/newsfirstlive-kannada/media/post_attachments/wp-content/uploads/2024/06/Milk-2.jpg)
ದೇಶದ ಜನರಿಗೆ ಅಮುಲ್ ಶಾಕಿಂಗ್ ನ್ಯೂಸ್ ನೀಡಿದ್ದು, ಹಾಲಿನ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಿದೆ. ಹಾಲಿನ ನಿರ್ವಹಣೆ ಮತ್ತು ಉತ್ಪಾದನೆ ವೆಚ್ಚ ಹೆಚ್ಚಳ ಆಗುತ್ತಿರುವ ಕಾರಣ ನೀಡಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್), ಅಮುಲ್ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ:ಹೈಪ್ರೊಫೈಲ್ ಮಾಂಸ ದಂಧೆ ಕೇಸ್ ಬಯಲಿಗೆ.. ದಾಳಿ ವೇಳೆ ಪೊಲೀಸರಿಗೆ ಕಾದಿತ್ತು ಶಾಕ್..!
/newsfirstlive-kannada/media/post_attachments/wp-content/uploads/2024/06/Milk-2.jpg)
ದೇಶದಲ್ಲಿರುವ ಎಲ್ಲಾ ಮಾರುಕಟ್ಟೆಗಳಲ್ಲೂ ಅಮುಲ್ ಹಾಲಿನ ಬೆಲೆಯಲ್ಲಿ ಲೀಟರ್‌ಗೆ 2 ರೂಪಾಯಿ ಏರಿಕೆ ಆಗಲಿದೆ. ಪರಿಷ್ಕೃತ ದರವು ಇಂದಿನಿಂದಲೇ ಜಾರಿಗೆ ಬರುತ್ತಿದೆ ಎಂದು ಜಿಸಿಎಂಎಂಎಫ್‌ನ ಎಂಡಿ ಜಯನ್ ಮೆಹ್ತಾ ಹೇಳಿದ್ದಾರೆ. GCMMF 2023 ಫೆಬ್ರವರಿಯಲ್ಲಿ ಹಾಲಿನ ದರವನ್ನು ಹೆಚ್ಚಿಸಿತ್ತು. ರೈತರಿಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ಕಾರಣದಿಂದ ಹಾಲಿನ ದರದಲ್ಲಿ ಏರಿಕೆ ಮಾಡಲಾಗಿತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಪರಿಸ್ಕೃತ ದರವು ಹೇಗಿದೆ..?
- 500 ml​ ಅಮುಲ್ ಎಮ್ಮೆ ಹಾಲು 36 ರೂಪಾಯಿ
- 500 ml ಅಮುಲ್ ಗೋಲ್ಡ್ ಮಿಲ್ಕ್ 33 ರೂಪಾಯಿ
- 500 ml ಅಮುಲ್ ಶಕ್ತಿ ಮಿಲ್ಕ್ 30 ರೂಪಾಯಿ
ಇದನ್ನೂ ಓದಿ:ಈ ಮಹಿಳೆ ಸತ್ತ ನಂತರವೂ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಇದೆಲ್ಲ ಹೇಗೆ ಸಾಧ್ಯ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us