Advertisment

ಅಮೃತಧಾರೆ ಸೀರಿಯಲ್​ ನಟಿಗೆ ಚಾಕು ಇರಿತ.. ಬೆಂಗಳೂರಲ್ಲಿ ಪತಿಯಿಂದಲೇ ಬರ್ಬರ ಕೃತ್ಯ

author-image
Veena Gangani
Updated On
20 ವರ್ಷದ ಹಿಂದೆ ಪ್ರೀತಿಸಿ ಮದ್ವೆ, ಇಬ್ಬರು ಮುದ್ದಾದ ಮಕ್ಕಳು.. ಕಿರುತೆರೆ ನಟಿ ಶ್ರುತಿ ಬಾಳಲ್ಲಿ ಆಗಿದ್ದೇನು..?
Advertisment
  • ಕಿರುತೆರೆ ನಟಿ ಮೇಲೆಯೇ ಚಾಕುವಿನಿಂದ ಪತಿ ಹಲ್ಲೆ
  • ಕನ್ನಡದ ಹಲವು ಸೀರಿಯಲ್​ಗಳಲ್ಲಿ ನಟಿಸಿರುವ ಶ್ರುತಿ
  • ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ನಟಿ

ಬೆಂಗಳೂರು: ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಪತಿಯೇ ಚಾಕುವಿನಿಂದ ಹಲ್ಲೆ ಮಾಡಿರೋ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್​ನಲ್ಲಿ ನಡೆದಿದೆ. ಮಂಜುಳ ಅಲಿಯಾಸ್​ ಶ್ರುತಿ ಚಾಕು ಇರಿತಕ್ಕೊಳಗಾದ ಕಿರುತೆರೆ ನಟಿ.

Advertisment

ಇದನ್ನೂ ಓದಿ:ನಾನು ಕರ್ನಾಟಕದ ಹುಡುಗಿ; ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಶಿಲ್ಪಾ ಶೆಟ್ಟಿ -VIDEO

publive-image

ನಟಿ ಶ್ರುತಿ ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಶೀಲ ಶಂಕಿಸಿ, ಕಳೆದ ಜುಲೈ​ 4ರಂದು ನಟಿ ಶ್ರುತಿ ಮೇಲೆ ಪತಿಯೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 20 ವರ್ಷದ ಹಿಂದೆ ಅಮರೇಶ್ ಎಂಬಾತನ ಪ್ರೀತಿಸಿ ನಟಿ ಶ್ರುತಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ದಂಪತಿಹನುಮಂತ ನಗರದಲ್ಲಿ ಲೀಸ್​ಗೆ ಮನೆ ಪಡೆದು ವಾಸವಿದ್ದರು. ನಂತರ ಶ್ರುತಿ ನಡವಳಿಕೆ ಗಂಡ ಅಮರೇಶ್​ಗೆ ಇಷ್ಟವಾಗುತ್ತಿರಲಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿ ಇರಲಿಲ್ಲವಂತೆ. ಹೀಗಾಗಿ ಕಳೆದ ಏಪ್ರಿಲ್​ನಲ್ಲಿ ನಟಿ ಗಂಡನಿಂದ ದೂರಾಗಿ ಅಣ್ಣನ ಮನೆಯಲ್ಲಿದ್ದರಂತೆ. ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತಂತೆ.

publive-image

ಈ ಬಗ್ಗೆ ನಟಿ ಶ್ರುತಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರಂತೆ. ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂಧಾನ ಮಾಡಿ ಒಂದಾಗಿದ್ದರಂತೆ. ಇಬ್ಬರು ಒಂದಾದ ಮಾರನೇ ದಿನವೇ ಹೆಂಡತಿಗೆ ಪತಿ ಚಾಕು ಇರಿದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ಹೋದ ನಂತರ ಹೆಂಡತಿ ಮೇಲೆ ಪೆಪ್ಪರ್ ಸ್ಪ್ರೇ ಹೊಡೆದು ಪತಿ ಹಲ್ಲೆ ಮಾಡಿದ್ದಾರಂತೆ. ಚಾಕುವಿನಿಂದ ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾರಂತೆ. ಸಿನಿಮಾ ಸ್ಟೈಲ್​ನಲ್ಲಿ ತಲೆ ಕೂದಲು ಹಿಡಿದು, ಗೋಡೆಗೆ ತಲೆ ಗುದ್ದಿಸಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹತ್ಯೆಗೆ ಯತ್ನ ಪ್ರಕರಣ ದಾಖಲಿಸಿ ಆರೋಪಿ ಅಮರೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡ ನಟಿ ಶ್ರುತಿ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment