Advertisment

‘ಅಮೃತಾಂಜನ’ ತಲೆ ನೋವಿಗೆ ಪರಿಹಾರ.. ಈ ಸಂಸ್ಥೆಯ ಸ್ಥಾಪಕ ಯಾರು ಗೊತ್ತಾ? ಹಿನ್ನೆಲೆ ಮಾತ್ರ ಅದ್ಭುತ

author-image
AS Harshith
Updated On
‘ಅಮೃತಾಂಜನ’ ತಲೆ ನೋವಿಗೆ ಪರಿಹಾರ.. ಈ ಸಂಸ್ಥೆಯ ಸ್ಥಾಪಕ ಯಾರು ಗೊತ್ತಾ? ಹಿನ್ನೆಲೆ ಮಾತ್ರ ಅದ್ಭುತ
Advertisment
  • ಸೆಕೆಂಡ್​ಗಳಲ್ಲಿ ತಲೆ ನೋವು ಮಾಯ ಮಾಡೋ ಅಮೃತಾಂಜನ
  • ಈ ಮಹಾನ್ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರರೂ ಹೌದು
  • ಮಾರ್ಕೆಟ್​ ಮಾಡಲು ಅಮೃತಾಂಜನವನ್ನು ಉಚಿತವಾಗಿ ಹಂಚಿದ್ರು

ತಲೆ ನೋವು ಅಂದ್ರೆ ಈಗೀಗ ಮಾತ್ರೆಗಳು, ಬೇರೆ ಬೇರೆ ಬಾಮ್​ಗಳು ಎಲ್ಲಾ ಬಂದಿವೆ. ಆದ್ರೆ, ಅದೊಂದ್ ಕಾಲ ಇತ್ತು, ಯಾರಾದ್ರೂ ತಲೆನೋವು ಅಂದ್ರೆ ಸಾಕು ಅಮೃತಾಂಜನ ಹಚ್ಕೋ ಅನ್ನೋರು. ಅಥವಾ ಯಾರಾದ್ರೂ ಸುಮ್ಮನೆ ತಲೆ ತಿಂತಿದ್ರೂ ಅವ್ರಿಗೂ ಅಮೃತಾಂಜನ ಅನ್ನೋ ಅಡ್ಡ ಹೆಸರನ್ನೇ ಇಡೋರು. ಅಮೃತಾಂಜನ ಪೇನ್ ಬಾಮ್ ಅಷ್ಟೋಂದು ಫೇಮಸ್.

Advertisment

ತಲೆನೋವು, ಕೆಮ್ಮು ಬಂದ್ರೆ ಗಂಟಲಿಗೆ, ಎದೆ ಮೇಲೆ ಅಮೃಂತಾಜನ ಹಚ್ಚಿ ಅಮ್ಮ ಲೈಟಾಗಿ ಮಸಾಜ್ ಮಾಡಿದ್ರೆ, ಎಲ್ಲಾ ನೋವುಗಳೂ ಥಟ್ ಅಂತ ಮಾಯ. ಇಂಥಾ ಅಮೃತಾಂಜನ ಯಾವ ದೇಶದ್ದು, ಇದನ್ನ ಸ್ಥಾಪಿಸಿದ್ದು ಯಾರು? ಇದರ ಹಿಂದಿನ ಕಥೆ ಏನು? ಎಲ್ಲಾ ಕುತೂಹಲಗಳಿಗೂ ಈ ಸ್ಟೋರಿಯಲ್ಲಿ ಇಂಟ್ರೆಸ್ಟಿಂಗ್ ಆಗಿರೋ ಉತ್ತರವಿದೆ.

publive-image

ಅಮೃತಾಂಜನದ ಮೂಲ ಭಾರತ

ಸೆಕೆಂಡ್​ಗಳಲ್ಲಿ ತಲೆ ನೋವು ಮಾಯ ಮಾಡೋ ಅಮೃತಾಂಜನದ ಮೂಲ ನಮ್ಮ ಭಾರತ. ಭಾರತದಲ್ಲಿ ಸ್ಥಾಪನೆಯಾದ ಕಂಪನಿಯಿದು. ಇದನ್ನ ಸ್ಥಾಪಿಸಿದವರು ನಮ್ಮ ದಕ್ಷಿಣ ಭಾರತದವರು ಅನ್ನೋದು ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ. ಇಂದಿನ ಆಂಧ್ರಪ್ರದೇಶ ಮೂಲದವರಾದ ಕಾಸಿನಾಥುನಿ ನಾಗೇಶ್ವರ ರಾವ್ ಪಂತುಲು ಅಮೃತಾಂಜನ ಸಂಸ್ಥೆಯ ಸಂಸ್ಥಾಪಕರು. ಇವ್ರು, ಕೇವಲ ಅಮೃತಾಂಜನ ಸಂಸ್ಥೆಗೆ ಮಾತ್ರ ಫೇಮಸ್ ಅಲ್ಲ, ಈ ಮಹಾನ್ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರರೂ ಹೌದು, ಅದೇ ರೀತಿ ಪತ್ರಕರ್ತರಾಗಿಯೂ ತಮ್ಮ ಸೇವೆಯನ್ನ ಭಾರತಕ್ಕೆ, ಭಾರತೀಯರಿಗೆ ನೀಡಿದ್ದಾರೆ.

ನಾಗೇಶ್ವರ್ ರಾವ್ ಹಿನ್ನೆಲೆ

ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಕೃಷ್ಣಾ ಜಿಲ್ಲೆಯ ಪೆಸರಮಿಲ್ಲಿ ಅನ್ನೋ ಗ್ರಾಮದಲ್ಲಿ ಮೇ 1ನೇ ತಾರೀಕು 1867ರಲ್ಲಿ ಜನಿಸಿದವರು ನಾಗೇಶ್ವರ ರಾವ್. ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಾಗೇಶ್ವರ ರಾವ್, ನಂತರದ ಶಿಕ್ಷಣವನ್ನ ಮಚಿಲಿಪಟ್ನಂನಲ್ಲಿ ಪಡೆದ್ರು. 1891ರಲ್ಲಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಮುಗಿಸುತ್ತಾರೆ. ಮದ್ರಾಸ್​ನಲ್ಲಿರುವಾಗಲೇ ಬ್ಯುಸಿನೆಸ್​ನಲ್ಲಿ ಆಸಕ್ತಿ ಬೆಳೆಸಿಕೊಂಡ ನಾಗೇಶ್ವರ್ ರಾವ್ ಅಲ್ಲೇ ಸಣ್ಣಪುಟ್ಟ ಉದ್ಯಮಗಳನ್ನ ಮಾಡುತ್ತಾರೆ.

Advertisment

ಇದನ್ನೂ ಓದಿ: ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ ಬರಲಿದೆ ಈ ವೈಶಿಷ್ಟ್ಯ.. ಏನದು?

publive-image

ಔಷಧ ಉದ್ಯಮದಲ್ಲಿ ಕೆಲಸ

ನಂತರ ಕೊಲ್ಕತ್ತಾಗೆ ಹೋಗಿ ಅಲ್ಲಿ ಔಷಧ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ. ನಂತರ ಬಾಂಬೆ ಅಂದ್ರೆ ಇಂದಿನ ಮುಂಬೈಗೆ ಕಚೇರಿಯಲ್ಲಿ ಕೆಲಸ ಮಾಡೋಕೆ ಶಿಫ್ಟ್ ಆಗ್ತಾರೆ. ಆದ್ರೆ, ತಾವೇ ಸ್ವಂತವಾಗಿ ಏನಾದ್ರೂ ಮಾಡಬೇಕು ಅನ್ನೋ ತುಡಿತ ಅವರನ್ನ ಕಾಡುತ್ತಲೇ ಇರುತ್ತೆ.

ಈ ಕಂಪನಿಯ ಒಟ್ಟು ಮೌಲ್ಯವೆಷ್ಟು?

ಹೀಗೆ 1893ರಲ್ಲಿ ಹುಟ್ಟೋದೆ ಕಾಸಿನಾಥುನಿ ನಾಗೇಶ್ವರ ರಾವ್ ಪಂತುಲು ಅವರ ಅಮೃತಾಂಜನ ಲಿಮಿಟೆಡೆ ಸಂಸ್ಥೆ. ಇದರ ಮೂಲಕವೇ ಅಮೃತಾಂಜನ ಪೇನ್ ಬಾಮ್​ನ ಸಂಶೋಧಿಸಿ, ಮಾರುಕಟ್ಟೆಗೂ ತರ್ತಾರೆ. ಮೊದಲಿಗೆ ತಮ್ಮ ಪ್ರಾಡೆಕ್ಟ್ ಜನರಿಗೆ ತಲುಪಬೇಕು ಅನ್ನೋ ಉದ್ದೇಶಕ್ಕೆ ಮ್ಯೂಸಿಕ್ ಕಾನ್ಸರ್ಟ್​ಗಳಲ್ಲಿ ನಾಗೇಶ್ವರ ರಾವ್ ಅಮೃತಾಂಜನ ಬಾಮ್​ನ ಜನರಿಗೆ ಫ್ರೀಯಾಗಿ ಹಂಚುತ್ತಾರೆ. ಅಂದು ಫ್ರೀಯಾಗಿ ಹಂಚಿದ ಅದೇ ಅಮೃತಾಂಜನ ಪೇನ್​ ಬಾಮ್​ನ ಸಂಸ್ಥೆಯ ಇವತ್ತಿನ ಒಟ್ಟು ಮೌಲ್ಯ 2,278 ಕೋಟಿ ರೂಪಾಯಿ.

Advertisment

publive-image

ಇದನ್ನೂ ಓದಿ: ನಂಬಿದ್ರೆ ನಂಬಿ.. ಸತ್ತವರನ್ನು ಬದುಕಿಸುತ್ತಂತೆ ಈ ಕಂಪನಿ!

ಪತ್ರಿಕೋದ್ಯಮದಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದ ನಾಗೇಶ್ವರ ರಾವ್, ಆಂಧ್ರ ಪತ್ರಿಕಾ ಅನ್ನೋ ತೆಲುಗು ವಾರ ಪತ್ರಿಕೆಯನ್ನ ಬಾಂಬೆಯಲ್ಲೇ 1,909ರಲ್ಲಿ ಸ್ಥಾಪಿಸಿದ್ರು. ಹಂತ ಹಂತವಾಗಿ ಇದು ದಿನ ಪತ್ರಿಕೆಯಾಗಿ ರೂಪುಗೊಳ್ತು. ಅಮೃತಾಂಜನ ಲಿಮಿಟೆಡ್ ಸೇರಿದಂತೆ ತಮ್ಮ ಎಲ್ಲಾ ಬ್ಯುಸಿನೆಸ್​ನೂ 1,914ರಲ್ಲಿ ನಾಗೇಶ್ವರ ರಾವ್ ಮದ್ರಾಸ್​ಗೆ ಶಿಫ್ಟ್ ಮಾಡಿದ್ರು.

ಶಂಭು ಪ್ರಸಾದ್ ಯಾರು?

ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾಗೇಶ್ವರ ರಾವ್ ಗಾಂಧಿ ವಾದಿಯಾಗಿದ್ರು. ಐತಿಹಾಸಿಕ ಉಪ್ಪು ಸತ್ಯಾಗ್ರಹ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೋರು. ಅಲ್ಲದೆ, ಆಂಧ್ರ ಮತ್ತು ಚೆನ್ನೈನಲ್ಲಿ ಕಾಂಗ್ರೆಸ್​ನ ಕಾರ್ಯಕ್ರಮಗಳಿಗೂ ಆರ್ಥಿಕ ನೆರವನ್ನ ನಾಗೇಶ್ವರ ರಾವ್ ನೀಡುತ್ತಿದ್ದರು. ಆಂಧ್ರದ ಜನರು ನಾಗೇಶ್ವರ ರಾವ್​ರನ್ನ ದೇಶಬಂಧು ಅಂತ ಕೊಂಡಾಡಿದ್ದಾರೆ. ಅವರ ದೇಶಬಂಧು ಅನ್ನೋದ್ರ ಜೊತೆಗೆ 1935ರಲ್ಲಿ ಆಂಧ್ರ ವಿಶ್ವವಿದ್ಯಾಲಯ ಕಲಾಪ್ರಪೂರ್ಣ ಅನ್ನೋ ಗೌರವವನ್ನ ನೀಡಿ ಸನ್ಮಾನಿಸಿದೆ. ನಾಗೇಶ್ವರ ರಾವ್ ಅವ್ರ ಭಾವ ಚಿತ್ರವಿರುವ ಸ್ಟಾಂಪ್​ಗಳನ್ನ ಮುದ್ರಿಸಿ ಭಾರತ ಸರ್ಕಾರವೂ ಇವ್ರನ್ನ ಗೌರವಿಸಿದೆ. 2007ರ ನವೆಂಬರ್ 13ರಿಂದ ಅಮೃತಾಂಜನ ಲಿಮಿಟೆಡ್ ಸಂಸ್ಥೆ ಅಮೃತಾಂಜನ ಹೆಲ್ತ್ ಕೇರ್ ಲಿಮಿಟೆಡ್ ಆಗಿ ಬದಲಾಗಿದ್ದು, ಸದ್ಯ ಇದನ್ನ ನಾಗೇಶ್ವರ ರಾವ್ ಅವ್ರ ಮೊಮ್ಮಗ ಶಂಭು ಪ್ರಸಾದ್ ಮುನ್ನಡೆಸುತ್ತಿದ್ದಾರೆ.

publive-image

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​​ನ ಸಹೋದರಿ ಜೊತೆ ರಿಂಕು ಸಿಂಗ್.. ಯಾರು ಈ ಮಿಸ್ಟರಿ ಗರ್ಲ್..!

Advertisment

ಈಗ ಅಮೃತಾಂಜನ ಕೇವಲ ಪೇನ್ ಬಾಮ್​ಗೆ ಮಾತ್ರ ಸೀಮಿತವಾಗಿಲ್ಲ. 2002ರಲ್ಲಿ ಌಂಟಿ ಡಯಾಬಿಟಿಕ್ ಔಷಧಿ ಡಯಾಕ್ಯೂರ್​ನ ಮಾರುಕಟ್ಟೆಗೆ ತಂದಿದೆ. 2004ರಲ್ಲಿ ಅಫೇರ್ ಹೆಸರಿನ ಹರ್ಬಲ್ ಮೌತ್ ಫ್ರೆಶ್ನರ್ ಕೂಡ ಪರಿಚಯಿಸಿದೆ. ಇಷ್ಟೇ ಅಲ್ಲದೆ, 2001ರಲ್ಲಿ ಅಮೃತಾಂಜನ ಸಾಫ್ಟ್​ವೇರ್ ದುನಿಯಾಕ್ಕೂ ಕಾಲಿಟಿದ್ದು, ಅಮೃತಾಂಜನ ಇನ್ಫೋಟೆಕ್ ಮೂಲಕ ಕಾಲ್ ಸೆಂಟರ್​ಗಳನ್ನೂ ನಡೆಸುತ್ತಿದೆ. 2011ರಲ್ಲಿ ಫುಡ್ ಸೆಕ್ಟರ್​ನಲ್ಲೂ ತನ್ನ ಛಾಪು ಮುದ್ರಿಸಲು ಮುಂದಾದ ಅಮೃತಾಂಜನ ಸಂಸ್ಥೆ ಚೆನ್ನೈ ಮೂಲದ ಶಿವಾ ಸಾಫ್ಟ್ ಡ್ರಿಂಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನ 26 ಕೋಟಿ ರೂಪಾಯಿಗೆ ಖರೀದಿಸಿದೆ. 2022ರಲ್ಲಿ ಅಮೃತಾಂಜನ ಹೆಲ್ತ್ ಕೇರ್ ಲಿಮಿಟೆಡ್ ಅಮೆರಿಕಾ ಮಾರುಕಟ್ಟೆಗೂ ಲಗ್ಗೆ ಇಟ್ಟಿದ್ದು, ತನ್ನ 2 ಸಾವಿರ ಕೋಟಿಯ ಸಾಮ್ರಾಜ್ಯವನ್ನ ಇನ್ನಷ್ಟು ವಿಸ್ತರಿಸುತ್ತಿದೆ.

ವಿಶೇಷ ವರದಿ: ನವೀನ್ ಕುಮಾರ್ ಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment