Advertisment

VIDEO: ಫಿಕ್ಸ​ಡ್​​ ಡಿಪಾಸಿಟ್​ ಮೇಲೆ ಹೆಚ್ಚು ಟ್ಯಾಕ್ಸ್ ಹೇರಿದ ಬ್ಯಾಂಕ್ ಮ್ಯಾನೇಜರ್; ರೊಚ್ಚಿಗೆದ್ದ ಗ್ರಾಹಕ ಮಾಡಿದ್ದೇನು?

author-image
Gopal Kulkarni
Updated On
VIDEO: ಫಿಕ್ಸ​ಡ್​​ ಡಿಪಾಸಿಟ್​ ಮೇಲೆ ಹೆಚ್ಚು ಟ್ಯಾಕ್ಸ್ ಹೇರಿದ ಬ್ಯಾಂಕ್ ಮ್ಯಾನೇಜರ್; ರೊಚ್ಚಿಗೆದ್ದ ಗ್ರಾಹಕ ಮಾಡಿದ್ದೇನು?
Advertisment
  • ಠೇವಣಿ ಹಣದ ಮೇಲೆ ಹೆಚ್ಚು ತೆರಿಗೆ ಹೇರಿದ್ದಕ್ಕೆ ಮಾರಾಮಾರಿ
  • ಬ್ಯಾಂಕ್ ಮ್ಯಾನೇಜರ್​ ಜೊತೆ ಕೈ ಕೈ ಮಿಲಾಯಿಸಿದ ಗ್ರಾಹಕ
  • ಮತ್ತೊಂದು ಬ್ಯಾಂಕ್​ನಲ್ಲಿಯೂ ಕೂಡ ಇದೇ ಮಾದರಿ ಘಟನೆ

ಬ್ಯಾಂಕ್ ಮ್ಯಾನೇಜರ್ ಹಾಗೂ ಕಸ್ಟಮರ್​ ಇಬ್ಬರೂ ಬ್ಯಾಂಕ್​ನಲ್ಲಿ ಕುಸ್ತಿಗೆ ಬಿದ್ದಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಒಂದು ವಿಡಿಯೋದಲ್ಲಿ ನಡೆದ ಘಟನೆ ಅಹ್ಮದಾಬಾದ್​ನ ಯುನಿಯನ್ ಬ್ಯಾಂಕ್​ನಲ್ಲಿಯದ್ದು ಎಂದು ಹೇಳಲಾಗುತ್ತಿದೆ. ಜೈಮನ್ ರೈವಾಲ್ ಎಂಬ ಗ್ರಾಹಕ ಬ್ಯಾಂಕ್​ನಲ್ಲಿ ಇಟ್ಟಿದ್ದ ತಮ್ಮ ಫಿಕ್ಸಡ್​​ ಡೆಪಾಸಿಟ್ ಮೇಲೆ ಹೆಚ್ಚು ತೆರಿಗೆ ಹೇರಲಾಗಿದೆ ಎಂದು ಬೇಸರಗೊಂಡು ಬ್ಯಾಂಕ್​ಗೆ ನುಗ್ಗಿ ಮ್ಯಾನೇಜರ್​ ಅನ್ನು ಹಣ್ಣುಗಾಯಿ ನೀರುಗಾಯಿಯಾಗುವಂತೆ ಹೊಡೆದಿದ್ದಾನೆ.

Advertisment

ಇದನ್ನೂ ಓದಿ: ಯೂಟ್ಯೂಬ್​​ ನೋಡಿ ಬಾನಾಮತಿ ಕಲಿತವರು ಮಾಡಿದ್ದೇನು? 50 ಕೋಟಿಗಾಗಿ ಹೋಯ್ತು ಪ್ರಾಣ!

43 ಸೆಕೆಂಡ್​ಗಳ ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಇಬ್ಬರು ಒಬ್ಬರಿಗೊಬ್ಬರು ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ ಇಡೀ ಬ್ಯಾಂಕ್​ ಅನ್ನೇ ಕುಸ್ತಿ ಕಣವನ್ನಾಗಿಸಿದ್ದಾರೆ. ಗ್ರಾಹಕರ ತಾಯಿ ಜಗಳವನ್ನು ಬಿಡಿಸಲು ಮಧ್ಯ ಬಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರು ಕೈ ಕೈ ಮಿಲಾಯಿಸಿ ನೂಕುತ್ತಾ ತಳ್ಳಾಡುತ್ತಾ ಯುದ್ಧವನ್ನು ಮುಂದುವರಿಸಿದ್ದಾರೆ. ಕೊನೆಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಅಲ್ಲಿರುವ ಇತರೆ ಗ್ರಾಹಕರು ಸೇರಿ ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ಆದರೂ ಕೊಸರಿಕೊಂಡ ಗ್ರಾಹಕ ಮತ್ತೊಬ್ಬ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.

Advertisment


">December 6, 2024

ಅಹ್ಮದಾಬಾದ್​ನ ವಸ್ತ್ರಾಪುರದ ಯುನಿಯನ್ ಬ್ಯಾಂಕ್ ಬ್ರ್ಯಾಂಚ್​ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:ಪೊಲೀಸರ ಕಠಿಣ ಕ್ರಮ ಹೊಗಳಿದ್ದೇ ತಪ್ಪಾಯ್ತಾ? ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ! ಆಗಿದ್ದೇನು?

ಇದೇ ಮಾದರಿಯ ಮತ್ತೊಂದು ಘಟನೆ ಪಾಟ್ನಾದ ಗಾಂಧಿ ಮೈದಾನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಕೆನರಾ ಬ್ಯಾಂಕ್​ನಲ್ಲಿಯೂ ಕೂಡ ನಡೆದಿದೆ. ಮಹಿಳಾ ಬ್ಯಾಂಕ್ ಮ್ಯಾನೇಜರ್ ಜೊತೆಗೆ ಸಿಬಿಲ್ ಸ್ಕೋರ್ ವಿಚಾರವಾಗಿ ವಾಗ್ವಾದಕ್ಕೆ ಇಳಿದ ಗ್ರಾಹಕನೊಬ್ಬ ಆಕೆಯತ್ತ ಬೆರಳು ಮಾಡುತ್ತಾ ಕೊನೆಗೆ ಅವರ ಕೈಯಲ್ಲಿರುವ ಮೊಬೈಲ್ ಅ​ನ್ನು ಕಿತ್ತುಕೊಂಡು ನೆಲಕ್ಕೆ ಎಸೆದಿದ್ದಾರೆ.

Advertisment


">December 7, 2024

ಇದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ನನಗೆ ಮುಜುಗರಕ್ಕೀಡು ಮಾಡಬೇಕು ಎಂದುಕೊಂಡಿದ್ದೀಯಾ ಎಂದು ಗ್ರಾಹಕ ಅಬ್ಬರಿಸಿದ್ದಾನೆ. ನಂತರ ಮೊಬೈಲ್​ ಅನ್ನು ಮಹಿಳಾ ಮ್ಯಾನೇಜರ್​ಗೆ ಹಿಂದಿರುಗಿಸಿ ಚೇರ್ ಬಳಿ ಬಂದು ನಿಮಗ್ಯಾರು ಕೂಡ ಬೆಂಬಲಿಸುವುದಿಲ್ಲ. ನನ್ನ ಸಿಬಿಲ್ ಸ್ಕೋರ್​ ಅನ್ನು ಸರಿಯಾಗಿ ಫಿಕ್ಸ್ ಮಾಡಿ ಎಂದು ಗುಡುಗಿದ್ದಾನೆ. ಈ ಪ್ರಕರಣ ಕೂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment