newsfirstkannada.com

ಕೊಲಂಬೋದಲ್ಲಿ ಕೊಹ್ಲಿಗೆ ಮತ್ತೆ ಅವಮಾನ.. ಅಭ್ಯಾಸದ ವೇಳೆ ಕೆಣಕಿದ ಫ್ಯಾನ್; ವಿರಾಟ ದರ್ಶನ ಫಿಕ್ಸ್‌!

Share :

Published August 1, 2024 at 10:20am

Update August 1, 2024 at 10:35am

    ಸಿಂಹಳೀಯರ ಬೇಟೆಗೆ ಕಿಂಗ್​ ವಿರಾಟ್​ ಕೊಹ್ಲಿ ಫುಲ್ ರೆಡಿ!

    ಅಭ್ಯಾಸದಲ್ಲಿ ವಿರಾಟ್​​ ಕೊಹ್ಲಿಗೆ ಕೆಂಡದಂಥಾ ಕೋಪ ಬಂದಿದ್ದೇಕೆ.?

    ODI ಸರಣಿಯಲ್ಲಿ ಸಿಂಹಳೀಯರ ಸಂಹಾರಕ್ಕೆ ವಿರಾಟ್ ಕೊಹ್ಲಿ ಪಣ

ಸಿಂಹಳೀಯರ ವಿರುದ್ಧದ ಕದನಕ್ಕೂ ಮುನ್ನ ವಿರಾಟ್​ ಕೊಹ್ಲಿ ಕೆರಳಿ ಕೆಂಡವಾಗಿದ್ದಾರೆ. ಅಭಿಮಾನಿಯೊಬ್ಬ ಮಾಡಿದ ತಪ್ಪಿನಿಂದ, ಲಂಕನ್​ ಬೌಲರ್ಸ್​​ ಎದೆಯಲ್ಲಿ ನಡುಕ ಹುಟ್ಟಿದೆ.

ಬರೋಬ್ಬರಿ ಒಂದು ತಿಂಗಳ ಅಂತರದ ಬಳಿಕ ಕಿಂಗ್​ ಕೊಹ್ಲಿ ಅಖಾಡಕ್ಕೆ ಮರಳಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಬಳಿಕ ವಿಶ್ರಾಂತಿಗೆ ಜಾರಿದ್ದ ಕೊಹ್ಲಿ, ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡಲಿದ್ದಾರೆ. ಲಂಡನ್​ನಿಂದ ನೇರವಾಗಿ ಕೊಲಂಬೋಗೆ ಬಂದಿಳಿದಿರೋ ವಿರಾಟ್​, ಅಭ್ಯಾಸದ ಅಖಾಡಕ್ಕೆ ಧುಮುಕಿದ್ದಾರೆ.

ಕಿಂಗ್​ ವಿರಾಟ್​​ ಕೊಹ್ಲಿಗೆ ಕೆಂಡದಂಥಾ ಕೋಪ
ಏಕದಿನ ಸರಣಿಯಲ್ಲಿ ಸಿಂಹಳೀಯರ ಸಂಹಾರಕ್ಕೆ ಪಣ
ಮೊದಲಿದ್ದ ವಿರಾಟ್​ ಕೊಹ್ಲಿಗೂ, ಇತ್ತೀಚೆಗೆ ಮೈದಾನದಲ್ಲಿ ಕಾಣಿಸಿಕೊಳ್ತಿದ್ದ ಕೊಹ್ಲಿಗೂ ಸಿಕ್ಕಾಪಟ್ಟೆ ಡಿಫರೆನ್ಸ್​ ಇತ್ತು. ಆರಂಭದಲ್ಲಿ ಅಗ್ರೆಸ್ಸಿವ್​ ಆಗಿ​ ಆರ್ಭಟ ನಡೆಸ್ತಿದ್ದ ಕೊಹ್ಲಿ, ಇತ್ತೀಚೆಗೆ ಕೂಲ್​ & ಕಾಮ್​ ಆಗಿ ಕಾಣಿಸಿಕೊಳ್ತಾ ಇದ್ದರು. ಆದ್ರೆ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವಿರಾಟ್​ ಮತ್ತೆ ವಿರಾಟರೂಪ ದರ್ಶನ ಮಾಡೋದು ಪಕ್ಕಾ. ಆ ಒಂದು ಘಟನೆ ಕಿಂಗ್​ ಕೊಹ್ಲಿಯ ಪಿತ್ತ ನೆತ್ತಿಗೇರಿಸಿದೆ.

ಸೋಮವಾರವೇ ಶ್ರೀಲಂಕಾಗೆ ಲಗ್ಗೆ ಇಟ್ಟಿರೋ ಕೊಹ್ಲಿ, ಕೊಲಂಬೋದಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದರು. ಪ್ರೇಮದಾಸ ಮೈದಾನದಲ್ಲಿ ಪ್ರಾಕ್ಟಿಸ್​ಗೆ ಬಂದ ವೇಳೆ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದ ಕೊಹ್ಲಿಯನ್ನ ಅಭಿಮಾನಿಯೊಬ್ಬ ‘ಚೋಕ್ಲಿ’ ಎಂದು ಹೀಯಾಳಿಸಿದ್ದಾನೆ. ‘ಚೋಕ್ಲಿ’ ಎಂಬ ಶಬ್ಧ ಕಿವಿಗೆ ಬೀಳ್ತಿದ್ದಂತೆ ವಿರಾಟ್‌ ಕೊಹ್ಲಿ ಕೆಂಡವಾಗಿದ್ದಾರೆ.

ಸುಮ್ಮನಿದ್ದ ಕೊಹ್ಲಿಯನ್ನ ಬಡಿದ್ದೆಬ್ಬಿಸಿದ ಅಭಿಮಾನಿ​.!
ಕೆಣಕಿದ್ದು ಫ್ಯಾನ್​​.. ಬೌಲರ್​ಗಳಿಗೆ ಕಾದಿದ್ಯಾ ಮಾರಿಹಬ್ಬ.?
ಯಾರು ಏನೇ ಟೀಕಿಸಿದ್ರೂ, ಬ್ಯಾಟ್​ನಿಂದಲೇ ವಾಪಸ್​​​ ಉತ್ತರ ಕೊಡೋದು ಕಿಂಗ್​ ಕೊಹ್ಲಿಯ ಸ್ಟೈಲ್​. ಈ ಹಿಂದೆ ಹಲವು ಬಾರಿ ಇದನ್ನ ವಿರಾಟ್​ ಕೊಹ್ಲಿ ಮಾಡಿ ತೋರಿಸಿದ್ದಾರೆ. ಇದೀಗ ಲಂಕಾದಲ್ಲೂ ಅದೇ ರಿಪೀಟ್​ ಆಗೋದು ಪಕ್ಕಾ. ಏಕದಿನ ಸರಣಿಗೂ ಮುನ್ನ ತನ್ನ ಪಾಡಿಗೆ ತಾನು ಅಭ್ಯಾಸಕ್ಕೆ ಸಜ್ಜಾಗ್ತಿದ್ದ ಕೊಹ್ಲಿಯನ್ನ, ಸುಖಾ ಸುಮ್ಮನೆ ಕೆಣಕಲಾಗಿದೆ. ಈಗ ಈ ಫ್ಯಾನ್​​ ಮೇಲಿನ ಸಿಟ್ಟು, ಲಂಕನ್​​ ಬೌಲರ್​​ಗಳ ಮೇಲೆ ಪ್ರಯೋಗವಾಗಲಿದೆ. ಈ ಹಿಂದೆ ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿ ಆದಂತೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಶ್ರೀಲಂಕಾದಲ್ಲಿ ಭಾರೀ ಅವಮಾನ.. ಆ ಪದ ಬಳಸಿದ್ದಕ್ಕೆ ಸ್ಟಾರ್​ ಕ್ರಿಕೆಟರ್​ ಬೇಸರ 

2014ರಲ್ಲಿ ಆಸ್ಟ್ರೇಲಿಯನ್ನರಿಗೆ ನರಕ ದರ್ಶನ!
2012ರ ಆಸಿಸ್​ ಪ್ರವಾಸದಲ್ಲಿ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾದ ಫ್ಯಾನ್ಸ್​ ಹೀಯಾಳಿಸಿದ್ದರು. ಇದ್ರಿಂದ ಸಿಟ್ಟಾದ ಕೊಹ್ಲಿ ಅಭಿಮಾನಿಗಳ ಕಡೆಗೆ ಮಿಡಲ್​ ಫಿಂಗರ್​ ತೋರಿಸಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆ ಜಿದ್ದು ಸಾಧಿಸಿದ್ದ ಕೊಹ್ಲಿ 2014ರ ಟೂರ್​ನಲ್ಲಿ ಆಸ್ಟ್ರೇಲಿಯಾದ ಬೆಂಡೆತ್ತಿದ್ದರು. ಆ ನಂತರದ 2018ರ ಪ್ರವಾಸದಲ್ಲಂತೂ ಆರ್ಭಟಿಸಿದ ಕೊಹ್ಲಿ, ಕಾಂಗರೂ ನಾಡಲ್ಲಿ ಭಾರತಕ್ಕೆ ಮೊದಲ ಸರಣಿ ಗೆಲ್ಲಿಸಿಕೊಟ್ಟಿದ್ದರು.

ಆಂಗ್ಲ ಅಭಿಮಾನಿಗಳಿಗೂ ಖಡಕ್​ ಉತ್ತರ!
2018ರ ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ಆಂಗ್ಲ ಅಭಿಮಾನಿಗಳು ಕೊಹ್ಲಿ ಕಾಲೆಳೆದಿದ್ದರು. ಇದು ಕೊಹ್ಲಿಯನ್ನ ಕೆರಳಿಸಿತ್ತು. ಟೀಕಿಸಿದ ಅಭಿಮಾನಿಗಳಿಗೆ ವಿರಾಟ್​ ತನ್ನ ಬ್ಯಾಟ್​ನಿಂದಲೇ ಖಡಕ್​ ಉತ್ತರ ಕೊಟ್ಟಿದ್ದರು. ಇಂಗ್ಲೆಂಡ್​ ಬೌಲರ್​​ಗಳ ಮೇಲೆ ಸವಾರಿ ಮಾಡಿ ನರಕ ದರ್ಶನ ಮಾಡಿದ್ದರು. ಈ ಮೂಲಕ ಕೆಣಕಿದ್ದ ಅಭಿಮಾನಿಗಳ ಲೆಕ್ಕಾ ಚುಕ್ತಾ ಮಾಡಲಾಗಿದೆ.

ಹೇಳಿ-ಕೇಳಿ ಶ್ರೀಲಂಕಾ ಎದುರು ಅದೂ ಕೊಲಂಬೋದಲ್ಲಿ ವಿರಾಟ್​ ಕೊಹ್ಲಿ ಸಾಲಿಡ್​ ರೆಕಾರ್ಡ್​​ ಹೊಂದಿದ್ದಾರೆ. ಜಬರ್ದಸ್ತ್​​ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದ ಕೊಹ್ಲಿಯನ್ನೇ ಕಟ್ಟಿ ಹಾಕೋದೆ ಸಿಂಹಳೀಯ ಪಡೆಗೆ ದೊಡ್ಡ ತಲೆನೋವಾಗಿತ್ತು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಲಂಕನ್​ ಅಭಿಮಾನಿ ಸುಖಾ ಸುಮ್ಮನೆ ಕೊಹ್ಲಿಯನ್ನ ಕೆಣಕಿದ್ದಾರೆ. ಕೆರಳಿರೋ ಕೊಹ್ಲಿ ಸಿಂಹಳೀಯರನ್ನ ಸುಮ್ಮನೆ ಬಿಡ್ತಾರಾ ಅನ್ನೋದಕ್ಕೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಲಂಬೋದಲ್ಲಿ ಕೊಹ್ಲಿಗೆ ಮತ್ತೆ ಅವಮಾನ.. ಅಭ್ಯಾಸದ ವೇಳೆ ಕೆಣಕಿದ ಫ್ಯಾನ್; ವಿರಾಟ ದರ್ಶನ ಫಿಕ್ಸ್‌!

https://newsfirstlive.com/wp-content/uploads/2024/08/Virat-Kohli-Practise-2.jpg

Load More