newsfirstkannada.com

VIDEO: ಸಾರ್ವಜನಿಕ ಸಮಾರಂಭದಲ್ಲಿ ಗದ್ಗದಿತರಾದ ಪ್ರಧಾನಿ ನರೇಂದ್ರ ಮೋದಿ; ಹೇಳಿದ್ದೇನು?

Share :

Published January 19, 2024 at 3:46pm

    ‘ನನಗೂ ಇಂತಹ ಮನೆಗಳಲ್ಲಿ ವಾಸಿಸಬೇಕು ಅನ್ನೋ ಆಸೆ ಇತ್ತು’

    ಸೊಲ್ಲಾಪುರದಲ್ಲಿ ದೇಶದ ಅತಿ ದೊಡ್ಡ ಸೊಸೈಟಿ ಲೋಕಾರ್ಪಣೆ

    15,000 ಫಲಾನುಭವಿಗಳಿಗೆ ಮನೆಗಳು ಹಸ್ತಾಂತರ ಮಾಡಿದ ಮೋದಿ

ಸೊಲ್ಲಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಗದ್ಗದಿತರಾಗಿ ಭಾಷಣ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸೊಲ್ಲಾಪುರದಲ್ಲಿ ದೇಶದ ಅತಿದೊಡ್ಡ ಸೊಸೈಟಿಯನ್ನು ನಿರ್ಮಾಣ ಮಾಡಲಾಗಿದೆ. 15 ಸಾವಿರ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದ ಮೋದಿ ಭಾವುಕರಾಗಿದ್ದಾರೆ.

ಸೋಲಾಪುರದ ರಾಯನಗರ ಹೌಸಿಂಗ್ ಸೊಸೈಟಿಯಲ್ಲಿ ಕೈಮಗ್ಗ ಕಾರ್ಮಿಕರು, ಚಿಂದಿ ಆಯುವವರು, ಬೀಡಿ ಕಾರ್ಮಿಕರು ಮತ್ತು ಚಾಲಕರಿಗಾಗಿ ಸಾವಿರಾರು ಮನೆಗಳನ್ನ ನಿರ್ಮಿಸಲಾಗಿದೆ. 15,000 ಫಲಾನುಭವಿಗಳಿಗೆ ಮನೆ ಕೀಗಳನ್ನು ಹಸ್ತಾಂತರಿಸಿದ ಪ್ರಧಾನಿ ಮೋದಿ ಭಾಷಣ ಮಾಡಿದರು. ಪ್ರಧಾನಮಂತ್ರಿ ಅವಾಸ್ ಯೋಜನೆಯಲ್ಲಿ ಒಟ್ಟು 90 ಸಾವಿರ ಮನೆಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: EXCLUSIVE: ಮೊಟ್ಟ ಮೊದಲ ಬಾರಿಗೆ ನ್ಯೂಸ್‌ ಫಸ್ಟ್‌ನಲ್ಲಿ ರಾಮ ಲಲ್ಲಾನ ಸಂಪೂರ್ಣ ದರ್ಶನ

ಬಡವರಿಗೆ ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಾಲ್ಯದಲ್ಲಿ ನನಗೂ ಇಂತಹ ಮನೆಗಳಲ್ಲಿ ವಾಸಿಸಬೇಕು ಅನ್ನೋ ಬಯಕೆ ಇತ್ತು ಎನ್ನುತ್ತಾ ಭಾವುಕರಾದರು. ಸ್ವಲ್ಪ ಹೊತ್ತು ಮೌನಕ್ಕೆ ಜಾರಿದ ಪ್ರಧಾನಿ ಮೋದಿ ಅವರು ಕಣ್ಣೀರನ್ನು ಸಹಿಸಿಕೊಂಡು ಮಾತು ಮುಂದುವರಿಸಿದರು.

ನಾನು ಬಾಲ್ಯದಲ್ಲಿದ್ದಾಗ ಇದೇ ರೀತಿಯ ಮನೆಯಲ್ಲಿ ವಾಸಿಸುವ ಮಹದಾಸೆಯನ್ನು ಹೊಂದಿದ್ದೆ. ಇಂದು ಸಾವಿರಾರು ಕುಟುಂಬಗಳ ಮನೆ ಕಟ್ಟುವ ಕನಸು ನನಸಾಗಿದೆ. ಅವರ ಆಶೀರ್ವಾದವೇ ನನಗೆ ಬಹುದೊಡ್ಡ ಆಸ್ತಿ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಸಾರ್ವಜನಿಕ ಸಮಾರಂಭದಲ್ಲಿ ಗದ್ಗದಿತರಾದ ಪ್ರಧಾನಿ ನರೇಂದ್ರ ಮೋದಿ; ಹೇಳಿದ್ದೇನು?

https://newsfirstlive.com/wp-content/uploads/2024/01/Modi-Crying.jpg

Load More