/newsfirstlive-kannada/media/post_attachments/wp-content/uploads/2025/03/Radha-Bhagavati.jpg)
ಸದ್ಯದ ಟಾಪ್ ಮೋಸ್ಟ್ ವಾಚಿಂಗ್ ಸೀರಿಯಲ್ಸ್ನಲ್ಲಿ ಜೀ ವಾಹಿನಿಯ ಅಮೃತಧಾರೆ ಕೂಡ ಒಂದು. ಈ ಧಾರಾವಾಹಿಯ ಕತೆ ವೀಕ್ಷಕರಿಗೆ ತುಂಬಾನೆ ಇಷ್ಟವಾಗ್ತಿದೆ. ಅದರಲ್ಲೂ ಮಲ್ಲಿ-ಜೈದೇವ್ ಮದುವೆ ಆದ ಎಲ್ಲ ಎಪಿಸೋಡ್ಗಳು ಹೆಚ್ಚಿನ ಕುತೂಹಲ ಮೂಡಿಸಿತ್ತು.
ಇದನ್ನೂ ಓದಿ:ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳನ್ನು ಹೊಂದಿರುವ ದೇಶಗಳು ಯಾವುವು? ಭಾರತದಲ್ಲಿ ಎಷ್ಟಿವೆ?
ಏಕಾಏಕಿ ಮಲ್ಲಿ ಪಾತ್ರಧಾರಿ ರಾಧಾ ಭಗವತಿ ಸೀರಿಯಲ್ನಿಂದ ಆಚೆ ಬಂದಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಹೊಸ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಅದೇ ಭಾರ್ಗವಿ LLB ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗೊರೋ ಬೆಡಗಿ ಮತ್ತೊಂದು ರೀಲ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.
ರಾಮಾಚಾರಿಯ ತಂಗಿ ಶೃತಿ ಪಾತ್ರದ ಮೂಲಕ ರಂಜಿಸಿದ್ದ ರಾಧಾ ಭಗವತಿ ಅಮೃತಧಾರೆಯ ಮಲ್ಲಿ ಆಗಿಯೂ ಇಷ್ಟ ಆಗಿದ್ದರು. ಎರಡು ಪಾತ್ರಗಳು ಮೇಕಪ್ನಲ್ಲಿ ಕೊಂಚ ದೂರ. ಅದರಲ್ಲಿ ಮಲ್ಲಿ ಡೀ ಗ್ಲಾಮರ್ ಲುಕ್ನಲ್ಲೇ ಹೆಚ್ಚಾಗಿ ಕಾಣಿಸೋದು. ರಿಯಲ್ ಲೈಫ್ನಲ್ಲಿ ರಾಧಾ ಭಗವತಿ ಚಂದದ ಗೊಂಬೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗೊರೋ ನಟಿ ರಾಧಾ ಭಗವತಿ ಅವರು ಪುಷ್ಪ 2 ಕಿಸ್ ಕಿಸಕ್ ಮ್ಯೂಸಿಕ್ಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಇದೇ ವಿಡಿಯೋವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ನಟಿಯ ಲುಕ್ಗೆ ಫಿದಾ ಆಗಿದ್ದಾರೆ. ಅಲ್ಲದೇ ಲಂಗ ದಾವಣಿಯಲ್ಲಿ ಕಿಸಕ್ ಸಾಂಗ್ಗೆ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು. ಈ ಡ್ಯಾನ್ಸ್ ವಿಡಿಯೋ ನೋಡಿದ ಫ್ಯಾನ್ಸ್ ಅಕ್ಕೊರೆ ನೀವಾ ನಂಬೋಕೆ ಆಗ್ತಾ ಇಲ್ಲಾ, ಸಖತ್ ಮೇಡಂ ಅಂತ ಕಾಮೆಂಟ್ಸ್ ಹಾಕಿದ್ದಾರೆ.
View this post on Instagram
ರಾಧಾ ಭಗವತಿ ಕ್ಲಾಸಿಕಲ್ ಡ್ಯಾನ್ಸ್ರ್ ಜೊತೆಗೆ ಮಧುರವಾಗಿ ಹಾಡ್ತಾರೆ ಕೂಡ. ಅಭಿನಯದಲ್ಲೂ ಪರ್ಫೆಕ್ಟ್. ಒಟ್ಟಿನಲ್ಲಿ ಸಂಗೀತ, ನೃತ್ಯ, ಓದು, ನಟನೆ ಎಲ್ಲದರಲ್ಲೂ ಮುಂದು ಈ ರಾಧಾ ಭಗವತಿ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭಾರ್ಗವಿ LLB ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಸೀರಿಯಲ್ ಪ್ರೋಮೋ ಕೂಡ ಸಖತ್ ಸದ್ದು ಮಾಡುತ್ತಿದೆ. ಸ್ವಪ್ನ ಕೃಷ್ಣರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಹೊಸ ಕಥೆಗೆ ರಾಧಾ ಭಗವತಿ ನಾಯಕಿಯಾಗಿದ್ದಾರೆ. ನಟಿ ರಾಧಾ ಭಗವತಿ ಕನ್ನಡ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮಿಂಚುತ್ತಿದ್ದು, ಒಂದ್ಸಲ ಮೀಟ್ ಮಾಡೋಣ, ಅಪಾಯವಿದೆ ಎಚ್ಚರಿಕೆ ಹಾಗೂ ವಸಂತ ಕಾಲದ ಹೂವುಗಳು ಸಿನಿಮಾಗಳಲ್ಲಿ ನಟಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ