Advertisment

ಅಣ್ಣಾವ್ರ ಮನೆಯಲ್ಲಿ ಅಮೃತಾಧಾರೆ ಸೀರಿಯಲ್​ ನಟ ರಾಜೇಶ್​ ನಟರಂಗ್; ಏನಾದ್ರೂ ವಿಶೇಷ ಉಂಟಾ?

author-image
Veena Gangani
ಅಣ್ಣಾವ್ರ ಮನೆಯಲ್ಲಿ ಅಮೃತಾಧಾರೆ ಸೀರಿಯಲ್​ ನಟ ರಾಜೇಶ್​ ನಟರಂಗ್; ಏನಾದ್ರೂ ವಿಶೇಷ ಉಂಟಾ?
Advertisment
  • ರಾಜೇಶ್​ ನಟರಂಗ್ ಅಮೃತಧಾರೆ ಗೌತಮ್​ ದಿವಾನ್​ ಪಾತ್ರದಲ್ಲಿ ನಟನೆ​
  • ಅಮೃತಧಾರೆ ಧಾರಾವಾಹಿ ಸೀರಿಯಲ್​ ಮೂಲಕ ಫೇಮಸ್ ಆಗಿರೋ ನಟ
  • ಡಾ. ರಾಜ್​ಕುಮಾರ್ ಮನೆಗೆ ತೆರಳಿದ ಖುಷಿಪಟ್ಟ ನಟ ರಾಜೇಶ್​ ನಟರಂಗ್

ನಾಯಕ, ನಾಯಕಿ ಅಂದ್ರೇ ಇಷ್ಟೇ ವಯಸ್ಸಿರ್ಬೇಕು. ನೋಡೋಕೆ ಹೀಗೆ ಇರ್ಬೇಕು ಅನ್ನೋ ಕಾಲಘಟ್ಟದಲ್ಲಿ ರೆಕಾರ್ಡ್​ ಬ್ರೇಕ್​ ಮಾಡಿದ್ದು ಜೊತೆ ಜೊತೆಯಲಿ ಧಾರಾವಾಹಿ. ಈ ಸ್ಟೋರಿ ಸಕ್ಸಸ್​ ಬೆನ್ನಲ್ಲೇ ಅನೌನ್ಸ್​ ಆಗಿದ್ದು ಅಮೃತಧಾರೆ.

Advertisment

ಇದನ್ನೂ ಓದಿ:ತಮಿಳು Sa Re Ga Ma Pa ವೇದಿಕೆ ಮೇಲೆ ಶಿವಾನಿಗೆ ಬಿಗ್ ಸರ್​ಪ್ರೈಸ್.. ಏನದು?

ಸದ್ಯ ಸೀರಿಯಲ್​ನಲ್ಲಿ ತುಂಬು ಗರ್ಭಿಣಿ ಭೂಮಿ ಹಾಗೂ ಹುಟ್ಟೋ ಮಗು ಹೆಸರಿಗೆ ಆಸ್ತಿ ವಿಲ್ ಮಾಡಿಸಿದ್ದಾನೆ ಗೌತಮ್​. ಇದು ಮಲ ತಮ್ಮ ಜಯದೇವ್​ ತೆಲೆ ಕೆಡಿಸಿದೆ. ಮಗು ಭೂಮಿಗೆ ಬರಬಾರದು ಅಂತ ವ್ಯಾಘ್ರವಾಗಿ ವರ್ತಿಸಿತ್ತಿದ್ದಾನೆ. ಇದಕ್ಕೆ ಅಮ್ಮ, ಮಾವನ ಕುಮ್ಮಕ್ಕು ಇದ್ದು, ಬೆಟ್ಟದಷ್ಟು ಆಸೆ, ಕನಸು ಕಟ್ಟಿಕೊಂಡು ಮಗುವಿನ ನಿರೀಕ್ಷೆಯಲ್ಲಿರೋ ಗೌತಮ್​-ಭೂಮಿ ಬದುಕು ಅಲ್ಲೋಲ ಕಲ್ಲೋಲ ಮಾಡ್ತಾನಾ ಕೇಡಿ ಜಯದೇವ್​? ಈ ಟ್ರ್ಯಾಕ್​ನಲ್ಲಿ ಸ್ಟೋರಿ ಸಾಗ್ತಿದೆ.

publive-image

ವಯಸ್ಸು ಮೀರಿದ ಜೋಡಿಗಳ ಅನುಭವಿಸೋ ನೋವು, ಯಾತನೆ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ. ಪ್ರೀತಿ, ಮದುವೆಗೆ ವಯೋಮಿತಿಯ ಬಂಧ ಇಲ್ಲ ಅನ್ನೋದನ್ನ ಸುಂದರವಾದ ದೃಶ್ಯಗಳ ಮೂಲಕ ಮನವರಿಕೆ ಮಾಡಿಕೊಡ್ತಿದೆ ಸೀರಿಯಲ್. ಗೌತಮ್​ ದಿವಾನ್​ ಪಾತ್ರದಲ್ಲಿ ರಾಜೇಶ್​ ನಟರಂಗ್​ ಹಾಗೂ ಭೂಮಿ ಪಾತ್ರದಲ್ಲಿ ಛಾಯಾಸಿಂಗ್ ವೀಕ್ಷಕರ ಫೇವರೆಟ್ ಜೋಡಿಯಾಗಿ ಮಿಂಚ್ತಿದೆ.​

Advertisment

ರಾಜೇಶ್​ ನಟರಂಗ್​ ಅವರು ಶೂಟಿಂಗ್ ಬಿಡುವಿನ ವೇಳೆ ಗಾಜನೂರಿಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಮನೆಗೆ ತೆರಳಿ ಕೆಲ ಗಂಟೆಗಳನ್ನ ಕಳೆದಿದ್ದಾರೆ. ನಿರಂತರ ಚೈತನ್ಯ, ಅಣ್ಣಾವ್ರ ಮನೆಯಲ್ಲಿ.. ಭಕ್ತನಾಗಿ ಧನ್ಯನಾದೆ.. ಎಂಬ ಅಡಿಬರಹದ ಜೊತೆಗೆ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಾರೆ ರಾಜೇಶ್​ ಅವರ ಅಭಿನಯ, ಅಣ್ಣಾವ್ರ ಮೇಲೆ ಇಟ್ಟಿರೋ ಗೌರವ, ಪ್ರೀತಿ ಅಭಿಮಾನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment