83 ಕೋಟಿಗೆ ಡ್ಯೂಪ್ಲೆಕ್ಸ್ ಮನೆ ಮಾರಿದ ಬಿಗ್​​ಬಿಗೆ ಜಾಕ್​ಪಾಟ್​; ಶೇ 168 ರಷ್ಟು ಲಾಭ..!

author-image
Gopal Kulkarni
Updated On
83 ಕೋಟಿಗೆ ಡ್ಯೂಪ್ಲೆಕ್ಸ್ ಮನೆ ಮಾರಿದ ಬಿಗ್​​ಬಿಗೆ ಜಾಕ್​ಪಾಟ್​; ಶೇ 168 ರಷ್ಟು ಲಾಭ..!
Advertisment
  • ಓಶಿವಾರಾದಲ್ಲಿರುವ ಡ್ಯುಪ್ಲೆಕ್ಸ್ ಮನೆ ಮಾರಿದ ಅಮಿತಾಬ್​ ಬಚ್ಚನ್
  • ಕೇವಲ 4 ವರ್ಷದಲ್ಲಿ ಬಿಗ್​ ಬಿ ಗಳಿಸಿದ ಲಾಭವೆಷ್ಟು ಅಂತ ಗೊತ್ತಾ?
  • 2021ರಲ್ಲಿ ಈ ಬಂಗಲೆ ಖರೀದಿ ಮಾಡಿದ್ದರು ಅಮಿತಾಬ್​ ಬಚ್ಚನ್​​

ಬಾಲಿವುಡ್ ಮೆಗಾಸ್ಟಾರ್​ ಅಮಿತಾಬ್ ಬಚ್ಚನ್​ ಓಶಿವಾರಾದಲ್ಲಿರುವ ತಮ್ಮ ಸ್ಪ್ರಾವ್​ಲಿಂಗ್​ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​​ನ್ನ ಸುಮಾರು 83 ಕೋಟಿ ರೂಪಾಯಿಗೆ ಮಾರಿದ್ದಾರೆ. ಇನ್​ಸ್ಪೆಕ್ಟರ್​ ಜನರಲ್ ಆಫ್ ರಜಿಸ್ಟ್ರೇಷನ್ ಮಹಾರಾಷ್ಟ್ರದ ವೆಬ್​ಸೈಟ್​ನಲ್ಲಿ ಅಪಾರ್ಟ್​ಮೆಂಟ್ ಮಾರಾಟವಾದ ಬಗ್ಗೆ ದಾಖಲಾಗಿದೆ. ಖರೀದಿ ಒಪ್ಪದ ಜನವರಿ 2025ರಕ್ಕೆ ಅಂತಿಮಗೊಂಡಿದೆ ಎಂದು ಸ್ಪಷ್ಟನೆ ನೀಡಲಾಗಿದೆ.

ಈ ಐಷಾರಾಮಿ ಆಸ್ತಿಯೂ ಮುಂಬೈನ ಅಂಟ್ಲಾಟಿಸ್​ನಲ್ಲಿ ನೆಲೆಗೊಂಡಿದೆ. ಕ್ರಿಸ್ಟಲ್ ಗ್ರೂಪ್​ನ ಯೋಜನೆಯ ಭಾಗವಾಗಿದ್ದ ಇದು ಒಟ್ಟು 1.55 ಎಕರೆ ವಿಸ್ತಿರ್ಣದಲ್ಲಿ ಓಶಿವಾರಾದಲ್ಲಿ ಹರಡಿಕೊಂಡಿತ್ತು. ಈ ಒಂದು ಅಪಾರ್ಟ್​ಮೆಂಟ್ ತನ್ನ ವೈಬ್ರಂಟ್ ಲೈಫ್​ಸ್ಟೈಲ್ ಹಾಗೂ ಐಷಾರಾಮಿ ನೋಟಕ್ಕೆ ಹೆಸರಾಗಿತ್ತು. ಲೋಖಂಡವಾಲಾ ಕಾಂಪ್ಲೆಕ್ಸ್​ನಲ್ಲಿ ನಿರ್ಮಾಣವಾಗಿತ್ತು. ಅತ್ಯುತ್ತಮ ರಸ್ತೆ, ಮೆಟ್ರೋ ಸಂಪರ್ಕ ಮಾರುಕಟ್ಟೆಗಳು ಇವೆಲ್ಲವೂ ಈ ಅಪಾರ್ಟ್​​ಮೆಂಟ್​ಗೆ ಅತ್ಯಂತ ಹತ್ತಿರವಾಗಿದ್ದವು.

ಇದನ್ನೂ ಓದಿ:ಭಾರೀ ದಂಡ ತೆತ್ತ ಕಾಂತಾರ 2 ಚಿತ್ರತಂಡ.. ಶೂಟಿಂಗ್ ವೇಳೆ ಯಡವಟ್ಟು

ರಿಜಿಸ್ಟ್ರೇಷನ್​ ವಿವರಗಳ ಪ್ರಕಾರ ಡ್ಯುಪ್ಲೆಕ್ಸ್​ ಅಪಾರ್ಟ್​ಮೆಂಟ್​ ಸುಮಾರು 529.94 ಸ್ಕ್ವೇರ್ ಮೀಟರ್​ನಲ್ಲಿ ನಿರ್ಮಾಣವಾಗಿದೆ. ಅದರಲ್ಲಿ ಕಾರ್ಪೆಟ್ ಏರಿಯಾ 481.75 ಸ್ಕ್ವೇರ್​ ಮೀಟರ್ ಒಳಗೊಂಡಿದೆ. ಅಪಾರ್ಟ್​​ಮೆಂಟ್​ನ ಟೆರಸ್​ ಕೂಡ 445.93 ಸ್ಕ್ವೇರ್​ ಮೀಟರ್​​ನಲ್ಲಿ ಹರಡಿಕೊಂಡಿದೆ. ಒಟ್ಟು ಆರು ಕಾರ್​ ಪಾರ್ಕಿಂಗ್​ಗಳಿಗೆ ಜಾಗದ ವ್ಯವಸ್ಥೆಯಿದೆ. ಈ ಎಲ್ಲಾ ವ್ಯವಹಾರ ಮುಗಿಯಲು ಸ್ಟಾಂಪ್​ ಡ್ಯೂಟಿಗಾಗಿ ಒಟ್ಟು 4.98 ಕೋಟಿ ರೂಪಾಯಿ ಹಾಗೂ ರಜಿಸ್ಟ್ರೇಷನ್ ಚಾರ್ಜ್​​ಗೆ 30 ಸಾವಿರ ರೂಪಾಯಿ ನೀಡಲಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖಗೊಂಡಿದೆ.

ಇದನ್ನೂ ಓದಿ:ದರ್ಶನ್ ಪತ್ರಕ್ಕೆ ಡೋಂಟ್​ ಕೇರ್ ಎಂದ ಪೊಲೀಸರು.. ದಾಸನಿಗೆ ಮತ್ತೊಂದು ಸಂಕಷ್ಟ..!

ಅಮಿತಾಬ್​ ಬಚ್ಚನ್ ಈ ಐಷಾರಾಮಿ ಬಂಗಲೆಯನ್ನು ಏಪ್ರಿಲ್​ 2021ರಲ್ಲಿ ಸುಮಾರು 31 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು. ನಾಲ್ಕು ವರ್ಷದ ಬಳಿಕ ಈಗ 83 ಕೋಟಿ ರೂಪಾಯಿಗೆ ಮಾರಿದ್ದಾರೆ ಒಟ್ಟು ಶೇಕಡಾ 168ರಷ್ಟು ಹೆಚ್ಚಿನ ಲಾಭ ಪಡೆದಿದ್ದಾರೆ. ಅದು ಕೇವಲ ಬರೀ ನಾಲ್ಕು ವರ್ಷಗಳಲ್ಲಿ. ಇದೇ ಆಸ್ತಿಯನ್ನು ನಟಿ ಕೀರ್ತಿ ಸನೋನ್​ಗೆ ನವೆಂಬರ್​ 2021ರಲ್ಲಿ ತಿಂಗಳಿಗೆ 10 ಲಕ್ಷ ರೂಪಾಯಿಗೆ ಬಾಡಿಗೆ ನೀಡಲಾಗಿತ್ತು. ಸೆಕ್ಯೂರಿಟಿ ಡಿಪಾಸಿಟ್ ಆಗಿ 60 ಲಕ್ಷ ರೂಪಾಯಿಯನ್ನು ಸ್ವೀಕರಿಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment