/newsfirstlive-kannada/media/post_attachments/wp-content/uploads/2024/05/rajani1.jpg)
ಜನಪ್ರಿಯ ಧಾರಾವಾಹಿಗಳ ಲಿಸ್ಟ್​ನಲ್ಲಿ ಅಮೃತವರ್ಷಿಣಿಗೆ ವಿಶೇಷವಾದ ಸ್ಥಾನ ಇದೆ. ಸುಮಾರು ಎರಡು ಸಾವಿರ ಸಂಚಿಕೆಗಳನ್ನ ಪೊರೈಸಿದ ಸೂಪರ್​ ಹಿಟ್​ ಧಾರಾವಾಹಿ. ಇಂದಿಗೂ ಅಮೃತವರ್ಷಿಣಿಯ ಪ್ರತಿ ಪಾತ್ರವನ್ನ ಜನರು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಕಲಾವಿದರಿಗಂತೂ ಬ್ರ್ಯಾಂಡ್​ ಸೃಷ್ಟಿಸಿಕೊಟ್ಟ ಸೀರಿಯಲ್ ಅಮೃತವರ್ಷಿಣಿ​.
/newsfirstlive-kannada/media/post_attachments/wp-content/uploads/2024/05/rajani2.jpg)
ಇವತ್ತಿಗೂ ಅಮೃತವರ್ಷಿಣಿ​ ಕಲಾವಿದರ ಬಾಂಡಿಂಗ್​ ಅಷ್ಟೇ ಗಟ್ಟಿಯಾಗಿದೆ. ಆಗಾಗ ಒಟ್ಟಾಗಿ ಸೇರುತ್ತಾ ಎಂಜಾಯ್​ ಮಾಡುತ್ತಿರುತ್ತಾರೆ. ಶಕುಂತಲಾ ದೇವಿ ಪಾತ್ರದ ಮೂಲಕ ರಂಜಿಸಿದ ಹಿರಿಯ ನಟಿ ಹೇಮಾ ಚೌದರಿ ಅವರ ಮನೆಗೆ ಅಮೃತಾ ಅಂದ್ರೆ ರಜಿನಿ ಅವ್ರು ಭೇಟಿ ನೀಡಿದ್ದಾರೆ. ಹಲವು ದಿನಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ಬಳುತ್ತಿದ್ದ ನಟಿ ಹೇಮಾ ಚೌದರಿ ಅವರು ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಸುಧಾರಿಸಿಕೊಳ್ತಿದ್ದಾರೆ. ಹೀಗಾಗಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ರಜಿನಿ.
/newsfirstlive-kannada/media/post_attachments/wp-content/uploads/2024/05/rajani3.jpg)
View this post on Instagram
ತುಂಬಾ ವರ್ಷಗಳ ನಂತರ ಅಮ್ಮನನ್ನ ಭೇಟಿ ಮಾಡಿದ ಕ್ಷಣ ಅವರ ಆರೋಗ್ಯ ತುಂಬಾ ಚೆನ್ನಾಗಿದ್ದಾರೆ. ಈಗಲೂ ಅವರ ಉತ್ಸಾಹ, ಆ ಹುಮ್ಮಸ್ಸು ಆ ಗಟ್ಟಿತನ ನೋಡೋದೇ ಒಂದು ಚೆಂದ. ಅವರು ತುಂಬಾ ಸ್ಟ್ರಾಂಗ್ ಲೇಡಿ ಅವರಿಂದ ನಾವು ಕಲಿತದ್ದು ತುಂಬಾ ಇದೆ ಕಲಿಯಬೇಕಾದದ್ದು ತುಂಬಾ ಇದೆ. love you so much ಅಮ್ಮ ಎಂದು ಭಾವುಕ ಪೋಸ್ಟ್​ನ್ನ ಶೇರ್​ ಮಾಡಿದ್ದಾರೆ ರಜಿನಿ. ರಜಿನಿ-ಹೇಮಾ ಚೌದರಿ ಅವರ ಚಂದದ ಫೋಟೋಗಳನ್ನ ನೋಡಿದ ಅಭಿಮಾನಿಗಳು ಮತ್ತೇ ಧಾರಾವಾಹಿ ಮಾಡಿ, ಒಟ್ಟಿಗೆ ನಟಿಸಿ ಅಂತಾ ಬೇಡಿಕೆ ಇಡ್ತಿದ್ದಾರೆ. ಅಮ್ಮನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಥಾಂಕ್ಯೂ. ಹೀಗೆ ಸದಾ ನಗುನಗುತಾ ಇರೀ ಎಂದು ಹರಸಿ ಹಾರೈಸುತ್ತಿದ್ದಾರೆ ಅಭಿಮಾನಿಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us