/newsfirstlive-kannada/media/post_attachments/wp-content/uploads/2024/11/KPL_JATRE.jpg)
ಕೊಪ್ಪಳ: ಶ್ರೀಗವಿಸಿದ್ದೇಶ್ವರ ಅಜ್ಜನ ಜಾತ್ರೆಯು ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಯಲ್ಲಿ ಲಕ್ಷಾಂತರ ಜನರು ಕಾಲಿಡಲು ಸ್ಥಳ ಇಲ್ಲದಂತೆ ಕಿಕ್ಕಿರಿದು ಸೇರುತ್ತಾರೆ. ಒಂದು ತಿಂಗಳು ನಡೆಯುವ ಜಾತ್ರೆ ಕಣ್ಣು ತುಂಬಿಕೊಳ್ಳುವುದೇ ಭಕ್ತರ ವೈಭವ. ಬೇರೆ ಬೇರೆ ಪ್ರದೇಶದಿಂದ ಭಕ್ತಾದಿಗಳು ಆಗಮಿಸುವುದು ಸಾಮಾನ್ಯ. ಆದರೆ ಈ ಸಲ ಜಾತ್ರೆಗೆ ಬಾಲಿವುಡ್ ಬಿಗ್ ಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ:BPL ಕಾರ್ಡ್ ಇರೋರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.. APL ಆಗಿದೆಯಾ ಅಂತ ಚೆಕ್ ಮಾಡಿಕೊಳ್ಳಿ!
ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರೆಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಈ ಬಾರಿಯ ಜಾತ್ರೆಗೆ ಬಾಲಿವುಡ್ನ ಹಿರಿಯ ನಟ ಅಮಿತಾಬ್ ಬಚ್ಚನ್ರನ್ನ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕು ಎಂದು ಆಹ್ವಾನಿಸಲಾಗಿದೆ. 2025ರ ಜನವರಿ 15 ರಿಂದ ಅಜ್ಜನ ಜಾತ್ರೆ ಭರ್ಜರಿಯಾಗಿ ನಡೆಯಲಿದೆ. ಲಕ್ಷಾಂತರ ಭಕ್ತರು ಸೇರುವ ಜಾತ್ರೆಗೆ ಗಣ್ಯರನ್ನು ಆಹ್ವಾನ ಮಾಡಲಾಗುತ್ತಿದೆ. ಬಿಗ್ ಬಿ ಅಮಿತ್ ಬಚ್ಚನ್ ಅವರು ಅಜ್ಜನ ಜಾತ್ರೆಗೆ ಬರುವ ಸಾಧ್ಯತೆ ಇದೆ.
ಶ್ರೀ ಗವಿಸಿದ್ದೇಶ್ವರ ಗವಿಮಠದವರ ಆಹ್ವಾನಕ್ಕೆ ಅಮಿತಾಬ್ ಬಚ್ಚನ್ ಅವರು ಸಕಾರಾತ್ಮಕ ಸ್ಪಂದಿಸಿದ್ದಾರೆ. ದಕ್ಷಿಣದ ಕುಂಭ ಮೇಳ ಎಂದೇ ಖ್ಯಾತಿ ಪಡೆದ ಗವಿಸಿದ್ದೇಶ್ವರ ಮಠದ ಜಾತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು ಭಕ್ತರು ಕಾಣಿಸುತ್ತಾರೆ. ಈ ಜಾತ್ರೆಯು ಸಾಧಕರನ್ನು ಪರಿಚಯಿಸುವುದರ ಜೊತೆಗೆ ಸಮಾಜದ ಕಳಕಳಿ ಇಟ್ಟುಕೊಂಡು ಅದ್ಧೂರಿಯಾಗಿ ನಡೆಯುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ