/newsfirstlive-kannada/media/post_attachments/wp-content/uploads/2024/08/anant-ambani-.png)
ಜುಲೈ 12 ರಂದು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ದೇಶ ವಿದೇಶಗಳಿಂದ ಸ್ಟಾರ್ ನಟ ನಟಿಯರು, ರಾಜಕಾರಣಿಗಳು ಬಂದಿದ್ದರು.
ಇದನ್ನೂ ಓದಿ:ಸೋತಲ್ಲೇ ಗೆದ್ದಳು, ಬಿದ್ದಲ್ಲೇ ಎದ್ದಳು.. ಶಾ‘ಕಾರಿ ರಿಚರ್ಡ್ಸನ್ ಲೈಫ್ ಜರ್ನಿಯೇ ಥ್ರಿಲಿಂಗ್ ಸ್ಟೋರಿ; ತಪ್ಪದೇ ಓದಿ!
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡ ನಂತರ ತಮ್ಮ ಹನಿಮೂನ್‌ಗಾಗಿ ಕೋಸ್ಟ ರಿಕಾಗೆ (Costa Rica) ತೆರಳಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ದಂಪತಿ ಪ್ರಸ್ತುತ ಮಧ್ಯ ಅಮೆರಿಕದ ಸುಂದರ ದೇಶದಲ್ಲಿರುವ ಅಲ್ಟ್ರಾ ಐಷಾರಾಮಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಐಷಾರಾಮಿ ಫೋರ್ ಸೀಸನ್ಸ್ ರೆಸಾರ್ಟ್ ಕಾಸಾ ಲಾಸ್ ಓಲಾಸ್‌ನಲ್ಲಿ (Casa Las Olas) ನವ ದಂಪತಿ ತಂಗಿದ್ದಾರೆ. ಆ ರೆಸಾರ್ಟ್ ಪ್ರೀಮಿಯಂ ಸೌಕರ್ಯಗಳಿಗೆ ಹೆಸರು ವಾಸಿ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ಹನಿಮೂನ್‌ಗಾಗಿ ಆಯ್ಕೆ ಮಾಡಿಕೊಂಡಿರುವ ಐಷಾರಾಮಿ ರೂಮ್ಗೆ ಒಂದು ರಾತ್ರಿಗೆ ಬರೋಬ್ಬರಿ 31 ಲಕ್ಷ ರೂಪಾಯಂತೆ.
ಐಷಾರಾಮಿ ಫೋರ್ ಸೀಸನ್ಸ್ ರೆಸಾರ್ಟ್ ಕಾಸಾ ಲಾಸ್ ಓಲಾಸ್ ತುಂಬಾ ವಿಶಾಲವಾದ ಸ್ಥಳವನ್ನು ಹೊಂದಿದೆ. ಅದರ ಐಷಾರಾಮಿ ರೆಸಾರ್ಟ್ ಸುತ್ತ ಮುತ್ತ ತಾಳೆ ಮರಗಳಿವೆ. ಒಂದು ರೀತಿಯಲ್ಲಿ ಆ ರೆಸಾರ್ಟ್ ನೋಡಲು ತುಂಬಾ ಸುಂದರವಾಗಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಈ ರೆಸಾರ್ಟ್ ಆಯ್ಕೆ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ