newsfirstkannada.com

ನಿನ್ನ ಮದುವೆ ಯಾವಾಗ? ಅಭಿಮಾನಿ ಪ್ರಶ್ನೆಗೆ ಡಾಲಿ ಸಿನಿಮಾ ಹೀರೋಯಿನ್‌ ಅಮೃತಾ ​ಶಾಕಿಂಗ್ ಉತ್ತರ!

Share :

Published May 7, 2024 at 5:56pm

Update May 7, 2024 at 9:06pm

  ಹೊಸ ಹೊಸ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಟಿ ಌಕ್ಟೀವ್​

  ಪಾಪ್‌ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ

  ನಟಿ ಅಮೃತಾ ಅಯ್ಯಂಗಾರ್‌ ಜೀವನ ಪೂರ್ತಿ ಸಿಂಗಲ್​ ಆಗೇ ಇರ್ತಾರಾ?

ಸ್ಯಾಂಡಲ್​ವುಡ್​​ನ ಮುದ್ದು ನಟಿ ಅಮೃತಾ ಅಯ್ಯಂಗಾರ್‌. ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ಅಮೃತಾ ಅಯ್ಯಂಗಾರ್‌ ಅವರ ನಟನೆಗೆ ಅದೆಷ್ಟೋ ಅಭಿಮಾನಿಗಳು ಮನಸೋತಿದ್ದಾರೆ. ಅದರಲ್ಲೂ ಅಭಿಮಾನಿಗಳಿಗೆ ನಟ ಡಾಲಿ ಧನಂಜಯ್​​ ಅವರ ಜೊತೆಗೆ ನಟಿ ಅಮೃತಾ ಅಯ್ಯಂಗಾರ್‌ ಅಭಿನಯಿಸಿದ ಸಿನಿಮಾಗಳು ಎಂದರೆ ತುಂಬಾ ಇಷ್ಟ.

ದೊಡ್ಡ ಪರದೆ ಮೇಲೆ ಈ ಇಬ್ಬರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಟ ಡಾಲಿ ಧನಂಜಯ್​​ ಹಾಗೂ ನಟಿ ಅಮೃತಾ ಅಯ್ಯಂಗಾರ್‌ ಅವರ ಹೆಸರಲ್ಲಿ ಸಾಕಷ್ಟು ಫ್ಯಾನ್​​ ಪೇಜ್​ಗಳೇ ಸೃಷ್ಟಿಯಾಗಿವೆ. ಅಲ್ಲದೇ ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ಎಂತಲೇ ಫೇಮಸ್​​ ಆಗಿದೆ ಈ ಜೋಡಿ. ಆದರೆ ಈ ಮಾತು ಈಗ ಏಕೆ ಎಂಬ ಪ್ರಶ್ನೆ ಮೂಡುತ್ತೆ ಅಲ್ವಾ. ಇದಕ್ಕೆ ಉತ್ತರ ಕೂಡ ಇಲ್ಲಿದೆ. ನಟಿ ಅಮೃತಾ ಅಯ್ಯಂಗಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಌಕ್ಟೀವ್​ ಆಗಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಗಂಡ ಸಾವು.. ಸುದ್ದಿ ಗೊತ್ತಾದ್ರೂ ವೋಟ್ ಮಾಡಿದ ಮಹಿಳೆ; ಕಾರಣ ಇದೆ

ಆಗಾಗ ಹೊಸ ಹೊಸ ಫೋಟೋಶೂಟ್​ ಮೂಲಕ ಅಮೃತಾ ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಟಿ ಅಮೃತಾ ಅಯ್ಯಂಗಾರ್‌ ‘ask me anything’ ಅಂತ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಟಿಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೂ ಒಬ್ಬ ಅಭಿಮಾನಿ ‘ಮದುವೆ ಆಗಲ್ವಾ’ ಅಂತ ಕೇಳಿದ್ದಾರೆ. ಅದಕ್ಕೆ ಉತ್ತರ ನೀಡಿದ ನಟಿ ನಿಷೇಧ ಚಿಹ್ನೆ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ನಟಿ ಅಮೃತಾ ಅಯ್ಯಂಗಾರ್‌ ಅವರು ಜೀವನ ಪೂರ್ತಿ ಹಾಗೇ ಇರುತ್ತಾರಾ ಅಂತ ಫ್ಯಾನ್ಸ್​​ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಸೋಷಿಯಲ್​ ಮೀಡಿಯಾದಲ್ಲಿ ನಟಿ ಡಾಲಿ ಧನಂಜಯ್​​ ಹಾಗೂ ನಟಿ ಅಮೃತಾ ಅಯ್ಯಂಗಾರ್‌ ಪ್ರೀತಿ ಮಾಡುತ್ತಿದ್ದಾರೆ ಅಂತಾ ಊಹಾಪೋಹ ಹಬ್ಬಿತ್ತು. ಆದರೆ ಆ ಊಹಾಪೋಹಕ್ಕೆ ನಟಿ ಮತ್ತೆ ತೆರೆ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನ ಮದುವೆ ಯಾವಾಗ? ಅಭಿಮಾನಿ ಪ್ರಶ್ನೆಗೆ ಡಾಲಿ ಸಿನಿಮಾ ಹೀರೋಯಿನ್‌ ಅಮೃತಾ ​ಶಾಕಿಂಗ್ ಉತ್ತರ!

https://newsfirstlive.com/wp-content/uploads/2024/05/amrutha7.jpg

Load More