/newsfirstlive-kannada/media/post_attachments/wp-content/uploads/2024/08/ramnagar.jpg)
ರಾಮನಗರ: ಚಿಕ್ಕಪ್ಪನೋರ್ವ ಅಣ್ಣನ ಮಗನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ರಸ್ತೆ ಬದಿಗೆ ತಂದು ದುಷ್ಕರ್ಮಿಗಳು ಬಿಸಾಡಿದ್ದಾರೆ.
ರಂಜಿತ್ ಕುಮಾರ್ (29) ಕೊಲೆಯಾದ ಯುವಕ. ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ತನ್ನ ಚಿಕ್ಕಪ್ಪ ನಾಗರಾಜು ಕುಟುಂಬದ ಜೊತೆ ಗಲಾಟೆ ಮಾಡಿಕೊಂಡಿದ್ದನು. ನಾಗರಾಜು ಪತ್ನಿ ಮಂಗಳಮ್ಮ, ಮಗ ಸುನೀಲ್ ಕುಮಾರ್ ಜೊತೆಗೆ ಗಲಾಟೆ ಮಾಡಿದ್ದನು.
ಇದನ್ನೂ ಓದಿ: ಅಂಗನವಾಡಿ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ.. 5 ವರ್ಷದ ಪುಟಾಣಿ ಸಾವು
ರಂಜಿತ್ ಕುಮಾರ್ಗೆ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ತಡ ರಾತ್ರಿ ಆರೋಪಿಗಳು ಪೊಲೀಸರ ಬಳಿ ಕೊಲೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಮೇಲಾಧಿಕಾರಿಗಳ ಕಿರುಕುಳ, 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ.. ಬ್ಯಾಂಕ್ ಅಧಿಕಾರಿ ನೇಣಿಗೆ ಶರಣು
ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ