/newsfirstlive-kannada/media/post_attachments/wp-content/uploads/2025/06/amruthadare.jpg)
ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್​ನಲ್ಲಿ ಗೌತಮ್​ ಭೂಮಿ ನವೀರಾದ ದಾಂಪತ್ಯ ಜೀವನ ಕಟ್ಟಿಕೊಡ್ತಿದೆ. ಗರ್ಭಿಣಿಯಾಗಿರುವ​ ಪತ್ನಿ ಕನಸನ್ನ ಒಂದೊಂದಾಗಿಯೇ ಈಡೇರಿಸುತ್ತಿದ್ದಾರೆ ಡುಮ್ಮು ಸರ್​. ಇದೀಗ ಅಮೃತಾಧಾರೆ ಸೀರಿಯಲ್ ವೀಕ್ಷಕರು ಮತ್ತಷ್ಟೂ ಖುಷಿ ಪಡೋ ವಿಚಾರ ಇದಾಗಿದೆ.
ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಹ ಕಲಾವಿದ ಆಗುಂಬೆ ಹೋಂ ಸ್ಟೇಯಲ್ಲಿ ನಿಧನ; ಆಗಿದ್ದೇನು?
/newsfirstlive-kannada/media/post_attachments/wp-content/uploads/2025/04/amruthadhaare3.jpg)
ಹೌದು, ​ಗೌತಮ್​ ಹಾಗೂ ಭೂಮಿಕಾ ಬೇಬಿ ಬಂಪ್​ ಲುಕ್​ ಫೋಟೋಶೂಟ್​ ಮಿಂಚಿದ್ದಾರೆ. ರಿಯಲ್​ ಲೈಫ್​ನಲ್ಲಿ ಜೋಡಿಗಳಿಗೆ ತುಂಬಾ ಹತ್ತಿರ ಆಗುವ ಸೀನ್​ ಆಗಿದೆ. ಅಷ್ಟೋಂದು ಸುಂದರವಾಗಿ ಗೌತಮ್​ ಹಾಗೂ ಭೂಮಿಕಾ ಪಾತ್ರದಲ್ಲಿ ಈ ಸ್ಟಾರ್​ ಜೋಡಿ ಅಭಿನಯಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/amruthadare1.jpg)
ಇನ್ನೂ, ಜೀ ಕನ್ನಡ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರೋಮೋವೊಂದನ್ನು ರಿಲೀಸ್​ ಮಾಡಲಾಗಿದೆ. ಅದರಲ್ಲಿ ಅಮೃತಾಧಾರೆ ಸೀರಿಯಲ್​ನ ಗೌತಮ್​ ಹಾಗೂ ಭೂಮಿಕಾ ಪಾತ್ರದಲ್ಲಿ ಅಭಿನಯಿಸುತ್ತಿರೋ ಛಾಯಾ ಸಿಂಗ್​ ಹಾಗೂ ರಾಜೇಶ್​ ನಟರಂಗ್ ಬೇಬಿ ಬಂಪ್​ ಲುಕ್​ನಲ್ಲಿ ಕಾಣಿಸಿಕೊಂಡು ವೀಕ್ಷಕರ ಕಣ್ಮನ ಸೆಳೆದಿದ್ದಾರೆ.
View this post on Instagram
ಆದ್ರೆ, ಇಷ್ಟು ಖುಷಿ ಖುಷಿಯಾಗಿರೋ ಗೌತಮ್​ ಹಾಗೂ ಭೂಮಿಕಾ ಮಗುವನ್ನು ಕೊಲ್ಲಲು ಶಕುಂತಲಾ ದೇವಿ, ಮಗ ಹಾಗೂ ಅಣ್ಣ ದೊಡ್ಡ ಹೊಂಚು ರೂಪಿಸಿದ್ದಾರೆ. ಮಗು ಏನಾದ್ರೂ ಹುಟ್ಟುದರೇ ಗೌತಮ್​ ದಿವಾನ್​ ಇಡೀ ಆಸ್ತಿಯಲ್ಲಾ ಅದರ ಪಾಲಾಗುತ್ತೆ ಅಂತ ಖತರ್ನಾಕ್ ಐಡಿಯಾ ಮಾಡುತ್ತಿದ್ದಾರೆ. ಆದರೆ ಮುಂದಿನ ಸಂಚಿಕೆಯಲ್ಲಿ ಮಗು ಹುಟ್ಟುತ್ತಾ ಅಥವಾ ಶಕುಂತಲಾ ದೇವಿ ಪ್ಲಾನ್​ನಂತೆ ಮಗು ಬಲಿಯಾಗುತ್ತಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us