/newsfirstlive-kannada/media/post_attachments/wp-content/uploads/2024/07/radika3.jpg)
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ 7 ದಿನಗಳು ಬಾಕಿ ಉಳಿದಿವೆ. ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!
ಮೊನ್ನೆಯಷ್ಟೇ ಅನಂತ್ ಹಾಗೂ ರಾಧಿಕಾ ಮದುವೆ ಹತ್ತಿರವಾಗುತ್ತಿದ್ದಂತೆ ಅಂಬಾನಿ ಕುಟುಂಬಸ್ಥರು ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿದ್ದರು. ಮುಂಬೈನಿಂದ 100 ಕಿಮೀ ದೂರದಲ್ಲಿರುವ ಪಾಲ್ಟರ್ ಪ್ರದೇಶದಲ್ಲಿನ 50ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದರು. ಇದೀಗ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಅನಂತ್ ಹಾಗೂ ಕಾಧಿಕಾ ಅವರ ಮದುವೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜೊತೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಗೆ ದೇಶ ವಿದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ.
View this post on Instagram
ಇದರ ಮಧ್ಯೆ ಮುಕೇಶ್ ಅಂಬಾನಿ ಅವರ ನಿವಾಸದಲ್ಲಿ ಗ್ರ್ಯಾಂಡ್ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ನೃತ್ಯ ಕಾರ್ಯಕ್ರಮವನ್ನು ಅನಂತ್ ಅಂಬಾನಿ ಅವರ ಅಜ್ಜಿ ಕೋಕಿಲಾಬೆನ್ ಅಂಬಾನಿ ಆಯೋಜಿಸಿದ್ದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನುಷಿ ಛಿಲ್ಲರ್, ಮೀಜಾನ್ ಜಾಫ್ರಿ, ಶಿಖರ್ ಮತ್ತು ವೀರ್ ಪಹಾರಿಯಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.
View this post on Instagram
ದಾಂಡಿಯಾ ರಾತ್ರಿಯ ದೃಶ್ಯಗಳು ಹಾಗೂ ಈವೆಂಟ್‌ನ ಅಲಂಕಾರ ಮತ್ತು ವಧು, ವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಜೊತೆಗೆ ಆ ಕಾರ್ಯಕ್ರಮದಲ್ಲಿ ರಾಧಾ ಕೃಷ್ಣನ ಮೂರು ವಿಗ್ರಹಗಳನ್ನು ಇರಿಸಲಾಗಿದೆ. ಈ ಈವೆಂಟ್‌ನಲ್ಲಿ ನೆರೆದಿದ್ದವರ ಡ್ರೆಸ್ ಕೋಡ್ ನೋಡುಗರ ಕಣ್ಮನ ಸೆಳೆಯುತ್ತಿತ್ತು.
ಇದನ್ನೂ ಓದಿ: ಇಂಗ್ಲೆಂಡ್ ನೂತನ ಪ್ರಧಾನಿ ಕೀರ್ ಸ್ಟಾರ್ಮರ್.. ಯಾರು ಈ ಕಾರ್ಮಿಕ ನಾಯಕ? ಇವರ ಹಿನ್ನೆಲೆ ಏನು?
ಅದರಲ್ಲೂ ವಧು ರಾಧಿಕಾ ಮರ್ಚೆಂಟ್ ಬಂಧನಿ ದುಪಟ್ಟಾದೊಂದಿಗೆ ಸುಂದರವಾದ ನೇರಳೆ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಇದೇ ವೇಳೆ ವರ ಅನಂತ್ ಅಂಬಾನಿ ಹೂವಿನ ಮುದ್ರಿತ ಮೃದುವಾದ ಗುಲಾಬಿ ಬಣ್ಣದ ಕುರ್ತಾ ಸೆಟ್ ಧರಿಸಿದ್ದರು. ಈವೆಂಟ್‌ನಲ್ಲಿ ಪ್ರದರ್ಶನ ನೀಡಿದ ಕೋಕಿಲಾಬೆನ್ ಅಂಬಾನಿ ಮತ್ತು ಶಾಸ್ತ್ರೀಯ ನೃತ್ಯಗಾರರ ಗುಂಪಿನೊಂದಿಗೆ ದಂಪತಿಗಳು ಫೋಟೋಗೆ ಪೋಸ್ ನೀಡುತ್ತಿರೋ ವಿಡಿಯೋಗಳು ವೈರಲ್ ಆಗಿವೆ. ಇವರು ಹಾಕೋ ಮದುವೆ ಬಟ್ಟೆಗಳ ಬೆಲೆ ಲಕ್ಷಾಂತರ ರೂ. ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ