ಕಲ್ಕಿ ಬುಜ್ಜಿ ಕಾರಿನ ಹಿಂದಿನ ಮಾಸ್ಟರ್​ ಮೈಂಡ್ ಇವರೇ! ಆನಂದ್ ಮಹೀಂದ್ರಾ ಪಾತ್ರವೇನು ಗೊತ್ತಾ?

author-image
Veena Gangani
Updated On
ಕಲ್ಕಿ ಬುಜ್ಜಿ ಕಾರಿನ ಹಿಂದಿನ ಮಾಸ್ಟರ್​ ಮೈಂಡ್ ಇವರೇ! ಆನಂದ್ ಮಹೀಂದ್ರಾ ಪಾತ್ರವೇನು ಗೊತ್ತಾ?
Advertisment
  • ಬಿಡುಗಡೆಗೂ ಮುನ್ನವೇ ಸಖತ್​ ಹೈಪ್ ಕ್ರಿಯೇಟ್‌ ಮಾಡಿದ ಕಲ್ಕಿ ಸಿನಿಮಾ
  • ಬಹುನಿರೀಕ್ಷಿತ ಕಲ್ಕಿ 2898 AD ಸಿನಿಮಾದಲ್ಲಿ ಮುಖ್ಯ ಆಕರ್ಷಣೆಯೇ ಬುಜ್ಜಿ ಕಾರು
  • ಇದೇ ಜೂನ್ 27ರಂದು ವಿಶ್ವದಾದ್ಯಂತ ರಿಲೀಸ್​ಗೆ ಸಿದ್ಧವಾದ ಕಲ್ಕಿ 2898 AD

ಬುಜ್ಜಿ.. ಬುಜ್ಜಿ.. ಜುಜ್ಜಿ.. ಇದೇ ಹೆಸರು ಈಗಂತೂ ಸಖತ್​ ಟ್ರೆಂಡಿಂಗ್​ನಲ್ಲಿದೆ. ಅಷ್ಟಕ್ಕೂ ಈ ಬುಜ್ಜಿ ಇಷ್ಟು ಏಕೆ ಟ್ರೆಂಡಿಂಗ್​ನಲ್ಲಿದೆ ಅಂತಾ ಸಾಕಷ್ಟು ಜನರು ಸರ್ಚ್​ ಮಾಡುತ್ತಿದ್ದಾರೆ. ಹೌದು, ಈ ಬುಜ್ಜಿ ಹೆಸರು ಸಖತ್ ಟ್ರೆಂಡಿಂಗ್​ನಲ್ಲಿ ಇರೋದಕ್ಕೆ ಮುಖ್ಯ ಕಾರಣವೇ ಕಲ್ಕಿ 2898 AD. ಡಾರ್ಲಿಂಗ್​ ಪ್ರಭಾಸ್ ಅಭಿನಯದ ಕಲ್ಕಿ 2898 AD ಪ್ರೇಕ್ಷಕರಲ್ಲಿ ಬಹುನಿರೀಕ್ಷೆ ಹುಟ್ಟು ಹಾಕುತ್ತಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್​ ಮೂಲಕ ಗಮನ ಸೆಳೆದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದೇ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್​ಗೆ ಸಿದ್ಧವಾಗಿದೆ. ಕನ್ನಡ, ‌ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಕಲ್ಕಿ 2898 AD ಸಿನಿಮಾ ಬಿಡುಗಡೆ ಆಗಲಿದೆ.

publive-image

ಇದನ್ನೂ ಓದಿ: Kalki Bujji Car: ಅಬ್ಬಬ್ಬಾ.. ಎಲ್ಲೆಲ್ಲೂ ಕಲ್ಕಿ ಬುಜ್ಜಿ ಕಾರಿನದ್ದೇ ಹವಾ.. ಇದರ ರೇಟ್ ಎಷ್ಟು? ನಿಮಗೂ ಬೇಕಾ?

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಮೇಕಿಂಗ್‌ನಿಂದ ಸಖತ್ ಹೈಪ್‌ ಕ್ರಿಯೇಟ್‌ ಮಾಡಿದೆ. ಕಲ್ಕಿ 2898 AD ಸಿನಿಮಾ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿ ಇದೆ. ಹೌದು, ಇದೇ ಜೂನ್ 27ರಂದು ಬಿಡುಗಡೆಯಾಗುವ ಕಲ್ಕಿ 2898 AD ಸಿನಿಮಾವು ದಿನ ಕಳೆದಂತೆ ಸಾಕಷ್ಟು ಹೈಪ್ ಕೂಡ ಕ್ರಿಯೇಟ್​ ಮಾಡುತ್ತಿದೆ. ಕೇವಲ ಹೈದರಾಬಾದ್​ ಮಾತ್ರವಲ್ಲದೇ ವಿಶ್ವದಾದ್ಯಂತ ಪ್ರಭಾಸ್​ ಸಿನಿಮಾದ ಕ್ರೇಜ್​ ಹುಟ್ಟಿಸುತ್ತಿದೆ. ಹೌದು ಕಲ್ಕಿ 2898 AD ಸಿನಿಮಾದ ಪ್ರಮುಖ ಆಕರ್ಷಣೆಯೇ ಬುಜ್ಜಿ ಕಾರು. ಈ ಬುಜ್ಜಿ ಕಾರು ಬಗ್ಗೆಯೇ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟು ಹಾಕುತ್ತಿದೆ ಎಂದರೆ ತಪ್ಪಾಗಲಾರದು.

publive-image

ಜುಜ್ಜಿ ಕಾರಿನ ವಿಶೇಷತೆ ಏನು?

ಕಲ್ಕಿ 2898 ಎಡಿ ಚಿತ್ರಕ್ಕಾಗಿ ಎಂಜಿನಿಯರ್ಸ್ ತುಂಬಾ ವಿಶೇಷವಾಗಿ ನಿರ್ಮಿಸಿದ ಕಾರು ಇದಾಗಿದೆ. ಮೂರು ಚಕ್ರವನ್ನು ಬುಜ್ಜಿ ಕಾರು ಹೊಂದಿದೆ. ಕಾರಿನ ಮುಂಭಾಗದಲ್ಲಿ 2 ಚಕ್ರಗಳಿದ್ದರೆ, ಹಿಂಭಾಗದಲ್ಲಿ ಒಂದು ಚಕ್ರವಿದೆ. ಈ ಕಾರಿಗೆ ಬೃಹತ್ ಗಾತ್ರದ ಚಕ್ರಗಳನ್ನು ಬಳಸಲಾಗಿದೆ. ಜೊತೆಗೆ ಪವರ್‌ಫುಲ್ ಎಂಜಿನ್ ಬಳಸಲಾಗಿದೆ. ಈ ಕಾರು ಬರೋಬ್ಬರಿ 6 ಟನ್ ತೂಕ ಹೊಂದಿದೆ. ಈ ಕಾರನ್ನು ಎಂಜಿನಿಯರ್ಸ್ ಮಾರ್ವಲಸ್ ಎಂದೇ ಕರೆಯುತ್ತಿದ್ದಾರೆ. ಈ ಬುಜ್ಜಿ ಕಾರಿಗೆ 18 ಗಂಟೆ ಚಾರ್ಚ್​ ಮಾಡಿದ್ರೆ 15 ಕಿಲೋ ಮೀಟರ್​ನಷ್ಟು ಚಲಿಸುತ್ತದೆ. ಈ ಕಾರು 47kWh ಬ್ಯಾಟರಿಯನ್ನು ಹೊಂದಿದೆ. ಮತ್ತೊಂದು ವಿಶೇಷ ಎಂದರೆ ಈ ಬುಜ್ಜಿ ಕಾರು ಮಡಚುವ ವಿನ್ಯಾಸವನ್ನು ಹೊಂದಿದೆ. ಜುಜ್ಜಿ ಕಾರು 6075 ಮಿಲಿ ಮೀಟರ್ ಉದ್ದ,  3,380 ಮಿಲಿ ಮೀಟರ್ ಅಗಲ 2186 ಮಿಲಿ ಮೀಟರ್ ಎತ್ತರವನ್ನು ಹೊಂದಿದೆ. ಇದನ್ನು ನೋಡಿದ ಜನರು ಈ ಕಾರನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬುಜ್ಜಿ ಕಾರಿನ ಬೆಲೆಯ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಮಾಡುತ್ತಿದ್ದಾರೆ. ಆದರೆ ಇದನ್ನು ಯಾರು ಕಂಡುಕೊಳ್ಳಲು ಆಗುವುದಿಲ್ಲ. ಏಕೆಂದರೆ ಇದಕ್ಕೆ ನಿಖರವಾದ ಬೆಲೆಯನ್ನು ನಿಗದಿ ಮಾಡಿಲ್ಲ. ಜೊತೆಗೆ ಈ ಬುಜ್ಜಿ ಕಾರನ್ನು ಸಿನಿಮಾ ಪ್ರಮೋಷನ್​ಗಾಗಿ ಮಾತ್ರ ಬಳಸಲಾಗುತ್ತಿದೆ.

publive-image

ಈ ಬುಜ್ಜಿ ಕಾರಿನ ಹಿಂದೆ ಇರೋ ಆನಂದ್ ಮಹೀಂದ್ರಾ ಪಾತ್ರವೇನು?

ಮಹೀಂದ್ರ ಮತ್ತು ಮಹೀಂದ್ರ ಗ್ರೂಪ್‌ನ ಮಾಲೀಕ ಉದ್ಯಮಿ ಆನಂದ್ ಮಹೀಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿ ಇರುತ್ತಾರೆ. ಅವರು ಕಳುಹಿಸುವ ಪೋಸ್ಟ್‌ಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮೊನ್ನೆ ಮೊನ್ನೆಯಷ್ಟೇ ಉದ್ಯಮಿ ಆನಂದ್ ಮಹೀಂದ್ರ ಅವರು ಕಲ್ಕಿ 2898 ಎಡಿ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬುಜ್ಜಿ ಕಾರನ್ನು ರೈಡ್ ಮಾಡಿದ್ದಾರೆ. ಅದರ ವೀಡಿಯೋವನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ. ಇನ್ನು, ವಿಶೇಷ ಎಂದರೆ ಈ ಬುಜ್ಜಿ ಕಾರಿನ ಹಿಂದಿನ ಚಕ್ರಗಳು ಮಹೀಂದ್ರಾ ತಂಡ ಮತ್ತು ಕೊಯಮತ್ತೂರಿನ ಜಯಮ್ ಆಟೋಮೋಟಿವ್ಸ್ ನಡುವಿನ ಸಹಯೋಗದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಬುಜ್ಜಿ ತಯಾರಿಕೆಯಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರು ಆನಂದ್ ಮಹೀಂದ್ರಾ ಅವರು ಸಹಾಯಕ್ಕಾಗಿ ಯೋಜನೆ ಪ್ರಾರಂಭಿಸಿದ್ದಾರೆ. ಇನ್ನು, ಟ್ವೀಟರ್​ ಖಾತೆಯಲ್ಲಿ ಚೆನ್ನೈನಲ್ಲಿರುವ ಮಹೀಂದ್ರಾ ರಿಸರ್ಚ್ ವ್ಯಾಲಿ ತಂಡವು "ಪವರ್‌ಟ್ರೇನ್ ಕಾನ್ಫಿಗರೇಶನ್, ಆರ್ಕಿಟೆಕ್ಚರ್ ಮತ್ತು ಕಾರ್ಯಕ್ಷಮತೆಯನ್ನು ಅನುಕರಿಸುವ ಮೂಲಕ ಫ್ಯೂಚರಿಸ್ಟಿಕ್ ವಾಹನದ ದೃಷ್ಟಿಯನ್ನು ಅರಿತುಕೊಳ್ಳಲು ಕಲ್ಕಿ ತಂಡಕ್ಕೆ ಸಹಾಯ ಮಾಡಿದೆ ಅಂತ ಬರೆದುಕೊಂಡಿದ್ದಾರೆ ಆನಂದ್ ಮಹೀಂದ್ರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment