newsfirstkannada.com

ವಾಲ್ಮೀಕಿ ಅಭಿವೃದ್ಧಿ ನಿಗಮದ ನೌಕರನ ಆತ್ಮಹತ್ಯೆ.. ಡೆತ್‌ನೋಟ್‌ನಲ್ಲಿ ಕೋಟಿ, ಕೋಟಿ ಹಗರಣದ ರಹಸ್ಯ ಬಯಲು

Share :

Published May 27, 2024 at 8:34pm

Update May 27, 2024 at 9:15pm

  ಚಂದ್ರಶೇಖರ್, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕೌಂಟ್ ಸೂಪರಿಂಟೆಂಡೆಂಟ್

  ಸಾವಿಗೂ ಮುನ್ನ 6 ಪುಟದ ಡೆತ್​ನೋಟ್​ ಬರೆದಿಟ್ಟ ವ್ಯಕ್ತಿ ಆತ್ಮಹತ್ಯೆಗೆ ಶರಣು

  ಇಲಾಖೆಯ ₹85 ಕೋಟಿ ಅವ್ಯವಹಾರಕ್ಕೆ ಬಿದಿದ್ಯಾ ಸರ್ಕಾರಿ ನೌಕರನ ಹೆಣ?

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟ್ ಸೂಪರಿಂಟೆಂಡೆಂಟ್ ಆತ್ಮಹತ್ಯೆ ಮಾಡಿಕೊಂಡಿರೋದು ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಸರ್ಕಾರ ಯಾವುದಾದ್ರೇನು? ನೌಕರರ ಹಿತ ಕಾಯೋರು ಯಾರು? ಹಣಕ್ಕಾಗಿ, ಒತ್ತಡಗಳಿಗೆ ಹೆಣವಾಗುತ್ತಿರುವ ಸರಣಿಗೆ ಇಂದು ಹೊಸ ಸೇರ್ಪಡೆಯಾಗಿದೆ.

ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣು?
ಇಲಾಖೆಯ ₹85 ಕೋಟಿ ಅವ್ಯವಹಾರಕ್ಕೆ ನೌಕರನ ಹೆಣ!
ಇವ್ರ ಹೆಸರು ಚಂದ್ರಶೇಖರ್​. ವಯಸ್ಸು 50ರ ಆಸುಪಾಸು. ಮೂಲತಃ ಶಿವಮೊಗ್ಗದ ಈ ಚಂದ್ರಶೇಖರ್​​​, ಕೆಲಸ ಮಾಡ್ತಿರೋದು ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ. ನಿನ್ನೆ ರಾತ್ರಿ ನೇಣಿಗೆ ಕೊರಳೊಡ್ಡಿದ ಚಂದ್ರಶೇಖರ್​​ ತನ್ನ ಸಾವಿನ ಕಾರಣವನ್ನು ಹೇಳಿ ಹೋಗಿದ್ದಾರೆ. ಚಂದ್ರಶೇಖರ್ ಅವರು ಸಾವಿಗೂ ಮುನ್ನ 6 ಪುಟದ ಡೆತ್​ನೋಟ್​ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಮೇಲೆ ಆರೋಪ‌ದ ಪಟ್ಟಿಯನ್ನೇ ಮಾಡಿ ಜೀವಬಿಟ್ಟಿದ್ದಾರೆ.

ಡೆತ್​ನೋಟ್​ನಲ್ಲಿ ಏನಿದೆ?
ಚಂದ್ರಶೇಖರ್​​ ಇಲಾಖೆಯ ಸಣ್ಣ ಪುಟ್ಟ ನೌಕರನಲ್ಲ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟ್ ಸೂಪರಿಂಟೆಂಡೆಂಟ್. ನಿಗಮದಲ್ಲಿ ಈ ಹಿಂದೆ ₹85 ಕೋಟಿ ಅವ್ಯವಹಾರ ನಡೆದಿತ್ತಂತೆ. ಹಣ ವರ್ಗಾವಣೆ ಒತ್ತಡ ಆರೋಪ‌ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ನೌಕರ, ಇಲಾಖೆಯ ಮೂರು ಜನರ ಹೆಸರನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ನಿಗಮದ ಎಂಡಿ ಜೆ.ಪದ್ಮನಾಭ, ಖಾತೆ ವ್ಯವಸ್ಥಾಪಕ ಪರಶುರಾಮ್ ದುರ್ಗಣ್ಣನವರ್, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕಿ ಶುಚಿಸ್ಮಿತ ಮೇಲೂ ಆರೋಪ ಹೊರಿಸಿದ್ದಾರೆ. ಅಲ್ಲದೆ, ಈ ಅವ್ಯವಹಾರದಲ್ಲಿ ನನ್ನ ಪಾತ್ರವಿಲ್ಲ ಅಂತ ಚಂದ್ರಶೇಖರ್ ಹೇಳಿದ್ದಾರೆ.

ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಬೇರೆ ಅಕೌಂಟ್‌ಗೆ ಹಣ ಹಾಕಲು ಹೇಳಿದ್ದಾರೆ. ಇದು ಅಕ್ರಮ ಅಂತ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪರನ್ನ ಗುರಿಯಾಗಿಸಿ ತಕ್ಷಣವೇ ಸಂಪುಟದಿಂದ ಕೈಬಿಡಲು ಆಗ್ರಹಿಸಿದ್ದಾರೆ.

ಇದನ್ನೂ ಓದಿ: VIDEO: ಮೇ 31ಕ್ಕೆ ಪ್ರಜ್ವಲ್ ರೇವಣ್ಣ ವಾಪಸ್.. ನನಗೀಗ ಸಮಾಧಾನ ತಂದಿದೆ; HD ಕುಮಾರಸ್ವಾಮಿ 

ಹಣವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಯಾರದ್ದೋ ತಪ್ಪು ತನ್ನ ಮೇಲೆ ಹಾಕುತ್ತಿದ್ದಾರೆ ಅನ್ನೋ ಭಯವೂ ಡೆತ್​ನೋಟ್​ನಲ್ಲಿ ಕಾಣಿಸಿದೆ. ಒಟ್ಟಾರೆ, ವಿನೋಬನಗರ ಠಾಣೆಯ ಪೊಲೀಸರು ಡೆತ್​ನೋಟ್​ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ 85 ಕೋಟಿ ಅವ್ಯವಹಾರದ ಆರೋಪಕ್ಕೆ ಯಾವ ರೀತಿಯ ಕ್ರಮಕ್ಕೆ ಮುಂದಾಗಲಿದೆ ಎಂದು ವಿರೋಧ ಪಕ್ಷಗಳು ಸೂಕ್ಷ್ಮವಾಗಿ ಗಮನಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮದ ನೌಕರನ ಆತ್ಮಹತ್ಯೆ.. ಡೆತ್‌ನೋಟ್‌ನಲ್ಲಿ ಕೋಟಿ, ಕೋಟಿ ಹಗರಣದ ರಹಸ್ಯ ಬಯಲು

https://newsfirstlive.com/wp-content/uploads/2024/05/SMG-Govt-Employee-Death.jpg

Load More