newsfirstkannada.com

ವಿಲನ್ ಚೆಲುವೆಗೆ ಕಲ್ಯಾಣ ಯೋಗ.. ಆ್ಯಮಿ ಜಾಕ್ಸನ್ ಅದ್ಧೂರಿ ಮದುವೆ ನಡೆದಿದ್ದು ಎಲ್ಲಿ? ಫೋಟೋ ಇಲ್ಲಿವೆ

Share :

Published August 25, 2024 at 8:36pm

    ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಚೆಲುವೆ ಆ್ಯಮಿ ಜಾಕ್ಸನ್​ಗೆ ಕಲ್ಯಾಣ ಯೋಗ

    ನಟ ಇಡ್​ ವೆಸ್ಟ್​ವೀಕ್ ಜೊತೆ ಮದುವೆಯಾದ ವಿಲನ್ ಚೆಲುವೆ ಆ್ಯಮಿ

    ಮದುವೆ ಸಂಭ್ರಮದ ಫೋಟೋ ಶೇರ್ ಮಾಡಿದ ವಿಲನ್ ಸಿನಿಮಾ ನಟಿ

ರೋಮ್: ಆ್ಯಮಿ ಜಾಕ್ಸನ್ ಅನ್ನೋ ಹೆಸರು ಕೇಳಿದ್ರೆ ಸಾಕು ನಮ್ಮ ಕಣ್ಣೆದುರು ಬರೋದು ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ನಟನೆಯ ದಿ ವಿಲನ್ ಸಿನಿಮಾ. ಆ ಸಿನಿಮಾದಲ್ಲಿ ನಟಿಸಿದ ಆ ಸ್ನಿಗ್ಧ ಸುಂದರಿಯನ್ನು, ಮಾದಕ ಚೆಲುವೆಯನ್ನ ಮರೆಯೋದಕ್ಕೆ ಯಾರಿಗೆ ತಾನೆ ಸಾಧ್ಯವಿದೆ. ರೋಬೋ 2.O ಸಿನಿಮಾ ನೋಡಿದವರಿಗೂ ಕೂಡ ಈ ದಂತದ ಬೊಂಬೆಯ ಮೇಲೆ ಒಂದು ಕ್ಷಣ ಮೋಹ ಅರಳಿ ಕೆರಳಿರುತ್ತೆ. ಆ ಸ್ನಿಗ್ಧ ಸುಂದರಿ ಈಗ ಹಸೆಮಣೆ ಏರಿದ್ದಾಳೆ. ಅರ್ಥಾತ್ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಗಂಡಾ, ಹೆಣ್ಣಾ ಗೆಸ್​ ಮಾಡಿ.. ಬೇಬಿ ಬಂಪ್​ ಲುಕ್​ನಲ್ಲಿ ಮಿಲನಾ ನಾಗರಾಜ್​ ದಂಪತಿ; ಫ್ಯಾನ್ಸ್​ ಹೇಳಿದ್ದೇ ಬೇರೆ!

ಇಟಲಿಯಲ್ಲಿ ನಟ ಇಡ್ ವೆಸ್ಟ್​ವೀಕ್ ಜೊತೆ ಮೋಹಕ ಸುಂದರಿ ಆ್ಯಮಿ ಜಾಕ್ಸನ್​ ಮದುವೆಯಾಗಿರುವ ಫೋಟೋ ಸದ್ಯ ಇಬ್ಬರ ಇನ್​ಸ್ಟಾಗ್ರಾಮ್​ನಲ್ಲಿ ಹರಿದಾಡುತ್ತಿವೆ. ಗಾಸಿಪ್ ಗರ್ಲ್​ ಅಂತಲೇ ಫೇಮಸ್ ಆಗಿರುವ ನಟ ಇಡ್ ವೆಸ್ಟ್​ವೀಕ್ ಆ್ಯಮಿ ಜಾಕ್ಸನ್​ ಜೊತೆ ವಿವಾಹವಾಗಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಈಗಷ್ಟೇ ಪ್ರಯಾಣ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯುವ ನಟಿಯರಿಗೆ ಕಿರುಕುಳ.. ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗದ ಇಬ್ಬರು ರಾಜೀನಾಮೆ

ಜೋಡಿಯಂತೂ ತಿದ್ದಿ ತೀಡಿ ಹೇಳಿ ಮಾಡಿಸಿದಂತಿದೆ. ಬೆಣ್ಣೆಯ ಮುದ್ದೆಯೊಂದಕ್ಕೆ ಕನ್ಯೆಯ ಆಕಾರಕೊಟ್ಟು ಅದಕ್ಕೊಂದು ಗೌನ್ ತೊಡಿಸಿದಂತೆ ಅಚ್ಚ ಶ್ವೇತವರ್ಣದ ಗೌನ್​ನಲ್ಲಿ ಆ್ಯಮಿ ಎಂಬ ಸೌಂದರ್ಯರಾಶಿ ಮಿನುಗುತ್ತಿದ್ದರೆ ಎಡ್​ ವೆಸ್ಟ್​ವೀಕ್ ಕೂಡ ಬೀಳಿ ಬ್ಲೇಜರ್ ಮೇಲೆ ಮನ್ಮಥನ ರೂಪ ಹೊದ್ದುಕೊಂಡು ನಿಂತಂತೆ ಕಾಣುತ್ತಾರೆ, ಇಟಲಿಯ ಅಮಾಲ್ಫಿ ಕೋಸ್ಟ್​ನಲ್ಲಿ ಈ ಜೋಡಿ ಮದುವೆಯೆಂಬ ಹೊಸ ಪ್ರಯಾಣಕ್ಕೆ ಕಾಲಿಟ್ಟಿದ್ದಾರೆ.

View this post on Instagram

A post shared by Ed Westwick (@edwestwick)

ಕಳೆದ ಜನವರಿಯಲ್ಲಿಯೇ ಈ ಜೋಡಿ ತಮ್ಮ ಎಂಗೇಜ್ಮೆಂಟ್ ಆದ ಬಗ್ಗೆ ಹೇಳಿಕೊಂಡಿದ್ದರು. ಫೋಟೋವೊಂದನ್ನು ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿದ್ದ ಆ್ಯಮಿ ನಿಶ್ಚಿತಾರ್ಥವಾದ ವಿಷಯವನ್ನು ತಿಳಿಸಿ ಪಡ್ಡೆ ಹುಡುಗರ ಹೃದಯಕ್ಕೆ ಕೊಳ್ಳಿ ಇಟ್ಟಿದ್ದರು. 2021ರಿಂದಲೂ ಈ ಜೋಡಿ ಡೇಟಿಂಗ್ ಮೀಟಿಂಗ್ ಅಂತ ಸುತ್ತಾಡುತ್ತಲೇ ಇತ್ತು. ಈಗ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಲನ್ ಚೆಲುವೆಗೆ ಕಲ್ಯಾಣ ಯೋಗ.. ಆ್ಯಮಿ ಜಾಕ್ಸನ್ ಅದ್ಧೂರಿ ಮದುವೆ ನಡೆದಿದ್ದು ಎಲ್ಲಿ? ಫೋಟೋ ಇಲ್ಲಿವೆ

https://newsfirstlive.com/wp-content/uploads/2024/08/Amy-jackson.jpg

Load More