ಸೆಂಟ್ರಲ್ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಅಕ್ರಮ!
ದರ್ಶನ್ ಫೋಟೋ ವೈರಲ್ ಆದ ಬಳಿಕ ತನಿಖೆಗೆ ಸರ್ಕಾರ ಆದೇಶ
13ನೇ ಎಸಿಎಂಎಂ ಕೋರ್ಟ್‌ನಲ್ಲಿ ಫೋಟೋ ಪ್ರಕರಣದ ವಿಚಾರಣೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತಾವೇ ತೊಡಿಕೊಂಡ ಹಳ್ಳಕ್ಕೆ ಬಿದ್ದಿದ್ದಾರೆ. ಸೆಂಟ್ರಲ್ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ರೌಡಿಗಳ ರಹಸ್ಯ ಬಟಾ ಬಯಲಾಗಿದ್ದು, ಅದು ಸೀದಾ ದರ್ಶನ್ ಅವರ ಕೊರಳಿಗೆ ಸುತ್ತಿಕೊಂಡಿದೆ. ದರ್ಶನ್ ವಿರುದ್ಧ FIR ದಾಖಲಾದ ಬೆನ್ನಲ್ಲೇ ಕೋರ್ಟ್ ಕೂಡ ಮಹತ್ವದ ಆದೇಶ ನೀಡಿದೆ.
ಇದನ್ನೂ ಓದಿ: ದರ್ಶನ್ ಫೋಟೋ ವೈರಲ್ ಮಾಡಿದ ವೇಲು ಯಾರು? ನಾಗನಿಗಾಗಿ ಡಬಲ್ ಮರ್ಡರ್ ಮಾಡಿದ್ದ ಶಿಷ್ಯ!
ಒಂದು ಕೈಯಲ್ಲಿ ಟೀ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿದ್ದ ದರ್ಶನ್ ಅವರ ಫೋಟೋ ಇಡೀ ರಾಜ್ಯಾದ್ಯಂತ ಸದ್ದು ಮಾಡಿದೆ. ಕೈದಿಗಳ ಸೆರೆಮನೆ ಅರಮನೆ ಆಗಿ ಬದಲಾಗಿರೋದು ಬಹಳಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ. ತೀವ್ರ ಟೀಕೆಗೆ ಗುರಿಯಾದ ಬಂಧಿಖಾನೆ ಅಧಿಕಾರಿಗಳು, ಗೃಹ ಇಲಾಖೆ, ಸಿಎಂ ಸಿದ್ದರಾಮಯ್ಯ ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ.
ಜೈಲಿನ ಬಿಂದಾಸ್ ಜೀವನ ಸರ್ಕಾರದ ಮಟ್ಟದಲ್ಲಿ ತನಿಖೆಗೆ ಆದೇಶಿಸಿರುವಾಗಲೇ ದರ್ಶನ್‌ಗೆ ಗಂಡಾಂತರ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ದರ್ಶನ್ ಅವರು ಈಗ ವಿಚಾರಣಾಧೀನ ಕೈದಿಯಾಗಿದ್ದಾರೆ. ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್ ಆದ ಬಳಿಕ ಅವರ ವಿರುದ್ಧ ಕೇಸ್ ದಾಖಲಾಯ್ತು. ಆದರೆ ಆರೋಪಿಯ ವಿಚಾರಣೆಗೆ ಕೋರ್ಟ್ ಅನುಮತಿಯ ಅಗತ್ಯವಿತ್ತು. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದ ಸರ್ಕಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇದನ್ನೂ ಓದಿ: ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗನದ್ದೇ ಹವಾ.. ದರ್ಶನ್‌ಗೇ ಆರ್ಡರ್ ಮಾಡಿ ಕರೆಸಿಕೊಳ್ತಿದ್ದ ರೌಡಿಶೀಟರ್!
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ ಸಿಕ್ಕ ಪ್ರಕರಣದಲ್ಲಿ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ನೀಡಿದೆ. 13ನೇ ಎಸಿಎಂಎಂ ಕೋರ್ಟ್ ಜೈಲಿನಲ್ಲಿ ಆರೋಪಿಗಳ ವಿಚಾರಣೆಗೆ ಅನುಮತಿ ನೀಡಿ ಮಹತ್ವದ ಆದೇಶ ನೀಡಿದೆ. ದರ್ಶನ್ ಫೋಟೋ ವೈರಲ್ ಆದ ಕೂಡಲೇ 7 ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು. ಆದರೆ ದರ್ಶನ್ ಅವರ ವಿಚಾರಣೆ ನಡೆಸಲು ಕೋರ್ಟ್ ಅನುಮತಿಗಾಗಿ ಕಾಯುತ್ತಿತ್ತು. ಇದೀಗ ದರ್ಶನ್ ಅವರ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ನೀಡಿದೆ. ಮುಂದೆ ಕೊಲೆ ಕೇಸ್ ಜೊತೆಗೆ ದರ್ಶನ್ ಅವರು ಮತ್ತೆರಡು ಕೇಸ್‌ನ ವಿಚಾರಣೆಗೂ ಹಾಜರಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ