/newsfirstlive-kannada/media/post_attachments/wp-content/uploads/2025/01/DELHI-ATUL-SUBHASH-SIMILAR-CASE.jpg)
ಕಳೆದ ತಿಂಗಳು ಬೆಂಗಳೂರಿನ ಅತುಲ್ ಸುಭಾಷ್ ಪ್ರಕರಣ ದೊಡ್ಡ ಸುದ್ದಿಯನ್ನು ಮಾಡಿತ್ತು. ಐಪಿಸಿ ಸೆಕ್ಷನ್ 498ಎ ಸೆಕ್ಷನ್ ಹೇಗೆಲ್ಲಾ ದುರ್ಬಳಕೆ ಆಗುತ್ತಿದೆ ಎಂಬ ಬಗ್ಗೆ ಚರ್ಚೆಗಳು ಕೂಡ ಆಗಿದ್ದವು. ಸುಳ್ಳು ಕೇಸ್​ಗಳಿಂದ ಎಷ್ಟೊಂದು ಜನರ ಬದುಕು ಹೀಗೆ ನೇಣಿಗೆ ಕೊರಳೊಡ್ಡುತ್ತಿವೆ ಎಂಬ ಚರ್ಚೆಯೂ ನಡೆದಿತ್ತು. ಈಗ ಅದೇ ರೀತಿಯ ಮತ್ತೊಂದು ಪ್ರಕರಣ ದೆಹಲಿಯಲ್ಲಿ ನಡೆದಿದೆ
ದೆಹಲಿಯ ವುಡ್ ಬಾಕ್ಸ್ ಕೆಫೆ ಮಾಲೀಕ ಪುನೀತ್ ಖುರಾನಾ ಎಂಬುವವರು ಜೀವ ಕಳೆದುಕೊಂಡಿದ್ದಾರೆ. 2016ರಲ್ಲಿ ಮಣಿಕಾ ಜಗದೀಶ್ ಪವ್ವಾ ಜೊತೆಗೆ ವಿವಾಹವಾಗಿದ್ದ ಪುನೀತ್ ಖುರಾನಾ ದೆಹಲಿಯ ಮಾಡೆಲ್ ಟೌನ್​ನ ಕಲ್ಯಾಣ ವಿಹಾರ್​ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ:ಹೊಸ ವರ್ಷದ ಹಿಂದಿನ ದಿನ ಕರಾಳ ಕೃತ್ಯ; ಮದ್ಯ ಸೇವಿಸಿ ತಾಯಿ, 4 ಸಹೋದರಿಯರ ಜೀವ ತೆಗೆದ..
/newsfirstlive-kannada/media/post_attachments/wp-content/uploads/2025/01/DELHI-ATUL-SUBHASH-SIMILAR-CASE-1.jpg)
ಪತಿ ಪತ್ನಿಯ ನಡುವೆ ಇತ್ತೀಚೆಗೆ ಕೆಲವು ಜಗಳಗಳಾಗಿದ್ದರಿಂದ ಬಾಂಧವ್ಯದಲ್ಲಿ ಬಿರುಕು ಮೂಡಿತ್ತು. ಇದರಿಂದ ಮನನೊಂದಿದ್ದರಂತೆ ಪುನೀತ್​, ಬ್ಯುಸಿನೆಸ್ ಹಾಗೂ ಪ್ರಾಪರ್ಟಿಗಾಗಿ ಗಂಡ ಹೆಂಡತಿಯ ನಡುವೆ ಆಗಾಗ ಜಗಳವಾಗುತ್ತಿಂತೆ. ಇದರ ಬಗ್ಗೆ 16 ನಿಮಿಷದ ಆಡಿಯೋ ಕೂಡ ಬಹಿರಂಗವಾಗಿದೆ.
ನಾವು ಡಿವೋರ್ಸ್ ಪಡೆಯತ್ತಿದ್ದೇವೆ ನಿಜ, ಆದ್ರೆ ನಾನು ಇನ್ನೂ ಬ್ಯುಸಿನೆಸ್ ಪಾರ್ಟನರ್ ಹೀಗಾಗಿ ನೀನು ನನ್ನ ಬಾಕಿ ಹಣವನ್ನು ನೀಡಬೇಕೆಂದು ಆಡಿಯೋದಲ್ಲಿ ಪತ್ನಿ ಮಣಿಕಾ ಹೇಳಿರುವ ಆಡಿಯೋ ಸದ್ಯ ಬಹಿರಂಗವಾಗಿದೆ. ಪತಿ ಪತ್ನಿಯ ಆಡಿಯೋ ವಶಕ್ಕೆ ಪಡೆದಿರುವ ಪೊಲೀಸರು ಮೃತ ಪುನೀತ್ ಖುರಾನಾ ಮೊಬೈಲ್​ನ್ನು ವಶಕ್ಕೆ ಪಡೆದಿರುವ ಪೊಲೀಸರು, ಪುನೀತ್ ಪತ್ನಿಯನ್ನು ವಿಚಾರಣೆಗೆ ಕರೆದಿದ್ದಾರೆ. ಆತುಲ್ ಸುಭಾಷ್ ಮಾದರಿಯಲ್ಲೇ ದೆಹಲಿಯಲ್ಲಿ ಪುನೀತ್ ಖುರಾನಾ ಕೂಡ ಜೀವ ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us