newsfirstkannada.com

ಬರೀ 700 ರೂಪಾಯಿಗೆ SUV ಕೇಳಿದ ಬಾಲಕನಿಗೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ; ಏನದು?

Share :

Published February 2, 2024 at 12:26pm

Update February 2, 2024 at 12:29pm

    ಅಪ್ಪನ ಪರ್ಸ್‌ನಿಂದ 700 ರೂಪಾಯಿ ಕೊಟ್ಟು SUV ಕೇಳಿದ್ದ ಬಾಲಕ

    SUV 700 ಕಾರು ಖರೀದಿ ಮಾಡಬೇಕು ಎಂದಿದ್ದ ಚೀಕು ವಿಡಿಯೋ

    ಮಹೀಂದ್ರಾ ಚಕನ್ ಪ್ಲಾಂಟ್‌ಗೆ ಭೇಟಿ ನೀಡಿದ್ದ ಚೀಕು ಫುಲ್ ಖುಷಿ

ಪುಣೆ: ಅಪ್ಪನ ಪರ್ಸ್‌ನಿಂದ 700 ರೂಪಾಯಿ ನೋಟು ತೆಗೆದು ಮಹೀಂದ್ರಾ SUV 700 ಕಾರು ಖರೀದಿ ಮಾಡು ಅಂತ ಕೇಳಿದ್ದ ಚೀಕುಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಮಹೀಂದ್ರಾ ಗ್ರೂಪ್‌ ಕಂಪನಿಯ ಆನಂದ್ ಮಹೀಂದ್ರಾ ಚೀಕು ಖುಷಿಯನ್ನ ಡಬಲ್ ಮಾಡಿದ್ದಾರೆ.

ಬರೀ 700 ರೂಪಾಯಿಗೆ ಮಹಿಂದ್ರಾ SUV 700 ಕಾರು ಖರೀದಿ ಮಾಡಬೇಕು ಎಂದಿದ್ದ ಚೀಕು ವಿಡಿಯೋ ಸಖತ್‌ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ್ದ ಉದ್ಯಮಿ ಆನಂದ್ ಮಹೀಂದ್ರಾ ಮನಸಾರೆ ಮೆಚ್ಚಿಕೊಂಡಿದ್ದರು.

ಚೀಕು ಮುದ್ದಾದ ಮಾತಿಗೆ ಮಾರು ಹೋಗಿದ್ದ ಆನಂದ್ ಮಹೀಂದ್ರಾ ಅವರು ಬರೀ 700 ರೂಪಾಯಿಗೆ ಮಹೀಂದ್ರಾ SUV 700 ಕಾರು ಮಾರಾಟ ಮಾಡಿದ್ರೆ ದಿವಾಳಿ ಆಗುತ್ತೇನೆ ಎಂದು ಕಾಲೆಳೆದಿದ್ದರು. ಆದ್ರೀಗ ಈ ಪುಟ್ಟ ಪೋರನೇ ಮಹಿಂದ್ರಾ ಗ್ರೂಪ್‌ನ ಬ್ರಾಂಡ್‌ ಅಂಬಾಸಿಡರ್ ಆಗಿದ್ದಾನೆ.

ಉದ್ಯಮಿ ಆನಂದ್ ಮಹಿಂದ್ರಾ ಅವರು ಚೀಕು ಯಾದವ್‌ನನ್ನು ಪುಣೆಯ ತಮ್ಮ ಕಾರು ಉತ್ಪಾದನಾ ಪ್ಲಾಂಟ್‌ಗೆ ಆಹ್ವಾನ ನೀಡಿದ್ದಾರೆ. ಮಹೀಂದ್ರಾ ಚಕನ್ ಪ್ಲಾಂಟ್‌ಗೆ ಭೇಟಿ ನೀಡಿದ್ದ ಚೀಕು ಫುಲ್ ಖುಷಿಯಾಗಿ ಮಹೀಂದ್ರಾ ಕಾರಿನ ಬಗ್ಗೆ ತಿಳಿದುಕೊಂಡಿದ್ದಾನೆ. ಚೀಕು ತನ್ನ ತಂದೆಗೆ 700 ರೂಪಾಯಿ ಕೊಟ್ಟು ಮಹೀಂದ್ರಾ SUV 700 ಕಾರಿನಲ್ಲಿ ಸಖತ್ ಮಜಾ ಮಾಡಿದ್ದಾನೆ. ಚಕನ್ ಪ್ಲಾಂಟ್‌ಗೆ ಚೀಕು ಭೇಟಿ ಕೊಟ್ಟ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 700 ರೂಪಾಯಿಗೆ SUV ಕೇಳಿದ ಬಾಲಕನಿಗೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ; ಏನದು?

https://newsfirstlive.com/wp-content/uploads/2024/02/Mahindra-Suv-Car-1.jpg

Load More