ಆ ಒಂದು ಡೈಲಾಗ್, ಅದ್ಭುತ ಅಭಿನಯದ ಮೂಲಕ ವೀಕ್ಷಕರ ಮನಗೆದ್ದ ನಟಿ
ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳಿದ ನಟಿ ಛಾಯಾ ಸಿಂಗ್ ಮ್ಯಾಜಿಕ್
ನಟಿ ಛಾಯಾ ಸಿಂಗ್ ಅಭಿನಯಕ್ಕೆ ಮನಸೋತ ಅಭಿಮಾನಿಗಳು, ಹೇಳಿದ್ದೇನು?
ಆ ಒಂದು ಡೈಲಾಗ್, ಅಭಿನಯ ವೀಕ್ಷಕರ ಮನಸ್ಸು ಗೆದ್ದಿದೆ. ಹೆಣ್ಮಕ್ಕಳ ನೋವಿಗೆ ಧ್ವನಿಯಾದ ನಟಿ ಛಾಯಾ ಸಿಂಗ್ ನಟನೆಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ಶಬ್ದದಲ್ಲಿ ಅದೆಷ್ಟೋ ಮದುವೆಯಾಗದಿರುವ ಹೆಣ್ಣು ಮಕ್ಕಳ ವೇದನೆ ಅಡಗಿದೆ. ಡೈಲಾಗ್ ರೈಟರ್ಗೆ ಮನೋಜ್ಞವಾಗಿ ಅಭಿನಯಿಸಿದ ಛಾಯಾ ಸಿಂಗ್ಗೆ ಒಂದು ಸಲಾಂ. ಅಂತಾ ಸಾಮಾಜಿಕ ಜಾಲತಾಣದಲ್ಲಿ ಇದೆ ಮಾತುಕತೆ.
ಅಮೃತಧಾರೆ ಸೀರಿಯಲ್ನ ಈ ಸಾಲುಗಳು ಸದ್ಯ ವೈರಲ್ ಆಗುತ್ತಿದೆ. ವಯಸ್ಸು ಮೀರಿದ ಹೆಣ್ಣುಮಗಳಿಗೆ ಮದುವೆ ಅನ್ನೋ ಟಾಪಿಕ್ ಯಾವ ರೀತಿಯ ವೇದನೆಯನ್ನ ತಂದೊಡ್ಡುತ್ತದೆ? ಜೀವನಕ್ಕಿಂತ ಮದುವೆ ದೊಡ್ಡದಾ? ಎಂಬುದನ್ನ ಪ್ರತಿಬಿಂಬಿಸುವ ಅಮೋಘವಾದ ಸೀನ್ ಇದು. ಸದ್ಯ ಈ ಸೀನ್ಗೆ ಭಾರಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ತುಂಬಾ ವರ್ಷಗಳ ನಂತರ ಕನ್ನಡಕ್ಕೆ ಕಾಲಿಟ್ಟುರುವ ನಟಿ ಛಾಯಾ ಸಿಂಗ್ ಅಭಿನಯಕ್ಕೆ ಅಭಿಮಾನಿಗಳೂ ಮನಸೋತಿದ್ದಾರೆ. ಅವರ ಪಾತ್ರ ನಿರ್ವಹಣೆಗೆ ಭೇಷ್ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೇ ನಟಿ ಐಶ್ವರ್ಯಾ ಬಾಗಲಕೋಟೆ, ನಟಿ ಮಾನ್ಸಿ ಜೋಶಿ, ಗೀತಾ ಭಾರತಿ ಭಟ್ ಸೇರಿದಂತೆ ಹಲವು ಕಿರುತೆರೆ ನಾಯಕಿಯರು ಛಾಯಾಸಿಂಗ್ ಅಭಿನಯಕ್ಕೆ ವಾವ್ ವಾವ್ ಫೈಯರ್ ಆ್ಯಕ್ಟಿಂಗ್ ಅಂತಾ ಕಮೆಂಟ್ ಮಾಡಿದ್ದಾರೆ.
ಎಲ್ಲಾ ಟ್ರೋಲ್ ಪೇಜ್ಗಳಲ್ಲೂ ಈ ಸೀನನದ್ದೇ ಮಾತು. ಸೀರಿಯಲ್ ಅಂದ್ರೆ ಮುಖ ಕಿವುಚುವ ಗಂಡುಮಕ್ಕಳು ಕೂಡ ಈ ಸೀನ್ಗೆ ಫಿದಾ ಆಗಿದ್ದಾರೆ. ನಮ್ಮ ತಾಯಿ ನೆನಪಾಗುತ್ತಾರೆ, ನನ್ನ ಅಕ್ಕ-ತಂಗಿ ನೆನಪಾದ್ರೂ ಅಂತಾ ತಮ್ಮ ಮನಸ್ಸಿನ ವೇದನೆಗಳನ್ನ ಕಮೆಂಟ್ ಮೂಲಕ ತಿಳಿಸಿದ್ದಾರೆ. ಒಟ್ಟಿನಲ್ಲಿ ವಾಸ್ತವಕ್ಕೆ ಹತ್ತಿರವಾದ ಡೈಲಾಗ್, ಸರಳ ಸಹಜ ಅಭಿನಯದ ಮೂಲಕ ಅಮೃತಧಾರೆ ಟೀಮ್ ವೀಕ್ಷಕರಿಗೆ ಹತ್ತಿರವಾಗ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ