Advertisment

ಬಿಗ್​ಬಿ ಫಿಟ್ನೆಸ್​ ಗುಟ್ಟು! ಈ ಪದಾರ್ಥಗಳನ್ನ ತಿನ್ನೋದೇ ಇಲ್ಲ, ಎಷ್ಟು ಗಂಟೆ ನಿದ್ದೆ ಮಾಡ್ತಾರೆ..?

author-image
Ganesh
Updated On
ಬಿಗ್​ಬಿ ಫಿಟ್ನೆಸ್​ ಗುಟ್ಟು! ಈ ಪದಾರ್ಥಗಳನ್ನ ತಿನ್ನೋದೇ ಇಲ್ಲ, ಎಷ್ಟು ಗಂಟೆ ನಿದ್ದೆ ಮಾಡ್ತಾರೆ..?
Advertisment
  • ಅಮಿತಾಬ್ ಬಚ್ಚನ್ ಡಯಟ್ ಪ್ಲಾನ್ ಹೇಗಿದೆ ಗೊತ್ತಾ?
  • ಬೆಳಗ್ಗೆ ಉಪಾಹಾರದ ಜೊತೆ ಏನೆಲ್ಲ ತಿನ್ನುತ್ತಾರೆ?
  • ಮಾನಸಿಕ ಆರೋಗ್ಯದ ಬಗ್ಗೆಯೂ ಜಾಗೃತರಾಗಿದ್ದಾರೆ

ಅಮಿತಾಬ್ ಬಚ್ಚನ್ ಅಭಿಮಾನಿಗಳ ಸ್ಫೂರ್ತಿ. 81ರ ಹರೆಯದಲ್ಲೂ ನಿರಂತರವಾಗಿ ಕೆಲಸ ಮಾಡ್ತಿದ್ದಾರೆ. ಜೊತೆಗೆ ತಮ್ಮ ಫಿಟ್ನೆಸ್​ಗೂ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆಹಾರದಿಂದ ಯೋಗದವರೆಗೆ, ಬಿಗ್​ಬಿ ಕಠಿಣ ನಿಯಮಗಳನ್ನು ಅನುಸರಿಸುತ್ತಾರೆ. ಅವರ ಸಮತೋಲಿತ ಆಹಾರವೇ ಫಿಟ್ನೆಸ್ ಹಿಂದಿನ ಮಂತ್ರವಾಗಿದೆ.

Advertisment

ಬೆಳಗಿನ ಡೈರಿ
ಬಿಗ್​​ಬಿ ತಮ್ಮ ಬ್ಲಾಗ್ ಪೋಸ್ಟ್ ಒಂದರಲ್ಲಿ ತಮ್ಮ ಬೆಳಗಿನ ದಿನಚರಿಯನ್ನು ಉಲ್ಲೇಖಿಸಿದ್ದಾರೆ. ವರ್ಕೌಟ್ ನಂತರ ತುಳಸಿ ಎಲೆಗಳನ್ನು ತಿನ್ನುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಜೊತೆಗೆ ಪ್ರೋಟೀನ್ ಶೇಕ್, ಬಾದಾಮಿ, ಎಳೆ ನೀರು ಮತ್ತು ಓಟ್ ಮೀಲ್ ತೆಗೆದುಕೊಳ್ಳುತ್ತಾರೆ. ಬೆಳಗಿನ ಉಪಾಹಾರದಲ್ಲಿ ಖರ್ಜೂರ ಮತ್ತು ನೆಲ್ಲಿ ಕಾಯಿಯನ್ನು ಸಹ ತಿನ್ನುತ್ತಾರೆ. ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಇರುವಂತೆ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ:50 ವರ್ಷಗಳ ಕಾಲ ತರುಣಿಯಂತೆ ಯಂಗ್ ಆಗಿರಿ.. ಲಕಲಕ ಹೊಳೆಯಲು ನಿಮ್ಮ ಲೈಫ್​ಸ್ಟೈಲ್ ಹೇಗಿರಬೇಕು?

ಮಧ್ಯಾಹ್ನ ಹೆಂಗೆ?
ಮಧ್ಯಾಹ್ನದ ಊಟದಲ್ಲಿ ಬೇಳೆಕಾಳು, ತರಕಾರಿ, ರೊಟ್ಟಿ ತಿನ್ನುತ್ತಾರೆ. ಅಮಿತಾಬ್ ಮಾಂಸಾಹಾರ ಮತ್ತು ಸಿಹಿಯನ್ನು ತ್ಯಜಿಸಿದ್ದಾರೆ. ಅವರೇ ಹೇಳುವಂತೆ ‘ನಾನು ಚಿಕ್ಕವನಿದ್ದಾಗ ತಿನ್ನುತ್ತಿದ್ದೆ. ನಾನೀಗ ನಾನ್ ವೆಜ್, ಸಿಹಿತಿಂಡಿ, ಅನ್ನ ತ್ಯಜಿಸಿದ್ದೇನೆ’ ಎಂದಿದ್ದಾರೆ. ಸಾಕಷ್ಟು ನೀರು ಕುಡಿಯುತ್ತಾರೆ ಮತ್ತು ಸ್ವತಃ ಹೈಡ್ರೇಟ್ ಆಗಿರುತ್ತಾರೆ. ನಿರಂತರ ಕೆಲಸ, ಜಾಗಿಂಗ್, ತೂಕದಲ್ಲಿ ಗಮನ, ಯೋಗ, ಪ್ರಾಣಾಯಾಮವನ್ನೂ ಮಾಡುತ್ತಾರೆ. ಹಾಗೆಯೇ ಮಾನಸಿಕ ಆರೋಗ್ಯದ ಬಗ್ಗೆಯೂ ಜಾಗೃತರಾಗಿದ್ದಾರೆ. 8 ಗಂಟೆ ಸರಿಯಾಗಿ ನಿದ್ದೆ ಮಾಡುತ್ತಾರೆ.

Advertisment

ಅಮಿತಾಬ್ ಬಚ್ಚನ್ ಕೊನೆಯದಾಗಿ ಕಲ್ಕಿ 2998 AD ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈಗ ಅಮಿತಾಬ್ ಕೈಯಲ್ಲಿ ಎರಡು ಚಿತ್ರಗಳಿವೆ.

ಇದನ್ನೂ ಓದಿ:ಇವರು ವಿಶ್ವದ ದೀರ್ಘಾಯುಷಿ.. 2ನೇ ವಿಶ್ವಯುದ್ಧ ಕಣ್ಣಾರೆ ಕಂಡ ಏಕೈಕ ವ್ಯಕ್ತಿ, ಅಜ್ಜನ ಲೈಫ್​ಸ್ಟೈಲ್ ರೋಚಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment