Advertisment

ಕನ್ನಡತಿ ಖ್ಯಾತಿಯ ಅಮ್ಮಮ್ಮ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಮತ್ತೆ ಹೀರೋಗೆ ಅಮ್ಮನಾಗಿ ಸರ್ಪ್ರೈಸ್ ಎಂಟ್ರಿ..!​​

author-image
Veena Gangani
Updated On
ಕನ್ನಡತಿ ಖ್ಯಾತಿಯ ಅಮ್ಮಮ್ಮ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಮತ್ತೆ ಹೀರೋಗೆ ಅಮ್ಮನಾಗಿ ಸರ್ಪ್ರೈಸ್ ಎಂಟ್ರಿ..!​​
Advertisment
  • ವಿಭಿನ್ನ ಹೇರ್ ಸ್ಟೈಲ್​ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದ ನಟಿ
  • ಕನ್ನಡತಿ, ಬೃಂದಾವನ ಬಳಿಕ ಮತ್ತೊಂದು ಸೀರಿಯಲ್​ನಲ್ಲಿ ಅಮ್ಮಮ್ಮಾ
  • ಗೌತಮ್​ ತಾಯಿ ಪಾತ್ರಕ್ಕೆ ನಟಿ ಚಿತ್ಕಳಾ ಬಿರಾದಾರ್ ಜೀವ ತುಂಬುತ್ತಿದ್ದಾರೆ

ಕನ್ನಡ ಕಿರುತೆರೆಯಲ್ಲಿ ಹೆಚ್ಚು ಸೌಂಡ್​ ಮಾಡಿದ್ದ ಧಾರಾವಾಹಿ ಅಂದ್ರೆ ಅದು ‘ಕನ್ನಡತಿ’. ಇದೇ ಸೀರಿಯಲ್​ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಭಾವ ಬೀರಿದ ನಟಿ ಚಿತ್ಕಳಾ ಬಿರಾದಾರ್. ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಇವರು, ನಂತರ ಕಲರ್ಸ್​ ಕನ್ನಡದ ಬೃಂದಾವನ ಧಾರಾವಾಹಿಯಲ್ಲಿ ವೀಕ್ಷಕರ ಗಮನ ಸೆಳೆದಿದ್ದರು.

Advertisment

ಇದನ್ನೂ ಓದಿ:BBK11: ಈ ಬಾರಿ ಭವ್ಯಾ ಕಪ್ ಗೆಲ್ತಾರಾ? ತೆಲುಗು ಬಿಗ್ ಬಾಸ್ ವಿನ್ನರ್‌ ನಿಖಿಲ್‌ ಹೇಳಿದ್ದೇನು?

ಬೃಂದಾವನದ ನಂತರ ಸೀರಿಯಲ್​ ಅನ್ನು ಕಲರ್ಸ್ ಕನ್ನಡ ಬಂದಷ್ಟೇ ಬೇಗ ವೈಂಡ್ ಆಫ್ ಮಾಡಿತು. ಇದೇ ಗ್ಯಾಪ್​ ಅಲ್ಲೇ ಅಮೆರಿಕ ಪ್ರವಾಸ ಬೆಳೆಸಿದ್ದ ಚಿತ್ಕಳಾ, ಮಗ ಮತ್ತು ಸೊಸೆ ಜೊತೆ ಸಮಯ ಕಳೆಯುತ್ತಿದ್ದರು. ಅಮೆರಿಕದಿಂದ ಭಾರತಕ್ಕೆ ಬಂದ ನಂತರ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಇದೀಗ ಮತ್ತೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

publive-image

ಈ ಹಿಂದೆ ಸೀರಿಯಲ್​ನಿಂದ ದೂರ ಉಳಿದುಕೊಂಡಾಗ ಯಾವಾಗ ನಿಮ್ಮನ್ನ ನೋಡೋದು ಮೇಡಂ ಎಂದು ಅಭಿಮಾನಿಗಳು ಕೇಳಿದ್ದರು. ಅದಕ್ಕೆ ಉತ್ತರ ಸಿಕ್ಕಿದೆ. ಮೊನ್ನೆಯಷ್ಟೇ ಅಮೃತಧಾರೆ ಧಾರವಾಹಿಯ ಪ್ರೋಮೋ ಶೇರ್ ಮಾಡಿಕೊಂಡಿದ್ದರು ನಟಿ ಚಿತ್ಕಳಾ ಬಿರಾದಾರ್. ಅಮ್ಮನಿಗೆ ಹಂಬಲಿಸುತ್ತಿದ್ದ ನಾಯಕ ಗೌತಮ್​ ತಾಯಿ ಪಾತ್ರಕ್ಕೆ ನಟಿ ಚಿತ್ಕಳಾ ಬಿರಾದಾರ್ ಜೀವ ತುಂಬುತ್ತಿದ್ದಾರೆ.

Advertisment

publive-image

ಇದೀಗ ಗೌತಮ್ ಅಮ್ಮನಾಗಿ ಚಿತ್ಕಳಾ ನಿವಾಸಕ್ಕೆ ಬಂದಿದ್ದಾರೆ. ಆದರೆ ಹೀರೋ ಗೌತಮ್​ಗೆ ನನ್ನ ತಾಯಿ ಹಾಗೂ ತಂಗಿ ಇವರೇ ಎಂದು ಗೊತ್ತಿಲ್ಲ. ಈ ವಿಚಾರ ಗೊತ್ತಾದಾಗ ಗೌತಮ್​ ರಿಯಾಕ್ಷನ್​ ಹೇಗಿರುತ್ತೆ ಎಂದು ನೋಡೋದಕ್ಕೆ ವೀಕ್ಷಕರು ಕಾಯ್ತಿದ್ದಾರೆ. ಇದು ಸೀರಿಯಲ್ ಕಥೆಯಾದ್ರೆ, ಮತ್ತೊಂದು ಕಡೆ ಚಿತ್ಕಳಾ ಬಿರಾದಾರ್ ಹಾಗೂ ಮೇಘಾ ಶೆಣೈ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೂಟಿಂಗ್  ಹಿಂದಿನ ಸುಂದರ  ಕ್ಲಿಪ್​ವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment