Advertisment

ಈ ಹೋಟೆಲ್​​ನ ಕೇವಲ ಒಂದು ತಿಂಗಳ ಆದಾಯ 8 ಕೋಟಿ ರೂಪಾಯಿಗಳು.. ಏನ್​ ಸ್ಪೆಷಲ್​​?

author-image
Bheemappa
Updated On
ಈ ಹೋಟೆಲ್​​ನ ಕೇವಲ ಒಂದು ತಿಂಗಳ ಆದಾಯ 8 ಕೋಟಿ ರೂಪಾಯಿಗಳು.. ಏನ್​ ಸ್ಪೆಷಲ್​​?
Advertisment
  • ದಿನಕ್ಕೆ ಎಷ್ಟು ಸಾವಿರ ಗ್ರಾಹಕರು ಈ ಹೋಟೆಲ್​ಗೆ ಬಂದು ಹೋಗ್ತಾರೆ?
  • 1956ರಲ್ಲಿ ಪ್ರಾರಂಭವಾದ ಈ ಹೋಟೆಲ್​ ಈಗಲೂ ಫುಲ್ ಫೇಮಸ್
  • ಒಂದು ವರ್ಷಕ್ಕೆ ಒಟ್ಟು ಎಷ್ಟು ಆದಾಯ ಮಾಡುತ್ತದೆ ಈ ಹೋಟೆಲ್?

ಪ್ರತಿಯೊಬ್ಬರಿಗೂ ಕೈ ಹಿಡಿಯುವಂತಹ ಬ್ಯುಸಿನೆಸ್ ಎಂದರೆ ಅದು ಹೋಟೆಲ್ ಉದ್ಯಮ ಎನ್ನಬಹುದು. ಏಕೆಂದರೆ ಅತ್ಯುತ್ತಮ ಆಹಾರ ಇದ್ದರೇ ಹೋಟೆಲ್​ ಅನ್ನು ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಒಮ್ಮೆ ಹೋಟೆಲ್ ಕ್ಲಿಕ್ ಆದರೆ ಅಷ್ಟೇ ಹಾಕಿದ ಹಣಕ್ಕೆ ಡಬಲ್ ದುಡ್ಡು ಬರುವುದರ ಜೊತೆಗೆ ಅದರ ಖ್ಯಾತಿ, ಹೆಸರು ಎಲ್ಲೆಡೆ ಪ್ರಚಾರ ಪಡೆದುಬಿಡುತ್ತೆ. ಸದ್ಯ ಇಂತಹದ್ದೇ ಒಂದು ಹೋಟೆಲ್ ಇದ್ದು ಇದು ವರ್ಷಕ್ಕೆ 100 ಕೋಟಿ ರೂಪಾಯಿಗಳ ವ್ಯವಹಾರ ಮಾಡುತ್ತದೇ ಎಂದು ಹೇಳಲಾಗುತ್ತಿದೆ.

Advertisment

publive-image

ಈಗ ಹೇಳುತ್ತಿರುವುದು ಹರಿಯಾಣದ ಮುರ್ತಾಲ್​ನ ಗ್ರ್ಯಾಂಡ್​ ಟ್ರಂಕ್​ ರೋಡ್​ನ 250 ಕಿಮೀ ಸ್ಟೋನ್​ ಬಳಿಯ ನಂಬರ್​-52ರಲ್ಲಿ ಇರುವ ಅಮ್ರಿಕ್ ಸುಖದೇವ್ ಧಾಬಾ. ಇದು ಮೊದಲು ರಸ್ತೆ ಬದಿಯ ಸಣ್ಣ ಹೋಟೆಲ್ ಆಗಿತ್ತು. 1956ರಲ್ಲಿ ಸರ್ದಾರ್ ಪ್ರಕಾಶ್ ಸಿಂಗ್ ಅವರು ಟ್ರಕ್​, ಕಾರು, ಟ್ರ್ಯಾಕ್ಟರ್ ಡ್ರೈವರ್​ಗಳ ಊಟಕ್ಕಾಗಿ ಆರಂಭಿಸಿದ್ದರು. ಮೊದಲು ಹೋಟೆಲ್​ನಲ್ಲಿ ದಾಲ್, ರೋಟಿ, ಸಬ್ಜಿ ಮತ್ತು ಅನ್ನ ನೀಡಲಾಗುತ್ತಿತ್ತು.

ಆದರೆ ಈಗ ಎಲ್ಲ ಬದಲಾಗಿದ್ದು ಸರ್ದಾರ್ ಪ್ರಕಾಶ್ ಸಿಂಗ್ ಮಕ್ಕಳಾದ ಅಮ್ರಿಕ್ ಸಿಂಗ್ ಹಾಗೂ ಸುಖದೇವ್ ಸಿಂಗ್ ಅವರು ಅಮ್ರಿಕ್ ಸುಖದೇವ್ ಧಾಬಾವನ್ನು ನೋಡಿಕೊಳ್ಳುತ್ತಿದ್ದಾರೆ. ಅಮ್ರಿಕ್ ಸುಖದೇವ್ ಧಾಬಾದಲ್ಲಿ ಉತ್ತರ ಭಾರತ, ದಕ್ಷಿಣ ಭಾರತ ಹಾಗೂ ಚೈನೀಸ್​ ಕಾಂಟಿನೆಂಟಲ್​ ಸಿಹಿ ತಿನಿಸುಗಳು ಕೂಡ ಇರುತ್ತವೆ.

publive-image

2000ರಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರ ಆದ ಈ ಹೋಟೆಲ್ ಡೆಲ್ಲಿ, ಎನ್​​ಸಿಆರ್, ಪಂಜಾಬ್, ಹಿಮಾಚಲಕ್ಕೆ ಹೋಗುವ ಗ್ರಾಹಕರನ್ನು ಸೆಳೆಯುತ್ತಿದೆ. ಅತ್ಯುತ್ತಮ ವಿಧ ವಿಧವಾದ ಆಹಾರ ಈ ಹೋಟೆಲ್​ನಲ್ಲಿ ಸಿಗುವುದರಿಂದ ಸಾಕಷ್ಟು ಜನರನ್ನು ಸೆಳೆಯುತ್ತಿದೆ.

Advertisment

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಕಂಟೆಂಟ್​ ಕ್ರಿಯೇಟರ್ ರಾಕಿ ಸಾಗ್ಗೂ ಕ್ಯಾಪಿಟಲ್ ಅಮ್ರಿಕ್ ಸುಖದೇವ್ ಧಾಬಾದ ಬಗ್ಗೆ ಕೆಲ ಮಾಹಿತಿ ರಿವೀಲ್ ಮಾಡಿದ್ದಾರೆ. ಈ ಹೋಟೆಲ್​ ಅನ್ನು Empire ಎಂದು ಕರೆದಿರುವ ರಾಕಿ ಸಾಗ್ಗೂ ಅವರು, ದಿನಕ್ಕೆ ಈ ಹೋಟೆಲ್​ನ ಮಾಲೀಕ 27 ಲಕ್ಷ ರೂಪಾಯಿ ಗಳಿಸುತ್ತಾರೆ. ಒಂದು ದಿನಕ್ಕೆ 9 ಸಾವಿರದಿಂದ 10 ಸಾವಿರ ಗ್ರಾಹಕರು ಹೋಟೆಲ್​ನಲ್ಲಿ ತಿಂಡಿ, ಊಟ ತಿನ್ನುತ್ತಾರೆ.

ಇದನ್ನೂ ಓದಿ: ಮಹೀಂದ್ರ ಕಂಪನಿಯಿಂದ ಗುಡ್​ನ್ಯೂಸ್​​.. ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದ 2 ವೇರಿಯೆಂಟ್​​ ಕಾರುಗಳು

publive-image

ಹೀಗಾಗಿಯೇ ಈ ಹೋಟೆಲ್​ ತಿಂಗಳಿಗೆ 8,00,00,000 ಕೋಟಿ ರೂಪಾಯಿಗಳನ್ನ ಗಳಿಸುತ್ತದೆ. ವರ್ಷಕ್ಕೆ ಲೆಕ್ಕ ಹಾಕಿದರೆ 100 ಕೋಟಿ ರೂಪಾಯಿಗಳ ಟರ್ನ್​ ಓವರ್ ಇದೆ ಎಂದಿದ್ದಾರೆ. ಇನ್ನೊಂದು ವಿಶೇಷ ಎಂದರೆ 500ಕ್ಕೂ ಅಧಿಕ ಸಿಬ್ಬಂದಿ ಈ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಲೂ ಈ ಹೋಟೆಲ್​ನಲ್ಲಿ ಟ್ರಕ್ ಹಾಗೂ ಕ್ಯಾಬ್​ ಡ್ರೈವರ್​ಗಳಿಗೆ ಉಚಿತ ಊಟ ಅಥವಾ ಡಿಸ್ಕೌಂಟ್​ ಕೊಡುತ್ತಾರಂತೆ. 150ಕ್ಕೂ ಹೆಚ್ಚು ಟೇಬಲ್​ಗಳಿಗೆ ಕೇವಲ 45 ನಿಮಿಷದೊಳಗೆ ಊಟ, ಉಪಾಹಾರ ತಲುಪುತ್ತದೆ. ಇವೆ ಇದರ ಹೆಚ್ಚಿನ ನಂಬಿಕೆ ಗಳಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment