ಅಮೃತಧಾರೆ ಸೀರಿಯಲ್​ನಲ್ಲಿ ಡಬಲ್​ ಟ್ವಿಸ್ಟ್;​ ಗೌತಮ್, ಭೂಮಿಗೆ ಅವಳಿ ಮಕ್ಕಳ ಜನನ

author-image
Veena Gangani
Updated On
ಅಮೃತಧಾರೆ ಸೀರಿಯಲ್​ನಲ್ಲಿ ಡಬಲ್​ ಟ್ವಿಸ್ಟ್;​ ಗೌತಮ್, ಭೂಮಿಗೆ ಅವಳಿ ಮಕ್ಕಳ ಜನನ
Advertisment
  • ಹೊಸ ಟ್ವಿಸ್ಟ್​ ಪಡೆದುಕೊಳ್ತಿದೆ ಈ ಸೀರಿಯಲ್
  • ಡುಮ್ಮು ಸರ್​ಗೆ ಈಗ ಡಬಲ್​ ಖುಷಿ ನೋಡಿ
  • ಭೂಮಿಕಾ ಮನೆಯಲ್ಲಿ ಸಖತ್​ ಸಂಭ್ರಮ

ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್​ನಲ್ಲಿ ಗೌತಮ್​ ಭೂಮಿ ನವೀರಾದ ದಾಂಪತ್ಯ ಜೀವನ ಕಟ್ಟಿಕೊಡ್ತಿದೆ. ಗರ್ಭಿಣಿಯಾಗಿರುವ​ ಭೂಮಿಕಾ ಮನೆಯಲ್ಲಿ ಡಬಲ್​ ಸಂಭ್ರಮ ಮನೆ ಮಾಡಿದೆ. ಗರ್ಭಿಣಿಯಾಗಿದ್ದ ಪತ್ನಿ ಕನಸನ್ನ ಒಂದೊಂದಾಗಿಯೇ ಈಡೇರಿಸುತ್ತಿದ್ದರು ಡುಮ್ಮು ಸರ್.

ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..

ಆದ್ರೆ ಇದೀಗ ಅಮೃತಾಧಾರೆ ಸೀರಿಯಲ್ ವೀಕ್ಷಕರು ಮತ್ತಷ್ಟೂ ಖುಷಿ ಪಡೋ ವಿಚಾರ ಇದಾಗಿದೆ. ಹೌದು, ​ಗೌತಮ್​ ಹಾಗೂ ಭೂಮಿಕಾಗೆ ಅವಳಿ ಮಕ್ಕಳು ಜನನವಾಗಿದೆ. ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾಗೆ ಡಾಕ್ಟರ್​ ಕರ್ಣ ಹಾಗೂ ಪಾರು ಹೆರಿಗೆ ಮಾಡಿಸಿದ್ದರು. ಆಗ ಭೂಮಿಕಾಗೆ ಹೆಣ್ಣು ಮಗು ಆಗಿತ್ತು.

ಈಗ ಜೀ ಕನ್ನಡ ರಿಲೀಸ್​ ಮಾಡಿದ ಪ್ರೋಮೋದಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಭೂಮಿಕಾಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಗ ಡಾಕ್ಟರ್​ ಕರ್ಣ ಟ್ವಿನ್ಸ್ ಅಂತ ಶುಭ ಸುದ್ದಿ ಕೊಟ್ಟಿದ್ದಾರೆ. ಈಗ ಡುಮ್ಮು ಸರ್​ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಈ ಮೂಲಕ ಅಮೃತಾಧಾರೆ ಸೂಪರ್​ ಟ್ವಿಸ್ಟ್ ಪಡೆದುಕೊಂಡಿದೆ.

ಇನ್ನೂ, ಎರಡನೇ ಮಗುವಿಗೆ ಭೂಮಿ ಜನ್ಮ ನೀಡುತ್ತಿದ್ದಾಗಲೇ ಶಕುಂತಲಾ ದೇವಿ ಆಸ್ಪತ್ರೆಯಲ್ಲಿ ಪವರ್​ ಕಟ್​​ ಮಾಡಿದ್ದಾಳೆ. ಆದ್ರೂ ಕೂಡ ಶಿವು ತಲೆ ಓಡಿಸಿ ಪವರ್​ ಬಾಕ್ಸ್​ ತಂದು ಲೈಟ್​ ಹಾಕಿಸಿದ್ದಾರೆ. ಆದ್ರೆ ಎರಡನೇ ಮಗು ಗಂಡಾ? ಅಥವಾ ಹೆಣ್ಣಾ ಅಂತ ರಿವೀಲ್​ ಮಾಡಿಲ್ಲ.  ಅಮೃತಾಧಾರೆ ಸೀರಿಯಲ್​ನ ಗೌತಮ್​ ಹಾಗೂ ಭೂಮಿಕಾ ಪಾತ್ರದಲ್ಲಿ ಅಭಿನಯಿಸುತ್ತಿರೋ ಛಾಯಾ ಸಿಂಗ್​ ಹಾಗೂ ರಾಜೇಶ್​ ನಟರಂಗ್ ಅವರ ಅಭಿನಯಕ್ಕೆ ವೀಕ್ಷಕರು ಫುಲ್​ ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment