ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಮಹತ್ವದ ಒಪ್ಪಿಗೆ
ಕೆಲ ರಾಜ್ಯಗಳಲ್ಲಿ ಅವಧಿಗಿಂತ ಮುಂಚಿತವಾಗಿ ವಿಧಾನಸಭೆ ಚುನಾವಣೆ ನಡೆಯುತ್ತಾ?
ಲೋಕಸಭೆ, ವಿಧಾನಸಭೆ ಎಲೆಕ್ಷನ್ ನಡೆದ 100 ದಿನದೊಳಗೆ ಸ್ಥಳೀಯ ಚುನಾವಣೆ
ನವದೆಹಲಿ: ಒನ್ ನೇಷನ್, ಒನ್ ಎಲೆಕ್ಷನ್ ಅಂದ್ರೆ ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ ಜಾರಿಗೆ ಮಹತ್ವದ ಒಪ್ಪಿಗೆ ಸಿಕ್ಕಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಇಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ದೇಶದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಜಾರಿಗಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು. ಈ ಸಮಿತಿ ಶಿಫಾರಸ್ಸಿಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಒನ್ ನೇಷನ್, ಒನ್ ಎಲೆಕ್ಷನ್ ಜಾರಿ ಹೇಗೆ?
ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವ ತೀರ್ಮಾನದ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಶ್ವಿನ್ ವೈಷ್ಣವ್ ಅವರು ದೇಶದಲ್ಲಿ 2 ಹಂತದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಜಾರಿಗೆ ತರಲಾಗುತ್ತದೆ. ಒನ್ ನೇಷನ್ , ಒನ್ ಎಲೆಕ್ಷನ್‌ನಿಂದ ಅನೇಕ ಸಮಸ್ಯೆಗಳು ಪರಿಹಾರ ಆಗಲಿದೆ. ಇದು ನಮ್ಮ ದೇಶದ ಬೆಳವಣಿಗೆಗೂ ಸಹಕಾರಿಯಾಗಲಿದೆ. ಹೀಗಾಗಿ ಒನ್ ನೇಷನ್, ಒನ್ ಎಲೆಕ್ಷನ್ ಅನ್ನು ಸರ್ವಸಮ್ಮತಿಯಿಂದ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#WATCH | Union Cabinet has accepted the recommendations by the high-level committee on ‘One Nation, One Election’, announces Union Minister Ashwini Vaishnaw.
(Video source: PIB/ YouTube) pic.twitter.com/NnE99wNDer
— ANI (@ANI) September 18, 2024
ರಾಜ್ಯ ವಿಧಾನಸಭಾ ಚುನಾವಣೆ ಹೇಗೆ?
ದೇಶಾದ್ಯಂತ ಒನ್ ನೇಷನ್, ಒನ್ ಎಲೆಕ್ಷನ್ ಜಾರಿಗೆ ಬಂದ್ರೆ ಕೆಲ ರಾಜ್ಯಗಳಲ್ಲಿ ಅವಧಿಗಿಂತ ಮುಂಚಿತವಾಗಿ ವಿಧಾನಸಭೆ ಚುನಾವಣೆ ನಡೆಸಬೇಕಾಗುತ್ತೆ. ಲೋಕಸಭೆ, ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಈ ಮಸೂದೆಯಲ್ಲಿ ಒಪ್ಪಿಗೆ ಪಡೆಯಲಾಗುತ್ತೆ. ಇದರಿಂದ ಕೆಲ ರಾಜ್ಯಗಳ ವಿಧಾನಸಭೆಯ ಅವಧಿಯು ಕಡಿತ ಆಗುವ ಸಾಧ್ಯತೆಗಳಿದೆ.
ಈ ಕಾನೂನು ಜಾರಿಯಾದ್ರೆ ಲೋಕಸಭೆ, ವಿಧಾನಸಭೆ ಚುನಾವಣೆ ನಡೆದ 100 ದಿನದೊಳಗೆ ನಗರ ಸ್ಥಳೀಯ ಸಂಸ್ಥೆ, ಪಂಚಾಯಿತಿಗಳು, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತಿ, ಗ್ರಾ. ಪಂಚಾಯಿತಿಗಳಿಗೂ 100 ದಿನದೊಳಗೆ ಚುನಾವಣೆ ನಡೆಸಬೇಕು.
ಇದನ್ನೂ ಓದಿ: ಪ್ರಧಾನಿ ಮೋದಿ ಸರ್ಕಾರದಿಂದ ದಿಟ್ಟ ಹೆಜ್ಜೆ; ಕೊನೆಗೂ ಒನ್ ನೇಷನ್, ಒನ್ ಎಲೆಕ್ಷನ್‌ಗಾಗಿ ಸಮಿತಿ ರಚನೆ; ಏನಿದರ ವಿವಾದ?
1967ರವರೆಗೂ ಜಾರಿಯಲ್ಲಿದ್ದ ಕಾನೂನು!
1951-52, 1957, 1962, 1967ರವರೆಗೆ ಭಾರತದಲ್ಲಿ ಒಂದೇ ಬಾರಿಗೆ ಲೋಕಸಭೆ, ರಾಜ್ಯ ವಿಧಾನಸಭೆ ಚುನಾವಣೆಗಳು ನಡೆಯುತ್ತಿದ್ದವು. ಆದರೆ 1967ರ ಬಳಿಕ ರಾಜ್ಯ ವಿಧಾನಸಭೆಗಳು ಬೇರೆ ಬೇರೆ ಕಾರಣದಿಂದ ವಿಸರ್ಜನೆಗೊಂಡವು. ಇದರಿಂದ ಲೋಕಸಭೆ, ರಾಜ್ಯ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆಸಲಾಗಲಿಲ್ಲ.
ಇದನ್ನೂ ಓದಿ: ಗವರ್ನರ್‌ಗೆ ಸಿಎಂ ಠಕ್ಕರ್; ಕುಲಪತಿಗಳ ನೇಮಕ ಮಾಡುವ ಅಧಿಕಾರವನ್ನೇ ಕಸಿದುಕೊಂಡ ಸಿದ್ದರಾಮಯ್ಯ..!
1980ರಲ್ಲಿ ಮತ್ತೆ ಒನ್ ನೇಷನ್, ಒನ್ ಎಲೆಕ್ಷನ್ ನಡೆಸುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿತ್ತು. 1999ರಲ್ಲಿ ಜಸ್ಟೀಸ್ ಬಿ.ಪಿ. ಜೀವನ್ ರೆಡ್ಡಿ ಅಧ್ಯಕ್ಷತೆಯ ಕಾನೂನು ಆಯೋಗದಿಂದ ಒನ್ ನೇಷನ್, ಒನ್ ಎಲೆಕ್ಷನ್ ಬಗ್ಗೆ ಶಿಫಾರಸು ಮಾಡಲಾಗಿತ್ತು.
2024ರ ಮಾರ್ಚ್ 14ರಂದು ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ 18000 ಪುಟಗಳ ವರದಿ ಸಲ್ಲಿಸಿತ್ತು. ಇದೀಗ ಈ ಸಮಿತಿಯ ಶಿಫಾರಸ್ಸಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಒಪ್ಪಿಗೆ ಸೂಚಿಸಿದೆ.
ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸಬೇಕಾದ್ರೆ ಸಂವಿಧಾನಕ್ಕೆ 18 ತಿದ್ದುಪಡಿಯನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಒನ್ ನೇಷನ್, ಒನ್ ಎಲೆಕ್ಷನ್‌ನಿಂದ ಚುನಾವಣಾ ವೆಚ್ಚ ತಗ್ಗಿಸುವುದು ಬಹಳ ಮುಖ್ಯ ಉದ್ದೇಶವಾಗಿದೆ. ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆದರೆ ಪದೇ ಪದೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರಲ್ಲ. ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಪ್ರಾಕ್ಟಿಕಲ್ ಆಗಿ ಇದು ಜಾರಿಗೆ ತರಲು ಸಾಧ್ಯನಾ ಅನ್ನೋ ಅನುಮಾನ ವ್ಯಕ್ತಪಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ