ಸರ್ಕಾರ ಬಂದ್ರೆ ಯೋಗೀಜಿಯನ್ನ ಮೂಲೆಗುಂಪು ಮಾಡ್ತಾರೆ. ಬಳಿಕ ಮೋದಿಯವ್ರ ಆಪ್ತ ಅಮಿತ್‌ ಶಾರನ್ನ ಪ್ರಧಾನಿ ಮಾಡ್ತಾರೆ ಅಂತ ಹೇಳಿದ್ದರು.

ಅರವಿಂದ್ ಕೇಜ್ರಿವಾಲ್​ ಹೇಳಿಕೆಗೆ ಅಮಿತ್​​ ಶಾ ಟಕ್ಕರ್​​

ದಿಲ್ಲಿ ಸಿಎಂ ಹೇಳಿಕೆಗೆ ಬಿಜೆಪಿ ಚಾಣಕ್ಯ ಅಮಿತ್​​ ಶಾ ಟಕ್ಕರ್​​ ಕೊಟ್ಟಿದ್ದಾರೆ. ಪ್ರಧಾನಿ ಮೋದಿಗೆ 75 ವರ್ಷ ತುಂಬಿದ ಬಗ್ಗೆ ಕೇಜ್ರಿವಾಲ್ ಸಂತೋಷ ಪಡಬೇಕಾಗಿಲ್ಲ. ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಗೃಹ ಸಚಿವ ಅಮಿತ್​ ಶಾ ತಿರುಗೇಟು ನೀಡಿದ್ದಾರೆ.

ಮೋದಿಗೆ 75 ವರ್ಷದ ಬಗ್ಗೆ ಕೇಜ್ರಿವಾಲ್​​ ಮತ್ತು ಇಂಡಿಯಾ ಅಲಾಯನ್ಸ್​​​​ ಸಂತೋಷ ಪಡಬೇಕಿಲ್ಲ. ಆ ರೀತಿ ಬಿಜೆಪಿಯ ಸಂವಿಧಾನದಲ್ಲಿ ಎಲ್ಲೂ ಕೂಡ ಉಲ್ಲೇಖಿಸಿಲ್ಲ, ಮೋದಿ ಅವರೇ ಮುಂದಿನ ಅವಧಿ ಪೂರ್ಣಗೊಳಿಸುತ್ತಾರೆ. ಮೋದಿ ಜಿ ಅವರೇ ದೇಶದ ನೇತೃತ್ವವನ್ನು ವಹಿಸುತ್ತಾರೆ. ಈ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ.

– ಅಮಿತ್​ ಶಾ, ಗೃಹ ಸಚಿವ

ಮೋದಿ ಅವರು ಮೂರನೇ ಬಾರಿಗೆ ಮತ್ತೇ ಆಗ್ತಾರೇ ಎಂದು ಅಮಿತ್​ ಶಾ ಹೇಳಿರುವುದು ಸಾಕಷ್ಟು ಚರ್ಚೆ ಕಾರಣವಾಗಿದೆ. ಬಿಜೆಪಿಯಲ್ಲಿ 75 ವರ್ಷ ದಾಟಿದ ನಾಯಕರು ನಿವೃತ್ತರಾಗಬೇಕು ಎಂದು ಸ್ವತಃ ಬಿಜೆಪಿ ನಿಯಮ ರೂಪಿಸಿತ್ತು. ಅದರಂತೆ ಎಲ್​ಕೆ ಅಡ್ವಾಣಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರಿಗೆ ವಯಸ್ಸಾಯ್ತು ಅನ್ನೋ ಕಾರಣ ನೀಡಿ ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಮಾಡಿದ್ದರು. ಮೋದಿ ವಿಚಾರದಲ್ಲಿ ಈ ನಿಯಮವನ್ನು ಕೈ ಬಿಟ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಒಟ್ಟಿನಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೇ ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಮತ್ತೆ ಪಿಎಂ ಗದ್ದುಗೆ ಏರುವುದು ಖಚಿವಾಗಿದೆ. ಆದ್ರೆ ಕೇಜ್ರಿವಾಲ್​ ಸಿಡಿಸಿರೋ ಬಾಂಬ್​​ ಬಿಜೆಪಿಯಲ್ಲಿ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ ವಿಚಾರದಲ್ಲಿ ಈ ನಿಯಮವನ್ನೇ ಕೈಬಿಟ್ಟಿತಾ ಬಿಜೆಪಿ..? ಏನದು..?

https://newsfirstlive.com/wp-content/uploads/2024/05/Modi-7.jpg

Load More