/newsfirstlive-kannada/media/post_attachments/wp-content/uploads/2024/10/AMITABH-BACHCHAN-KBC.jpg)
ಕೌನ್ ಬನೆಗಾ ಕರೋಡ್​ಪತಿ ಸೀಸನ್ 16ರಲ್ಲಿ ಬಾಲಿವುಡ್​ನ ಹಿರಿಯ ನಟ ಹಾಗೂ ಕಾರ್ಯಕ್ರಮದ ನಿರೂಪಕ ಅಮಿತಾಬಚ್ಚನ್​ ತಮ್ಮ ಬದುಕಿನ ಒಂದು ವೈಯಕ್ತಿಕ ವಿಷಯವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಅಂತರ್​ಜಾತಿ ಸಂಬಂಧಗಳ ಬಗ್ಗೆ ಸ್ಪರ್ಧಿ ಕೃತಿ ಮಾತನಾಡುತ್ತಿದ್ದ ವೇಳೆ ಬಿಗ್​ ಬಿ ತಮ್ಮನ್ನು ತಾವು ಹಾಫ್ ಸರ್ದಾರ್ ಎಂದು ಹೇಳುವ ಮೂಲಕ ಅವರ ಪೋಷಕರ ಅಂತರ್​ಜಾತಿ ವಿವಾವಹದ ವಿಚಾರವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ತಾವು ಕೂಡ ಸಿಖ್​ ಮೂಲದವರು ಎಂದು ಈ ವೇಳೆ ಹೇಳಿರುವ ಬಿಗ್​ಬಿ ತಮ್ಮ ತಾಯಿ ತೇಜಿ ಬಚ್ಚನ್ ಸಿಖ್ ಸಮುದಾಯದವರು ಹಾಗೂ ಅವರ ಚಿಕ್ಕಮ್ಮ ಅವರನ್ನು ಅಮಿತಾಬ್ ಸಿಂಗ್ ಅಂತಲೇ ಕರೆಯುತ್ತಾರೆ ಎಂಬುದನ್ನು ಸಹ ಹೇಳಿದ್ದಾರೆ.
ಇದನ್ನೂ ಓದಿ:ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ.. ತಪ್ಪಿನ ಅರಿವಾಗಿ ಕ್ಷಮೆ ಕೋರಿದ ಸಚಿವೆ ಕೊಂಡ ಸುರೇಖಾ
ಈ ವಿಷಯ ಮಾತನಾಡುವ ವೇಳೆ ಅಮಿತಾಬ್​ ಬಚ್ಚನ್ ಅವರು, ನನಗೆ ಇದನ್ನು ಅಂತರ್​​ಜಾತಿ ಎಂದು ಕರೆಯಲು ಒಂದು ರೀತಿಯ ವಿಚಿತ್ರ ಅನಿಸುತ್ತದೆ. ಆದರೂ ಕೂಡ ಹೇಳುತ್ತೇನೆ. ನಮ್ಮ ತಂದೆ ಮೂಲತಃ ಉತ್ತರ ಪ್ರದೇಶದವರು. ನಮ್ಮ ತಾಯಿ ಸಿಖ್ ಕುಟುಂಬದಿಂದ ಬಂದವರು. ಹೀಗಾಗಿ ನಾನು ಹಾಫ್ ಸರ್ದಾರ್​ ಎಂಬುದನ್ನು ನಂಬುತ್ತೇನೆ ಎಂದು ಕಾರ್ಯಕ್ರಮವನ್ನು ನಗೆಗಡಲಲ್ಲ ತೇಲಿಸಿದರು. ನಾನು ಹುಟ್ಟಿದಾಗ ನನ್ನ ತಾಯಿಯ ಸಹೋದರಿಯರು ಪಂಜಾಬಿ ಭಾಷೆಯಲ್ಲಿ ಎಷ್ಟು ಮುದ್ದಾದ ಮಗ ಹುಟ್ಟಿದ್ದಾನೆ ಎಂದು ಸಂತಸಪಟ್ಟಿದ್ದರು ಎಂದು ಹೇಳಿದ್ದಾರೆ.
ಉತ್ತರಪ್ರದೇಶದಿಂದ ಬಂದ ಸ್ಪರ್ಧಿ ಸುಕೃತಿ ತಮ್ಮ ಜೀವನದ ವೈಯಕ್ತಿಕ ವಿಷಯವನ್ನು ಹಂಚಿಕೊಳ್ಳುವಾಗ ಅವರ ತಂದೆಗೆ ಕೆಬಿಸಿಯಲ್ಲಿ ಸ್ಪರ್ಧಿಯಾಗಿ ಬರಬೇಕು ಎಂಬ ಆಸೆಯಿತ್ತಂತೆ ಆದ್ರೆ ಅದು ಸಾಧ್ಯವಾಗಲಿಲ್ಲವಂತೆ. ಅವರು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡ ಕಾರಣ ಅದು ಸಾಧ್ಯವಾಗಲಿಲ್ಲ ಎಂದು ಸುಕೃತಿ ಹೇಳಿದ್ದಾರೆ. ಮನೆಯಲ್ಲಿದ್ದಾಗ ಅವರು ಕೆಬಿಸಿ ಪ್ರಶ್ನೆಗಳಿಗೆ ಉತ್ತರಿಸುವುದರಿಂದಲೇ ನಾನು ಇಲ್ಲಿಗೆ ಬರಲು ಸಾಧ್ಯವಾಗಿದ್ದು ಈ ಮೂಲಕ ನಾನು ನಮ್ಮ ತಂದೆಯ ಕನಸನ್ನು ಪೂರ್ಣಗೊಳಿಸಿದ್ದೇನೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us