ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ.. ಕನ್ನಡಿಗರಿಂದ ಭಾರೀ ವಿರೋಧ..!

author-image
Ganesh
Updated On
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ.. ಕನ್ನಡಿಗರಿಂದ ಭಾರೀ ವಿರೋಧ..!
Advertisment
  • ಅಮುಲ್‌ ಜೊತೆಗೆ ಬಿಎಂಆರ್​ಸಿಎಲ್ ಒಪ್ಪಂದ
  • 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ
  • ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ

ಬಿಎಂಆರ್​ಸಿಎಲ್ (Bangalore Metro Rail Corporation Limited) ಮತ್ತೊಮ್ಮೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಕನ್ನಡದ ಅಸ್ಮಿತೆ ನಂದಿನಿ ಮತ್ತೊಮ್ಮೆ ಬೆಂಗಳೂರಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಯ್ತಾ ಎಂಬ ಪ್ರಶ್ನೆ ಎದ್ದಿದೆ.

ಕಾರಣ ಏನು..?

ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಜನಪ್ರಿಯ ಡೈರಿ ಕಂಪನಿ ಅಮುಲ್ (Amul) ಮಳಿಗೆ ತೆರೆಯಲು ಬಿಎಂಆರ್​​ಸಿಎಲ್ ಒಪ್ಪಂದ ಮಾಡಿಕೊಂಡಿದೆ. ನಗರದ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ತೆರೆಯಲು ಒಪ್ಪಂದ ನಡೆದಿದೆ. ಬಿಎಂಆರ್​ಸಿಎಲ್ ಈ ನಡೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶರಣಾಗಲು ಇರಾನ್​​ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..

ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ, ಇಂದಿರಾನಗರ, ಬೈಯಪ್ಪನಹಳ್ಳಿ ಮೆಟ್ರೋ, ಟ್ರಿನಿಟಿ, ಜಯನಗರ ಸೇರಿ ಹತ್ತು ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆಗಳು ಓಪನ್ ಆಗಿವೆ. ಕರ್ನಾಟಕದಲ್ಲಿ ನಂದಿನಿ‌ ಇದ್ದರೂ ಅಮುಲ್ ಜೊತೆ ಒಪ್ಪಂದ ಯಾಕೆ ಎಂಬ ಪ್ರಶ್ನೆಯನ್ನು ಜನ ಎತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಇರಾನ್​ನಲ್ಲಿ ಸಿಲುಕಿರೋ ಭಾರತೀಯರ ರಕ್ಷಣೆ ಏನಾಯ್ತು..? ಭಾರತಕ್ಕೆ ಮರಳಲು ಆಗ್ತಿರುವ ಅಡ್ಡಿ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment