ಪ್ರಪೋಸಲ್​ನ್ನ ತಿರಸ್ಕರಿಸಿದ ಯುವತಿಗೆ ಪ್ರೇಮಿ ಮಾಡಿದ್ದೇನು? ವಿಡಿಯೋ ನೋಡಿದ್ರೆ ದಂಗಾಗಿ ಹೋಗ್ತೀರಾ?

author-image
Gopal Kulkarni
Updated On
ಪ್ರಪೋಸಲ್​ನ್ನ ತಿರಸ್ಕರಿಸಿದ ಯುವತಿಗೆ ಪ್ರೇಮಿ ಮಾಡಿದ್ದೇನು? ವಿಡಿಯೋ ನೋಡಿದ್ರೆ ದಂಗಾಗಿ ಹೋಗ್ತೀರಾ?
Advertisment
  • ಹುಡಗು ಮಾಡಿದ ಲವ್ ಪ್ರಪೋಸಲ್ ತಿರಸ್ಕರಿಸಿದ ಯುವತಿ
  • ಪ್ರಪೋಸ್ ತಿರಸ್ಕರಿಸಿದ್ದಕ್ಕೆ ಹುಡುಗ ಹುಡುಗಿಗೆ ಮಾಡಿದ್ದೇನು?
  • ಪೊಲೀಸರಿಂದ ಎಫ್​ಐಆರ್​ ದಾಖಲು, ತನಿಖೆಯೂ ಆರಂಭ

ಪ್ರೀತಿ ಮಾಡೋದು, ತನ್ನ ಪ್ರೀತಿಯನ್ನು ತನ್ನ ಪ್ರೇಮಿಗೆ ವಿಭಿನ್ನವಾಗಿ ವ್ಯಕ್ತಪಡಿಸೋದು ಇದು ವಯೋಸಹಜವಾದ ನಡೆಗಳು. ತಾನು ಪ್ರೀತಿಸಿದವಳು ತನ್ನನ್ನು ಪ್ರೀತಿಸಬೇಕು ಎಂಬ ದೃಷ್ಟಿಯಿಂದ ಮಾಡುವ ಪ್ರೇಮ ನಿವೇದನೆಗಳು ಕೊನೆಗೆ ಯಾವ ಹಂತಕ್ಕೆ ತಲುಪುತ್ತವೆ ಅನ್ನೋದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವೊಂದು ಈಗ ಸಾಕ್ಷಿಯಾಗಿದೆ.

ಉತ್ತರಪ್ರದೇಶದ ಅಮ್ರೋಹ್ ಜಿಲ್ಲೆಯ ಗುಜ್ರೌಲ್ ಬಳಿ ಒಂದು ಶಾಕಿಂಗ್ ಘಟನೆ ನಡೆದಿದೆ. ಒಬ್ಬ ಯುವಕ ಸಾರ್ವಜನಿಕವಾಗಿ ತನ್ನ ಗೆಳತಿಗೆ ಲವ್ ಪ್ರಪೋಸ್ ಮಾಡಿದ್ದಾನೆ. ಯಾವಾಗ ಅವಳು ಅವನ ನಿವೇದನೆಯನ್ನು ತಿರಸ್ಕರಿಸಿದಳೋ ಅವಳನ್ನು ಬಾಯಿಗೆ ಬಂದಂತೆ ನಿಂದಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಒಂದು ಘಟನೆಯ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಡುಗನ ವರ್ತನೆಗೆ ಜನರು ಛೀಮಾರಿ ಹಾಕುತ್ತಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ನೀಡಲು ಮುಂದಾದ ಪತ್ನಿ ವಿರುದ್ಧ ಪತಿ ಸೇಡು ಹೇಗಿತ್ತು? ದಂಡ ಕಟ್ಟಿ ಕಟ್ಟಿಯೇ ಸುಸ್ತಾದ ಹೆಂಡತಿ!

ಸದ್ಯ ವಿಡಿಯೋ ವೈರಲ್ ಆಗಿದ್ದು ಅಮ್ರೋಹ್ ಜಿಲ್ಲೆಯ ಪೊಲೀಸರ ಗಮನಕ್ಕೆ ಬಂದಿದ್ದು ಎಫ್​ಐಆರ್​ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆತನ ವಿರುದ್ಧ ಕಠಿಣ ಕ್ರಮ ಆಗಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಸ್ವೀಟ್ ಬಾಕ್ಸ್ ಜೊತೆ ಕಾರ್ ಬಳಿ ನಿಂತಿರುವ ಯುವಕ ಸ್ವೀಟ್​ನ್ನು ತನ್ನ ಗೆಳೆಯನಿಗೆ ತಿನಿಸಿ ಲವ್ ಪ್ರಪೋಸ್ ಮಾಡುತ್ತಾ ಆ ಹುಡುಗಿಗೂ ತಿನಿಸಲು ಹೋಗಿದ್ದಾನೆ. ಆಗ ಆ ಹುಡುಗಿ ಅದನ್ನು ನಿರಾಕರಿಸಿದ್ದಾಳೆ ಇದರಿಂದ ರೊಚ್ಚಿಗೆದ್ದ ಯುವಕ ಆಕೆಯನ್ನು ಬಾಯಿಗೆ ಬಂದಂತೆ ನಿಂದಿಸಿ ಸ್ವೀಟ್ ಬಾಕ್ಸ್ ತೆಗೆದು ಆಕೆಯ ಮೇಲೆ ಎಸೆದು ಹಲ್ಲೆ ಮಾಡಿದ್ದಾನೆ.


">February 8, 2025

ಇದರಿಂದ ಅವಮಾನಿತಗೊಂಡ ಯುವತಿ ಅಳುತ್ತಾ ಬಂದಿದ್ದಾಳೆ. ಆಮೇಲೆ ಅವಳ ಮೈಗೆ ಹತ್ತಿದ ಸ್ವೀಟ್​ನ ತುಣುಕುಗಳನ್ನು ಕೈಯಿಂದ ಜಾಡಿಸಿದ ಯುವಕ ಕಾರು ಏರಿ ವಾಪಸ್ ಹೋಗಿದ್ದಾನೆ. ಈ ಒಂದು ವಿಕೃತ ಮನಸ್ಥಿತಿಯ ಹುಡುಗನಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಸದ್ಯ ಪೊಲೀಸರು ಸಂತ್ರಸ್ತೆಯನ್ನು ಗುರುತಿಸಿದ್ದು. ಆಕೆಯಿಂದ ಹೇಳಿಕೆಯನ್ನು ಕೂಡ ಪಡೆದಿದ್ದು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment